ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ರೈಲ್ವೇ ನಿಲ್ದಾಣದಲ್ಲಿ ಮೆಮೊ ರೈಲು ನಿಲುಗಡೆ ನೀಡಬೇಕೆಂದು ಆಗ್ರಹಿಸಿ ರೈಲು ತಡೆ ಪ್ರತಿಭಟನೆ ನಡೆದಿದ್ದು, ಈ ಪ್ರತಿಭಟನೆಯಲ್ಲಿ ಪದ್ಮಶ್ರೀ ಪುರಸ್ಕೃತರಾದ ಸುಕ್ರಜ್ಜಿ ಮತ್ತು ತುಳಸಜ್ಜಿ ಪಾಲ್ಗೊಂಡರು.
ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಲಾಕ್‌ಡೌನ್ ಹೇರಿಕೆಗೂ ಮುನ್ನಾ ಕೊಂಕಣ ಮಾರ್ಗದಲ್ಲಿ ಸಂಚರಿಸುವ ಗೋವಾದ ಮಡಗಾಂವ್ನಿಂದ ಮಂಗಳೂರಿಗೆ ಮೆಮೊ ರೈಲು ಹಾರವಾಡ ರೈಲ್ವೇ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗುತ್ತಿತ್ತು.
ಇದನ್ನು ಓದಿ: ದೀರ್ಘಾವಧಿಯವರೆಗೆ ರೈಲ್ವೆ ಭೂಮಿ ಗುತ್ತಿಗೆ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ
ಲಾಕ್‌ಡೌನ್ ಸ್ಥಗಿತಗೊಂಡಿದ್ದ ಗೋವಾ ರಾಜ್ಯದ ಮಡಗಾಂವ್ ನಿಂದ ಮಂಗಳೂರು ನಡುವೆ ಸಂಚರಿಸುವ ಮೆಮೊ ರೈಲು ಇದೀಗ ಪುನರಾರಂಭವಾಗಿದೆ. ಆದರೆ, ಈಗ ಎಲ್ಲ ಯಥಾಸ್ಥಿತಿಗೆ ಮರಳಿದರೂ ಸಹ ರೈಲ್ವೇ ಇಲಾಖೆ ಹಾರವಾಡದಲ್ಲಿ ರೈಲು ನಿಲುಗಡೆಗೆ ರೈಲ್ವೇ ಇಲಾಖೆ ನಿರಾಕಿರಿಸಿದೆ. ಹೀಗಾಗಿ ಇಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಾರ್ಗವು ಸಂಪೂರ್ಣ ವಿದ್ಯುತ್ ಕರಣಗೊಂಡ ಬಳಿಕ ಮುಖ್ಯ ಮಾರ್ಗದಲ್ಲಿ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ ಓಡಾಟ ಪ್ರಾರಂಭಿಸುವಂತೆ ಪ್ರಯಾಣಿಕರ ಒತ್ತಾಯಿಸಿದರು, ಕಾರವಾರದಿಂದ ಮಂಗಳೂರು ಉಡುಪಿ ಆಸ್ಪತ್ರೆಗಳಿಗೆ ತೆರಳುವವರಿಗೆ ಅನುಕೂಲವಾಗಲಿದೆ ಎಂಬುದು ಜನರ ಒತ್ತಾಯವಾಗಿತ್ತು.
ರೈಲ್ವೇ ಇಲಾಖೆಯ ನೀತಿಯನ್ನು ಖಂಡಿಸಿ ಇಂದು ಹಾರವಾಡ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿ ರೈಲ್ವೇ ನಿಲುಗಡೆಗೆ ಆಗ್ರಹಿಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