ಮತೀಯ ದ್ವೇಷ ಹರಡಿಸುವ ‘ಟೂಲ್‍ ಕಿಟ್‍’ಗಳ ತಯಾರಕರನ್ನು ಬಂಧಿಸಿ

   ದಿಲ್ಲಿ ಪೊಲಿಸ್‍ ‍ಆಯುಕ್ತರಿಗೆ ಬೃಂದಾ ಕಾರಟ್‍ ಆಗ್ರಹ

ದೇಶದ ಗೃಹಮಂತ್ರಿಗಳ ನೇರ ಹತೋಟಿಯಲ್ಲಿರುವ ದಿಲ್ಲಿ ಪೋಲೀಸ್‍ನ ಮೂಗಿನ ಕೆಳಗೆ ಬಿಜೆಪಿ-ಆರೆಸ್ಸೆಸ್‍ ಮುಖಂಡ ಕಪಿಲ್‍ ಮಿಶ್ರಾ ಟೆಲಿಗ್ರಾಂ ಸಾಮಾಜಿಕ ಮಾಧ್ಯಮ ಬಳಸಿ ಕೋಮು ದ್ವೇಷವನ್ನು ಹರಡಿಸುವ ದೇಶದ್ರೋಹೀ ಕೆಲಸವನ್ನು ಮಾಡುತ್ತಿದ್ದಾರೆ ಎಂಬುದನ್ನು ಒಂದು ವೆಬ್‍ಪತ್ರಿಕೆಯ ತನಿಖೆ ಬಯಲಿಗೆ ತಂದಿದೆ. ರೈತರ ಪ್ರತಿಭಟನೆಗಳನ್ನು ಬೆಂಬಲಿಸಿರುವ

ಒಬ್ಬ ಬಾಲಕಿಯನ್ನು ದೇಶದ್ರೋಹದ ಆರೋಪದ ಮೇಲೆ ಬೆಂಗಳೂರಿನಿಂದ ಬಂಧಿಸಿಕೊಂಡು ಹೋಗಿರುವ ದಿಲ್ಲಿಪೋಲೀಸ್ ಏಕೆ ಸುಮ್ಮನಿದೆ? ತಕ್ಷಣವೇ ಈ ಬಿಜೆಪಿ ಮುಖಂಡರನ್ನು ಬಂಧಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಸದಸ್ಯೆ ಬೃಂದಾಕಾರಟ್‍ ಹಾಗೂ ದಿಲ್ಲಿ ರಾಜ್ಯಕಾರ್ಯದರ್ಶಿ ಕೆ.ಎಂ.ತಿವಾರಿ ದಿಲ್ಲಿಯ ಪೋಲಿಸ್‍ ಆಯುಕ್ತ ಎಸ್‍.ಎನ್‍.ಶ್ರೀವಾಸ್ತವ ಅವರನ್ನುಆಗ್ರಹಿಸಿದ್ದಾರೆ.

‘ನ್ಯೂಸ್‍ಲಾಂಡ್ರಿ’ ವೆಬ್‍ ಸುದ್ದಿತಾಣ ಫೆಬ್ರುವರಿ 15ರಂದು ‘ ದ್ವೇಷ ಕಾರ್ಖಾನೆ ಕಪಿಲ್ ಶರ್ಮರ ಹಿಂದೂ ಇಕೊಸಿಸ್ಟಮ್‍ ಒಳಗೆ’  ಎಂಬ ಶಿರೋನಾಮೆಯಲ್ಲಿ ಪ್ರಕಟವಾಗಿರುವ ತನಿಖಾ ವರದಿ ಕೋಮುವಾದಿ ದ್ವೇಷ ತಯಾರಿ ಕಾಟೂಲ್‍ ಕಿಟ್‍ ಎಂದು ವರ್ಣಿಸಬಹುದಾದ ಒಂದು ಕೃತ್ಯದ ಸಮಗ್ರ ಚಿತ್ರಣವನ್ನು ಕೊಟ್ಟಿದೆ.

ಈ ಲಿಂಕ್ ಕ್ಲಿಕ್ ಮಾಡಿ : ಒಂದು ಕೃತ್ಯದ ಸಮಗ್ರ ಚಿತ್ರಣವನ್ನು ಕೊಟ್ಟಿದೆ.

