ಶಿವಮೊಗ್ಗ: ತಮ್ಮ ಪುತ್ರನಿಗೆ ಬಿಜೆಪಿ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡದಿದ್ದಕ್ಕೆ ಅಸಮಾಧಾನಗೊಂಡಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಬಂಡಾಯ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದಾರೆ. ಬಂಡಾಯ ಅಭ್ಯರ್ಥಿ
ಈ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಈ ಚುನಾವಣೆಯಲ್ಲಿ ನೂರಕ್ಕೆ ನೂರು ಗೆಲ್ಲುತ್ತೇನೆ. ನಾಳೆ (ಶುಕ್ರವಾರ) 10 ಗಂಟೆಗೆ ನಾಮಪತ್ರ ಸಲ್ಲಿಕೆಗೆ ಮೆರವಣಿಗೆ ನಡೆಸುತ್ತೇನೆ. ಸಾಮಾನ್ಯ ಕಾರ್ಯಕರ್ತ, ಮತದಾರರೇ ನನಗೆ ಸ್ಟಾರ್ ಪ್ರಚಾರಕರು. ನಾನು ಬಿಜೆಪಿ ಶುದ್ದೀಕರಣ ಆಗಬೇಕು ಅಂತಾ ಹೊರಗೆ ಬಂದು ಹೋರಾಟ ಮಾಡ್ತಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರು ಅನೇಕರು ನೇರವಾಗಿ ಬೆಂಬಲ ಕೊಡ್ತಿದ್ದಾರೆ. ಗೆಲ್ಲಿಸುವ ದಿಕ್ಕಿನಲ್ಲಿ ಪ್ರಯತ್ನ ಮಾಡ್ತೇವೆ ಅಂತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ನವರು ಬೆಂಬಲ ಕೊಡ್ತಿದ್ದಾರೆ. ಕಾಂಗ್ರೆಸ್ ಕ್ಯಾಂಡಿಡೇಟು ವೀಕ್ ಅದಕ್ಕೆ ನಿಮಗೆ ಬೆಂಬಲ ಕೊಡ್ತೀವಿ ಅಂತಿದ್ದಾರೆ. ನಾಳೆ ಎಲ್ಲರೂ ನಾಮಪತ್ರ ಸಲ್ಲಿಸಲು ಬರುತ್ತಿದ್ದಾರೆ. ಇಷ್ಟರಮಟ್ಟಿಗೆ ಬೆಂಬಲ ಸಿಗುತ್ತದೆ ಅಂತಾ ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ಈಶ್ವರಪ್ಪ ಹೇಳಿದರು. ಬಂಡಾಯ ಅಭ್ಯರ್ಥಿ
ನನ್ನ ಅಭಿಮಾನಿಗಳು ನಿರೀಕ್ಷೆ ಮೀರಿ ಕೆಲಸ ಮಾಡ್ತಿದ್ದಾರೆ. ಸೋಲಿನ ಭಯದಲ್ಲಿ ಅಪಪ್ರಚಾರ ಆಗ್ತಿದೆ. ಈಶ್ವರಪ್ಪ ವಾಪಸ್ ತಗೋತಾರೆ ಯಾಕೆ ಬೆಂಬಲ ಕೊಡ್ತೀರಾ ಅಂತಿದ್ದಾರೆ. ಅಪಪ್ರಚಾರಕ್ಕೆ ಕಾರ್ಯಕರ್ತರು ಕಿವಿಗೊಡಬಾರದು. ನಾನು ನಿಂತೇ ನಿಲ್ಲುತ್ತೇನೆ ಇದರಲ್ಲಿ ಯಾವುದೇ ಅನುಮಾನ ಇಲ್ಲ. ವ್ಯವಸ್ಥಿತವಾಗಿ ಚುನಾವಣಾ ಪ್ರಚಾರ ಆಗ್ತಿದೆ ಎಂದು ವಾಗ್ದಾಳಿ ನಡೆಸಿದರು.
ದಲಿತರು, ಹಿಂದುಳಿದವರು ನನಗೆ ಬೆಂಬಲ ಕೊಡಲು ತೀರ್ಮಾನಿಸಿದ್ದಾರೆ. ಮುಂದುವರಿದ ಜನಾಂಗವು ಬೆಂಬಲಿಸುತ್ತಿದೆ. ತಮಗೆ ಬೇಕಾದವರಿಗೆ ಟಿಕೆಟ್ ಕೊಟ್ಟಿದ್ದಾರೆ ಅಂತಿದ್ದಾರೆ. ಪ್ರಖರ ಹಿಂದುತ್ವವಾದಿಗಳಿಗೆ ಟಿಕೆಟ್ ಕೊಟ್ಟಿಲ್ಲ . ಸಿ.ಟಿ.ರವಿ, ಪ್ರತಾಪ್ ಸಿಂಹ ಒಂದು ರಾಜಕೀಯ ಪಕ್ಷದಲ್ಲಿ ಇದ್ದಾರೆ. ಅವರು ಪಕ್ಷದಲ್ಲಿದ್ದುಕೊಂಡು ಏನು ಮಾಡಬೇಕೋ ಅದನ್ನು ಮಾಡ್ತಿದ್ದಾರೆ ಎಂದರು.
ಇದನ್ನು ನೋಡಿ : ಹತ್ತು ವರ್ಷ ಸುಳ್ಳಿಗೆ ಮರುಳಾಗಿದ್ದು ಸಾಕು! ಇನ್ನಾದರೂ ಯೋಚಿಸಿ, ಮತ ಚಲಾಯಿಸಿ – ಜಾಣಗೆರೆ ವೆಂಕಟರಾಮಯ್ಯ