ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ಗ್ಯಾರೇಜೊಂದರಲ್ಲಿ ಕ್ಯಾಂಟರ್‌ನ ಗೇರ್ ಬಾಕ್ಸ್ ರಿಪೇರಿ ವೇಳೆ ಬೆಡ್ಡಿಂಗ್ ತುಂಡಾಗಿ ಗೇರ್ ಬಾಕ್ಸ್ ಎದೆ ಮೇಲೆ ಬಿದ್ದ ಪರಿಣಾಮ ಮೆಕ್ಯಾನಿಕ್ ಮೃತಪಟ್ಟಿರುವ ಘಟನೆ ನಡೆದಿದೆ.
ಪಾಲನಜೋಗಹಳ್ಳಿ ನಿವಾಸಿ ಮನ್ಸೂರ್ ಷಾ (51) ಮೃತಪಟ್ಟ ಮೆಕ್ಯಾನಿಕ್. ಕ್ಯಾಂಟರ್ ಇಂಜಿನ್ ಅನ್ನು ಜಾಕ್ ಬಳಸಿ ಮೇಲಕ್ಕೆ ಎತ್ತಿ ಗೇರ್‌ಬಾಕ್ಸ್ ರಿಪೇರಿ ಮಾಡುವಾಗ ಆಕಸಿಕವಾಗಿ ಗೇರ್ ಬಾಕ್ಸಿನ ಬೆಡ್ಡಿಂಗ್ ತುಂಡಾಗಿ ಮೆಕ್ಯಾನಿಕ್ ಮೇಲೆ ಬಿದ್ದಿದೆ.
ಇದನ್ನು ಓದಿ : ಚಿಕ್ಕಬಳ್ಳಾಪುರ: ಮದುವೆಗೆ ಹೋಗುತ್ತಿದ್ದ ಒಂದೇ ಕುಟುಂಬದ ಮೂವರು ಸೇರಿ ಐವರ ಸಾವು
ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಘಟನೆ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ನೋಡಿ : ನನ್ನ ಬಳಿ ಮಾಜಿ ಸಿಎಂ ಅಶ್ಲೀಲ ಸಿಡಿ ಇದೆ ಎಂದ ವಕೀಲ!ಸುದ್ದಿ ಪ್ರಸಾರ ಮಾಡದಂತೆ ಬೊಮ್ಮಾಯಿ ಕೋರ್ಟ್ ಮೊರೆ!!