ನವದೆಹಲಿ: ಭಾರತದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ, ಭಾರತದ ನಂ.1 ಸುಸ್ತಿದಾರ, ದೇಶಭ್ರಷ್ಟ ವಜ್ರ ವ್ಯಾಪಾರಿ, ಗೀತಾಂಜಲಿ ಸಮೂಹದ ಮೆಹುಲ್ ಚೋಕ್ಸಿ ನಾಪತ್ತೆಯಾಗಿದ್ದರು. ಆ್ಯಂಟಿಗುವಾದಲ್ಲಿ ನೆಲೆಸಿದ್ದ ಚೋಕ್ಸಿ ಅಲ್ಲಿಯೂ ನಾಪತ್ತೆಯಾಗಿರುವ ಪ್ರಕರಣ ಇಂದು ಬೆಳಕಿಗೆ ಬಂದಿದೆ.
ನಾಪತ್ತೆಯಾಗಿರುವ 63 ವರ್ಷ ವಯಸ್ಸಿನ ಮೆಹುಲ್ ಚೋಕ್ಸಿಯನ್ನು ಹುಡುಕಲು ಸಾಕಷ್ಟು ಪ್ರದೇಶಗಲ್ಲಿ ಶೋಧ ನಡೆಸಲಾಗಿದೆ. ಆದರೆ, ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಆ್ಯಂಟಿಗುವಾ ಪೊಲೀಸರು ತಿಳಿಸಿದ್ದಾರೆ. ಆ್ಯಂಟಿಗುವಾ ಪೊಲೀಸ್ ಆಯುಕ್ತ ಅಟ್ಲೀ ರೊಡ್ನಿಸ ಅವರು, ‘ಸ್ಥಳೀಯ ಪೊಲೀಸರು ಕೂಡ ಚೋಕ್ಸಿ ಕಾಣೆಯಾಗಿರುವ ಕುರಿತು ದೃಢಪಡಿಸಿದ್ದಾರೆ. ಚೋಕ್ಸಿಯನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದು, ಸಾಕಷ್ಟು ಪ್ರದೇಶಗಳಲ್ಲಿ ಶೋಧನೆ ನಡೆಸಲಾಗುತ್ತಿದೆ. ಆದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: ನೂರರ ಸಮೀಪ ಪೆಟ್ರೋಲ್ ಬೆಲೆ: ಮೇ 4ರ ನಂತರ 13 ಬಾರಿ ದರ ಏರಿಕೆ
ಅವರ ವಾಹನವನ್ನು ಸೋಮವಾರ ಸಂಜೆ ಜಾಲಿ ಹಾರ್ಬರ್‌ನಲ್ಲಿ ಪತ್ತೆ ಮಾಡಲಾಗಿದೆ. ಆದರೆ ಚೋಕ್ಸಿ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಆಂಟಿಗುವಾನ್ ಸುದ್ದಿ ವಾಹಿನಿಗಳು ವರದಿ ಮಾಡಿವೆ.
ಚೋಕ್ಸಿ ಕೊನೆಯ ಬಾರಿಗೆ ಭಾನುವಾರ ಸಂಜೆ 5.15ರ ಹೊತ್ತಿನಲ್ಲಿ ತಮ್ಮ ಮನೆಯಿಂದ ಹೊರಗೆ ಕಾರಿನಲ್ಲಿ ತೆರಳಿದ್ದರು. ಈ ಕುರಿತು ಸ್ಥಳೀಯ ಪೊಲೀಸರು ಸ್ಥಳೀಯರ ವಿಚಾರಣೆ ನಡೆಸಿದ್ದಾರೆ. ಅಂತೆಯೇ ಚೋಕ್ಸಿ ಕುರಿತು ಯಾವುದೇ ಮಾಹಿತಿ ಲಭ್ಯವಾದರೂ ಜಾನ್ಸನ್ ಪಾಯಿಂಟ್ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ಆ್ಯಂಟಿಗುವಾದ ಕ್ರಿಮಿನಲ್ ತನಿಖಾ ದಳದವು ತನಿಖೆಯನ್ನು ಕೈಗೊಂಡಿದೆ ಎನ್ನಲಾಗಿದೆ.
ಕೆರಿಬಿಯನ್ ರಾಷ್ಟ್ರ ಆ್ಯಂಟಿಗುವಾದ ಪೌರತ್ವ ಪಡೆದಿರುವ ಮೆಹುಲ್ ಚೋಕ್ಸಿ ಭಾನುವಾರದಿಂದ ನಾಪತ್ತೆಯಾಗಿದ್ದಾರೆ. ಆತನ ಕುಟುಂಬ ಮತ್ತು ಸ್ಥಳೀಯ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ವಕೀಲ ವಿಜಯ್ ಅಗರ್ವಾಲ್ ಹೇಳಿದ್ದಾರೆ.
