ಕೋವಿಡ್ ಸಂದರ್ಭದಲ್ಲಿ ಮಾನವೀಯತೆಯಿಂದ ಕೆಲಸ ಮಾಡ ಬೇಕಿದ್ದ ಸರ್ಕಾರ ಲೂಟಿ ಮಾಡಿದೆ; ಸಚಿವ ಎಂ.ಬಿ ಪಾಟೀಲ್

ಬೆಂಗಳೂರು: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ʼಕೋವಿಡ್ ಸಂದರ್ಭದಲ್ಲಿ ಮಾನವೀಯತೆಯಿಂದ ಕೆಲಸ ಮಾಡ ಬೇಕಿದ್ದ ಸರ್ಕಾರ ಲೂಟಿ ಮಾಡಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಬಿ ಪಾಟೀಲ್ ಅವರು, ʼಕೋವಿಡ್ ಸಂದರ್ಭದಲ್ಲಿ ಅಂದಿನ ಸರ್ಕಾರ ಸಾವಿರಾರು ಕೋಟಿ ರೂ.ಲೂಟಿ ಮಾಡಿದೆ. ಆ ವೇಳೆಯೇ ನಮ್ಮ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ  ನಾವು ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ ಕೊಟ್ಟಿದ್ದೇವೆ. ಅದು ನಮ್ಮ ಜವಾಬ್ದಾರಿ ಕಳಪೆ ಮಟ್ಟದ ಉಪಕರಣಗಳ ಬಳಕೆ ಮಾಡಿದ್ದಾರೆ. ಸಾವು-ನೋವಿನ ಸಂದರ್ಭದಲ್ಲಿಯೂ ಲೂಟಿ ಮಾಡುವುದು ಸರಿಯಲ್ಲʼ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನು ಓದಿ : ಹಾಸ್ಟೆಲ್ ನಲ್ಲಿ ಸಮಸ್ಯೆ ಸೃಷ್ಟಿಸಿರುವ ವಾರ್ಡನ್ ಅಮಾನತ್ತಿಗೆ ಎಸ್ಎಫ್ಐ ಆಗ್ರಹ

ಸರ್ಕಾರ ಫಿಕ್ಸ್ ಮಾಡಿದ ಹಣಕ್ಕಿಂತ ನಮ್ಮ ಮೆಡಿಕಲ್ ಆಸ್ಪತ್ರೆಯಲ್ಲಿ ಕಡಿಮೆ ಬೆಲೆಗೆ ಮಾಡಿದ್ದೇವೆ. ನಾವು ಒಂದು ಸಾವಿರಕ್ಕೆ ಗುಣಮಟ್ಟದ ಪಿಪಿಇ ಕಿಟ್ (PPE Kit) ಗಳನ್ನು ನೀಡಿದ್ದೇವು. ಆದರೆ ಸರ್ಕಾರ ಕಳಪೆ ಮಟ್ಟದ 150 ರೂ. ದನ್ನು ನಾಲ್ಕು ಪಟ್ಟು ಜಾಸ್ತಿ ದುಡ್ಡು ಕೊಟ್ಟು ಪಿಪಿಇ ಕಿಟ್‌ಗಳನ್ನು ಖರೀದಿಸಿದೆ. ಹೀಗೆ ಮಾನವೀಯತೆ ಬಿಟ್ಟು ಲೂಟಿ ಮಾಡಿದ ಸರ್ಕಾರವದು ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಈ ಹಗರಣದಲ್ಲಿ ಡಾ.ಕೆ ಸುಧಾಕರ್ (Dr K Sudhakar) ಭಾಗಿಯಾಗಿರುವುದು ಸತ್ಯವಾಗಿದೆ. ಕ್ಯಾಬಿನೆಟ್ ಅನುಮತಿ ಇಲ್ಲದೇ ಬಹಳ ಭ್ರಷ್ಟಾಚಾರ ಮಾಡಿದ್ದಾರೆ. ಬಿಟ್ ಕಾಯಿನ್ ಮಾತ್ರವಲ್ಲ ಎಲ್ಲಾ ಹಗರಣಗಳ ತನಿಖೆ ಆಗಬೇಕು. ಎಲ್ಲವನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಹೇಳಿದ್ದಾರೆ.

ಇದನ್ನು ನೋಡಿ : ಭವ್ಯಾ ನರಸಿಂಹ ಮೂರ್ತಿ – ಕಾಂಗ್ರೆಸ್ ಯುವ ನಾಯಕರುJanashakthi Media

Donate Janashakthi Media

Leave a Reply

Your email address will not be published. Required fields are marked *