ಬೈಕ್ ಗೆ ಮೈನಿಂಗ್ ಲಾರಿ ಡಿಕ್ಕಿ, ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು

ಬಳ್ಳಾರಿ: ಬೈಕ್ ಗೆ ಮೈನಿಂಗ್ ಲಾರಿ ಡಿಕ್ಕಿಯಾಗಿ, ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆ ಸಂಡೂರ ತಾಲೂಕಿನ ಕಲ್ಲಳ್ಳಿ ಗ್ರಾಮದ ಬಳಿ ನಡೆದಿದೆ.

ಇದನ್ನೂ ಓದಿ:-ಸತ್ಯವನ್ನು ಪಂಚ್ ಡೈಲಾಗ್‌ನೊಂದಿಗೆ ಪ್ರಸ್ತುತಪಡಿಸುವುದೆ ಸ್ಟ್ಯಾಂಡ್-ಅಪ್ ಕಾಮಿಡಿ

ಬೈಕ್ ಸವಾರರು ಹೊಸಪೇಟೆ ಕಡೆಯಿಂದ ಸಂಡೂರಿಗೆ ಹೊರಟಿದ್ರು. ಈ ವೇಳೆ ಬೈಕ್ ಗೆ ಏಕಾಏಕಿ ಮೈನಿಂಗ್ ಲಾರಿ ಡಿಕ್ಕಿಯಾಗಿ ಶ್ರೀನಿವಾಸ (34), ನಾರಾಯಣ (36) ಮೃತಪಟ್ಟಿದ್ದಾರೆ.

ಇದನ್ನೂ ಓದಿ:-ಬಳ್ಳಾರಿ| ಕುಡಿಯುವ ನೀರಿನ ಕೊರತೆ: ನದಿಗಳಲ್ಲಿಯೇ ಬೋರ್‌ವೆಲ್

ಶ್ರೀನಿವಾಸ ಹಾಗೂ ನಾರಾಯಣ ಕೆಲಸಕ್ಕೆಂದು ಸಂಡೂರಿಗೆ ಹೊರಟಿದ್ರು. ಈ ವೇಳೆ ಎದುರುಗಡೆ ಬಂದ ಮೈನಿಂಗ್ ಲಾರಿ ಡಿಕ್ಕಿಯಾಗಿದೆ. ಲಾರಿ ಡಿಕ್ಕಿಯ ರಭಸಕ್ಕೆ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿವೆ. ಘಟನಾ ಸ್ಥಳಕ್ಕೆ ಸಂಡೂರು ಪೋಲಿಸ‌ರ ಭೇಟಿ ಪರಿಶೀಲನೆ ನಡೆಸಿದ್ದು, ಸಂಡೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Donate Janashakthi Media

Leave a Reply

Your email address will not be published. Required fields are marked *