ರಾಷ್ಟ್ರೀಯ ಲಾಂಛನ ಬದಲಿಸಿ ಹಿಂದೂ ದೇವತೆ ಚಿತ್ರ ಹಾಕಿದ ವೈದ್ಯಕೀಯ ಆಯೋಗ!

ನವದೆಹಲಿ: ಭಾರತದ ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ಅಧಿಕೃತ ಲಾಂಛನವನ್ನು ರಾಷ್ಟ್ರೀಯ ಲಾಂಛನವಾದ ಅಶೋಕ ಸ್ಥಂಭದ ಸಿಂಹಗಳನ್ನು ಬದಲಿಸಿ ಹಿಂದು ದೇವತೆ ಧನ್ವಂತರಿಯ ಚಿತ್ರವನ್ನು ಸೇರಿಸಲಾಗಿದೆ. ಹೊಸ ಲೋಗೋದಲ್ಲಿ ಸಂಸ್ಥೆಯನ್ನು ‘ರಾಷ್ಟ್ರೀಯ ವೈದ್ಯಕೀಯ ಆಯೋಗ – ಭಾರತ್’ ಎಂದು ಉಲ್ಲೇಖಿಸಲಾಗಿದ್ದು, ಈ ಬಗ್ಗೆ ರಾಷ್ಟ್ರದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂಸ್ಥೆಯ ಲೋಗೋದಲ್ಲಿ ‘ಇಂಡಿಯಾ’ ಎಂಬ ಪದವನ್ನು ಉಲ್ಲೇಖಿಸದೆ ‘ಭಾರತ್’ ಎಂದು ಬರೆಯಲಾಗಿದ್ದು, ಮುಂಬರುವ ವಿಶೇಷ ಅಧಿವೇಶನದಲ್ಲಿ ಸಂವಿಧಾನದಿಂದ ‘ಇಂಡಿಯಾ’ ಎಂಬ ಹೆಸರನ್ನು ಬದಲಾಯಿಸಲಾಗುತ್ತದೆಯೆ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: ಹಾಸನ| ಆಟವಾಡುವ ವೇಳೆ ಮೆಟ್ಟಿಲಿನಿಂದ ಕೆಳಗೆ ಬಿದ್ದ ಮಗು, ಜೀರೋ ಟ್ರಾಫಿಕ್ ಮೂಲಕ ಬೆಂಗಳೂರಿಗೆ ರವಾನೆ

ಹೊಸ ಲೋಗೋವನ್ನು ಈಗಾಗಲೇ NMC ಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬಳಸಲಾಗುತ್ತಿದ್ದು, ಅದರ ಬಗ್ಗೆ ಮಾಧ್ಯಮಗಳಿಗೆ ಅಥವಾ ಸಾರ್ವಜನಿಕರಿಗೆ ಯಾವುದೇ ಅಧಿಕೃತ ಸೂಚನೆಯನ್ನು ನೀಡದೆ ರಹಸ್ಯವಾಗಿ ಪರಿಚಯಿಸಲಾಗಿದೆ ಎಂದು ತೋರುತ್ತಿವೆ ವರದಿಗಳು ಹೇಳಿವೆ.

ಧನ್ವಂತರಿ ದೇವತೆಯನ್ನು ಹಿಂದೂ ಧರ್ಮದಲ್ಲಿ ದೇವತೆಗಳ ವೈದ್ಯ ಎಂದು ನಂಬಲಾಗಿದೆ. NMC ಲಾಂಛನದಲ್ಲಿ, ಧನ್ವಂತರಿ ದೇವತೆಯನ್ನು ಚಿಕ್ಕ ಗಾತ್ರದಲ್ಲಿ ಚಿತ್ರಿಸಿ ವೃತ್ತದ ಮಧ್ಯದಲ್ಲಿ ಇರಿಸಲಾಗಿದೆ. ಜೊತೆಗೆ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ಮೂರು ಪ್ರತಿಮೆಗಳು ತಮ್ಮ ಕೈಗಳನ್ನು ಜೋಡಿಸಿರುವ ಚಿತ್ರವೂ ಇವೆ.