ಮೆಹುಲ್ ಚೋಕ್ಸಿ ಸೋಮವಾರ ಸಂಜೆ ದ್ವೀಪದ ದಕ್ಷಿಣ ಭಾಗದಲ್ಲಿರುವ ಪ್ರಸಿದ್ಧ ರೆಸ್ಟೋರೆಂಟ್‌ನಲ್ಲಿ ಊಟಕ್ಕೆ ಹೋಗಲು ತಮ್ಮ ಮನೆಯಿಂದ ಹೊರಟಿದ್ದ. ಆದರೆ ಮತ್ತೆ ಕಾಣಿಸಲಿಲ್ಲ.
ದೇಶದಿಂದ ಪಲಾಯನನಾದ ಮೆಹುಲ್ ಚೋಕ್ಸಿ 12,000 ಕೋಟಿ ರೂ.ಗಳ ಪಿಎನ್‌ಬಿ ಹಗರಣದಲ್ಲಿ ಭಾರತೀಯ ಅಧಿಕಾರಿಗಳಿಗೆ ಬೇಕಾದ ಅಪರಾಧಿಯಾಗಿದ್ದಾನೆ. ಆ್ಯಂಟಿಗುವಾ ನ್ಯಾಯಾಲಯಗಳಲ್ಲಿ ಅಲ್ಲಿಂದ ಅವರನ್ನು ಹಸ್ತಾಂತರಿಸುವ ಬಗ್ಗೆ ತೀವ್ರರೀತಿಯ ಪ್ರಯತ್ನದಲ್ಲಿದೆ. ಚೋಕ್ಸಿಯ ವಕೀಲರು ಭಾರತಕ್ಕೆ ವಾಪಸ್ ಕಳುಹಿಸುವ ಸರ್ಕಾರದ ಪ್ರಯತ್ನಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನು ಓದಿ: ಇಸ್ರೇಲ್ ಆಕ್ರಮಣ ಕೊನೆಗೊಳ್ಳಬೇಕು- ಪ್ಯಾಲೆಸ್ಟೀನ್ ವಿಮೋಚನೆಗೊಳ್ಳಬೇಕು
ಚೋಕ್ಸಿ ಅವರು ಒಟ್ಟಾರೆ 70, 000 ಕೋಟಿ ರುಗೂ ಅಧಿಕ ಸಾಲ ಹೊಂದಿದ್ದು, ಅತಿದೊಡ್ಡ ಸಾಲಗಾರ ಉದ್ದೇಶಪೂರ್ವಕ ಸುಸ್ತಿದಾರ ಎನಿಸಿಕೊಂಡಿದ್ದಾರೆ ಎಂದು ಆರ್‌ಬಿಐ ಹೇಳಿದೆ.
ಇಂಟರ್ ಪೋಲ್ ನಿಂದ ರೆಡ್ ಕಾರ್ನರ್ ನೋಟಿಸ್ ಪಡೆದಿರುವ ದೇಶದ ಭ್ರಷ್ಟಚಾರಿ ಆರ್ಥಿಕ ಅಪರಾಧ, ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಚೋಕ್ಸಿ ಅವರು ಭಾರತದ ಪೌರತ್ವವನ್ನು ತೊರೆದಿದ್ದಾರೆ. ಆ್ಯಂಟಿಗುವಾ ದ್ವೀಪ ಸರ್ಕಾರದ ‘ಹೂಡಿಕೆ ಕಾರ್ಯಕ್ರಮದ ಮೂಲಕ ಪೌರತ್ವ’ ದ ಅಡಿಯಲ್ಲಿ ಆ್ಯಂಟಿಗುವಾ ಪೌರತ್ವವನ್ನು ಪಡೆದುಕೊಳ್ಳಲು ಚೋಕ್ಸಿ ಯಶಸ್ವಿಯಾದರು.
ಕ್ರಿಮಿನಲ್ ಪಿತೂರಿ, ನಂಬಿಕೆಯ ಉಲ್ಲಂಘನೆ, ಮೋಸ ಮತ್ತು ಅಪ್ರಾಮಾಣಿಕತೆ, ಆಸ್ತಿ ವಿತರಣೆ, ಭ್ರಷ್ಟಾಚಾರ ಮತ್ತು ಹಣ ವರ್ಗಾವಣೆ ಸೇರಿದಂತೆ ಆರೋಪಗಳನ್ನು ಚೋಕ್ಸಿ ಎದುರಿಸುತ್ತಿದ್ದಾರೆ. ಅವರ ಸೋದರಳಿಯ ನೀರವ್ ಮೋದಿ ಕೂಡ ದೇಶದಿಂದ ಪಲಾಯನರಾದ ಮತ್ತೊಬ್ಬ ದೇಶ ಭ್ರಷ್ಟ ಆರೋಪಿಯಾಗಿದ್ದಾರೆ. ಲಂಡನ್ ನಲ್ಲಿ ನೆಲೆಸಿರುವ ಅವರನ್ನು ಭಾರತಕ್ಕೆ ಹಸ್ತಂತರಿಸುವ ಬಗ್ಗೆ ತೀವ್ರವಾದ ಪ್ರಯತ್ನಗಳು ನಡೆಯುತ್ತಿವೆ.