ಚಾಮರಾಜನಗರ: ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮತ್ತು ರುಚಿ ಇಲ್ಲದ ಊಟ ನೀಡುತ್ತಿರುವುದನ್ನು ಖಂಡಿಸಿ ಚಾಮರಾಜನಗರ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ತರಗತಿ ತೊರೆದು ದಿಢೀರ್ ಪ್ರತಿಭಟನೆ ನಡೆಸಿದರು. ದಬ್ಬಾಳಿಕೆ
ಚಾಮರಾಜನಗರ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ತರಗತಿ ತೊರೆದು ದಿಢೀರ್ ಪ್ರತಿಭಟನೆ ನಡೆಸಿದರು. ಚಾಮರಾಜನಗರ ಮೆಡಿಕಲ್ ಕಾಲೇಜಿನ ಡೀನ್ ಡಾ.ಎಚ್.ಜಿ.ಮಂಜುನಾಥ್, ಯಾವುದೇ ಸಮಸ್ಯೆ ಇಲ್ಲದೇ ವಿದ್ಯಾರ್ಥಿಗಳು ನಡೆಸುತ್ತಿದ್ದ ಮೆಸ್ ರದ್ದು ಪಡಿಸಿ ಆಸ್ಪತ್ರೆಗೆ ಊಟ ಸರಬರಾಜು ಮಾಡುವ ಗುತ್ತಿಗೆದಾರರಿಗೆ ಗುತ್ತಿಗೆ ಕೊಟ್ಟಿದ್ದಾರೆ.
ಇದನ್ನೂ ಓದಿ : ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತಿನೆ ; ಶಿಕ್ಷಕನ ವಿರುದ್ಧ ದೂರು ದಾಖಲು
ತಿಂಗಳಿಗೆ 3600 ರೂ. ಕೊಟ್ಟರೂ ಕಳೆದ 6 ತಿಂಗಳಿನಿಂದಲೂ ಊಟ ರುಚಿಯಾಗಿರುವುದಿಲ್ಲ, ಕಳಪೆ ಮಟ್ಟದಿಂದ ಕೂಡಿರುತ್ತದೆ. ಇಂದು ದಿಢೀರ್ ಆಗಿ ಬೆಳಗ್ಗೆ 10 ಕ್ಕೆ ಮೆಸ್ ಕ್ಲೋಸ್ ಆಗಲಿದೆ ಎಂದು ಆದೇಶ ಹೊರಡಿಸಿ, ತಿಂಡಿ ತಿನ್ನುತ್ತಿದ್ದ ಮೂವರ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಸದ್ಯ, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ತರಗತಿ ತೊರೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ನೋಡಿ : ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕಂತೆ ಪೇಜಾವರರೇ “ನಮ್ಮನ್ನು ಅಂದ್ರೆ ನಿಮ್ಮನ್ನಾ” ಮಾತ್ರನಾ? – ಕೆ.ಎಸ್. ವಿಮಲಾ