‘ಪರಿಷ್ಕರಿಸಿದ’ ಲೋಗೋ ಸಾರ್ವಜನಿಕ ಗಮನಕ್ಕೆ ಬಂದಾಗಿನಿಂದ, NMC ವಿರುದ್ಧ ವೈದ್ಯಕೀಯ ಸಂಘಟನೆಗಳು ಸೇರಿದಂತೆ ವಿವಿಧ ವಲಯಗಳಿಂದ ತೀವ್ರ ಟೀಕೆಗಳನ್ನು ಮಾಡಲಾಗಿದೆ.

ಇದನ್ನೂ ಓದಿ: ಚಾಮುಂಡೇಶ್ವರಿ ದೇವಸ್ಥಾನಕ್ಕೆ ಗೃಹಲಕ್ಷ್ಮಿ ದುಡ್ಡು | ಪಡಿತರ ಚೀಟಿ, ಆಧಾರ್‌ ಲಿಂಕ್ ಆಗಿದೆಯೆ ಎಂದ ಜನರು!

ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕೇರಳ ಘಟಕವು ಎನ್‌ಎಂಸಿಯ ಕ್ರಮವನ್ನು “ಸಂಪೂರ್ಣ ಆಕ್ಷೇಪಾರ್ಹ” ಎಂದು ಕರೆದಿದೆ. “ಜಾತ್ಯತೀತ ಹಾಗೂ ವೈಜ್ಞಾನಿಕ ಮನೋಭಾವದಿಂದ ಕಾರ್ಯನಿರ್ವಹಿಸಬೇಕಾದ ಸಂಸ್ಥೆಯು ತನ್ನ ಲಾಂಛನದಲ್ಲಿ ಧಾರ್ಮಿಕ ಚಿಹ್ನೆಗಳನ್ನು ಬಳಸುವುದು ಅಪಾಯಕಾರಿ. ಈ ನಿರ್ಧಾರವು ಆಧುನಿಕ ವೈಜ್ಞಾನಿಕ ಸಮುದಾಯಕ್ಕೆ ಸ್ವೀಕಾರಾರ್ಹವಲ್ಲ ಮತ್ತು ಇದನ್ನು ತಕ್ಷಣವೇ ಹಿಂಪಡೆಯಬೇಕೆಂದು” ಎಂಧು ಐಎಂಎ ಒತ್ತಾಯಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ಲೋಗೋವನ್ನು ಹಿಂಪಡೆಯಲು ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಐಎಂಎ ಕೇರಳ ಘಟಕದ ಅಧ್ಯಕ್ಷ ಡಾ. ಜೋಸೆಫ್ ಬೆನವೆನ್ ಮತ್ತು ಕಾರ್ಯದರ್ಶಿ ಡಾ. ಕೆ. ಶಶಿಧರನ್ ಅವರು ಹೇಳಿದ್ದಾರೆ.

ಕಳೆದ ವರ್ಷ ಫೆಬ್ರವರಿಯಲ್ಲಿ, ವೈದ್ಯಕೀಯ ಕಾಲೇಜು ಪಠ್ಯಕ್ರಮದಲ್ಲಿ ಹಲವಾರು ಉದ್ದೇಶಿತ ಬದಲಾವಣೆಗಳನ್ನು ತಂದಿದ್ದಕ್ಕಾಗಿ NMC ಇದೇ ರೀತಿಯ ಟೀಕೆಗೆ ಒಳಗಾಗಿತ್ತು.

ವಿಡಿಯೊ ನೋಡಿ: ಮಹಾಧರಣಿ| ದುಡಿಯುವ ಜನರ ಜೊತೆ ಆಳುವವರ ಚೆಲ್ಲಾಟ Janashakthi Media

Donate Janashakthi Media

Leave a Reply

Your email address will not be published. Required fields are marked *