ಮೈಕೋ ಕಾರ್ಮಿಕ ಸಂಘದ ಚುನಾವಣೆಯಲ್ಲಿ ಸಿಐಟಿಯು ಬೆಂಬಲಿತ ಆನೆ ತಂಡ ಗೆಲುವು

ಬೆಂಗಳೂರು: ಬಾಷ್‌ (ಮೈಕೋ) ಕಂಪನಿಯಲ್ಲಿ ಆಗಸ್ಟ್‌ 05ರಂದು ನಡೆದ ಮೈಕೋ ಎಂಪ್ಲಾಯೀಸ್‌ ಅಸೋಶಿಯೇಷನ್‌ (ಎಂಇಎ) ಕಾರ್ಮಿಕ ಸಂಘದ ಚುನಾವಣೆಯಲ್ಲಿ ಸಿಐಟಿಯು ಬೆಂಬಲಿತ ಆನೆ ತಂಡ ಅಭೂತಪೂರ್ವ ಗೆಲುವು ಸಾಧಿಸಿದೆ.

ಆನೆ ತಂಡದಿಂದ ಸ್ಪರ್ಧಿಸಿದ್ದ ವಿಜೆಕೆ ನಾಯರ್‌ ಪರವಾಗಿ ಆಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶೇಷಾದ್ರಿ ಎಸ್.‌, ಉಪಾಧ್ಯಕ್ಷರಾಗಿ ಸೋಮಶೇಖರ್‌ ರೆಡ್ಡಿ. ಬಿ.ಆರ್‌. ಮತ್ತು ಅನಿಲ್‌ಕುಮಾರ್‌ ಬಿ.ಪಿ., ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ ಆರ್‌.(ವಿಆರ್‌ಎಲ್‌), ಸಂಘಟನಾ ಕಾರ್ಯದರ್ಶಿಯಾಗಿ ಅನ್ಬಳಗನ್‌ ಎನ್‌., ಸಹ ಕಾರ್ಯದರ್ಶಿಯಾಗಿ ಆನಂದ ಬಿ.ಕೆ., ಖಜಾಂಚಿಯಾಗಿ ಶಂಕರ್‌ ಪಾಟೀಲ್‌ ಗೆಲುವು ಸಾಧಿಸಿದ್ದಾರೆ.

ಇದನ್ನು ಓದಿ: ಬಾಷ್‌ ಕಂಪನಿ: ಕಾರ್ಮಿಕರ ಮಧ್ಯೆ ಸಿಐಟಿಯು ಬೆಂಬಲಿತ ಆನೆ ತಂಡದ ಭರ್ಜರಿ ಪ್ರಚಾರ

ಕ್ಯಾಂಟೀನ್‌ ಸಮಿತಿ ಸದಸ್ಯರಾಗಿ ವೀರೇಂದ್ರ ಕುಮಾರ್‌ ಜಿ. ಹಾಗೂ ರಿತೇಶ್‌ ಎಸ್‌.ಟಿ. ಅವರು ಸಹ ಗೆಲುವು ಸಾಧಿಸಿದ್ದಾರೆ. ಕಾರ್ಯಕಾರಿ ಸಮಿತಿಯ 18 ಸ್ಥಾನಗಳಲ್ಲಿ 13 ಸ್ಥಾನಗಳು ಹಾಗೂ 25 ಜನರಲ್‌ ಕೌನ್ಸಿಲ್‌ ಸ್ಥಾನಗಳಲ್ಲಿ 15 ಸ್ಥಾನಗಳು ಸಿಐಟಿಯು ಗೆದ್ದಿದೆ.

ಚುನಾವಣಾ ಕಣದಲ್ಲಿ ಜಿಂಕೆ ತಂಡದ ಪರವಾಗಿ ಸ್ಪರ್ಧಿಸಿದ್ದ ಬಿಜೆಪಿ ಪಕ್ಷದ ಕುಣಿಗಲ್‌ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸುರೇಶ್‌ಗೌಡ ಮತ್ತು ಪಂಜು ತಂಡದಿಂದ ಎಐಟಿಯುಸಿಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ವಿಜಯಭಾಸ್ಕರ್‌ ನೇತೃತ್ವದ ತಂಡದ ಎಲ್ಲಾ ಪದಾಧಿಕಾರಿಗಳು ಸೋಲು ಅನುಭವಿಸಿದ್ದಾರೆ.

ಮತ ವಿವರ (ಒಟ್ಟು ಮತದಾರರು 1076)

ಶೇಷಾದ್ರಿ ಎಸ್. – 512
ಸೋಮಶೇಖರ್‌ ರೆಡ್ಡಿ ಬಿ.ಆರ್‌. – 557
ಅನಿಲ್‌ಕುಮಾರ್‌ ಬಿ.ಪಿ. -529
ಮಂಜುನಾಥ ಆರ್‌.(ವಿಆರ್‌ಎಲ್‌) – 536
ಅನ್ಬಳಗನ್‌ ಎನ್‌. – 515
ಆನಂದ ಬಿ.ಕೆ. – 515
ಶಂಕರ್‌ ಪಾಟೀಲ್‌ – 505

Donate Janashakthi Media

Leave a Reply

Your email address will not be published. Required fields are marked *