‘ಹಿಂದೂ ಇಕೋಸಿಸ್ಟಮ್’ ಎಂಬ ಈ ಸಾಮಾಜಿಕ ಮಾಧ್ಯಮ ಗುಂಪಿನ ಒಡೆಯ, ನಿರ್ಮಾಪಕ ಮತ್ತು ಕಮಾಂಡರ್ ‘ಗೋಲಿಮಾರೊ’ ಅಪಖ್ಯಾತಿಯ ಬಿಜೆಪಿ ಮುಖಂಡ ಕಪಿಲ್‍ ಮಿಶ್ರ. ಇದರಲ್ಲಿ 20,000 ಸದಸ್ಯರಿದ್ದಾರಂತೆ. ‘ನ್ಯೂಸ್ ‍ಲಾಂಡ್ರಿ’ಯ ಮೇಘನಾ ಡಿ.ಎಸ್‍ ಮತ್ತು ಶಾಂಭವಿ ಠಾಕುರ್ ಈ ಆನ್‍ಲೈನ್‍ ಜಾಲವನ್ನು ಪ್ರವೇಶಿಸಿ ಅದು ಹೇಗೆ ವಿವಿಧ ‘ಟೂಲ್‍ ಕಿಟ್‍’ಗಳನ್ನು ಬಳಸಿ ಪ್ರಚಾರ ಸಾಮಗ್ರಿಗಳನ್ನು, ವಿಷಭರಿತ ಕಥನಗಳನ್ನು ಸೃಷ್ಟಿಸಿ ಸಾಮಾಜಿಕ ಮಾಧ್ಯಮಗಳ ವೇದಿಕೆಗಳಲ್ಲಿ ಹಿಂದುತ್ವದ ಹೆಸರಲ್ಲಿ ಮತೀಯ ದ್ವೇಷ ಮತ್ತು ಮತಾಂಧತೆಯನ್ನು ಗುಪ್ತವಾಗಿ ಮತ್ತು ವ್ಯವಸ್ಥಿತವಾಗಿ ಹರಡುತ್ತಿದೆ ಎಂಬುದನ್ನು ಕಂಡಿದ್ದಾರೆ. ಇದಕ್ಕೆ‘ತಾಂಡವ್‍’ ಚಲನಚಿತ್ರ, ಜನವರಿ26ರ ಕೇಂಪುಕೋಟೆ ಘಟನೆ ಮತ್ತು ರಿಹಾನ್ನ, ಮಿಯ ಖಲೀಪಾ, ಗ್ರೆಟಾಥಿನ್‍ಬರ್ಗ್ ಟ್ವೀಟ್‍ಗಳ ಸಂದರ್ಭಗಳಲ್ಲಿ ಇದು ಸಾಮಾಜಿಕ ಮಾಧ್ಯಮಗಳ‍ಲ್ಲಿ ಹರಿಯಬಿಟ್ಟ ಅಪಪ್ರಚಾರಗಳ ಉದಾಹರಣೆಗಳನ್ನು ಈ ತನಿಖಾವರದಿಯಲ್ಲಿ ಕೊಡಲಾಗಿದೆ.

ಕೃಪೆ: ಶಾಂಭವಿಠಾಕುರ್, ನ್ಯೂಸ್ ‍ಲಾಂಡ್ರಿ, ಫೆಬ್ರುವರಿ 15

ಈ ವರದಿಯನ್ನು ಕುರಿತಂತೆ ಬೃಂದಾಕಾರಟ್‍ ಹಾಗೂ ಕೆ.ಎಂ.ತಿವಾರಿಯವರು ದಿಲ್ಲಿ ಪೋಲಿಸ್‍ ಆಯುಕ್ತರಿಗೆ ಪತ್ರ ಬರೆದಿದ್ದಾರೆ.“ಗೃಹಮಂತ್ರಾಲಯ ಮತ್ತು ದಿಲ್ಲಿ ಪೋಲೀಸ್‍ನ ಮೂಗಿನ ಕೆಳಗೆ ಕೋಮುವಾದಿ ದ್ವೇಷ ತಯಾರಿಸುವ ಒಬ್ಬ ಸರಣಿ ಅಪರಾಧಿ, ಕಪಿಲ್‍ ಮಿಶ್ರ ಇದ್ದಾರೆ. ಆತ ನಿರ್ಮಿಸುತ್ತಿರುವ ಮತ್ತುಸಂದೇಶಿಸುತ್ತಿರುವ ಟೂಲ್‍ ಕಿಟ್‍ ಗಳು ಧರ್ಮದ ಆಧಾರದಲ್ಲಿ ದೇಶದ ನಾಗರಿಕರ ಒಂದು ವಿಭಾಗದ ವಿರುದ್ಧ ದ್ವೇಷ ಮತ್ತು ಶತ್ರುತ್ವದ ಭಾವನೆಯನ್ನು ಪ್ರಚೋದಿಸುತ್ತಿವೆ. ಆತನಿಗೆ ಆರೆಸ್ಸೆಸ್‍ನ ನಿಕಟ ಸಂಪರ್ಕವಿದೆ. ಆರೆಸ್ಸೆಸ್‍ ಸಾಹಿತ್ಯವನ್ನು ಈ ಸಾಮಾಜಿಕ ಮಾಧ್ಯಮದಲ್ಲಿ ಪ್ರೋತ್ಸಾಹಿಸುತ್ತಿರುವುದನ್ನು ಕಾಣಬಹುದಾಗಿದೆ. ಬಹುಶಃ ದಿಲ್ಲಿ ಪೋಲೀಸ್‍ ತನ್ನ ಕಾರ್ಯಾಚರಣೆಗಳಲ್ಲಿ ಇದನ್ನು ಸೇರಿಸದಿರಲು ಇದೆ ಕಾರಣ ವಿರಬಹುದೇ?” ಎಂದು ಈ ಪತ್ರದಿಲ್ಲಿ ಪೋಲೀಸ್‍ ಆಯುಕ್ತರ ಮುಂದೆ ಪ್ರಶ್ನೆಯಿಟ್ಟಿದೆ.

“ಗೃಹಮಂತ್ರಾಲಯದ ಅಡಿಯಿರುವ ದಿಲ್ಲಿ ಪೋಲೀಸ್ ರೈತರ ಪ್ರತಿಭಟನೆಗಳನ್ನು ಬೆಂಬಲಿಸುವ ಟೂಲ್ಕಿಟ್‍ಗಳ ವಿರುದ್ಧ ವಿಶೇಷವಾಗಿ ಮುತುವರ್ಜಿವಹಿಸುತ್ತಿದೆ. ನೀವು ಹದಿಹರೆಯದ ಜಾಗತಿಕವಾಗಿ ಮಾನ್ಯತೆ ಪಡೆದಿರುವ ಗ್ರೆಟಾಥನ್‍ಬರ್ಗ್ ಟ್ವೀಟ್ ನ ನಂತರ ರೈತರನ್ನು ಬೆಂಬಲಿಸುವ ‘ಟೂಲ್‍ ಕಿಟ್‍’ ರಾಜದ್ರೋಹದಿಂದ ಕೂಡಿದೆ, ಮತ್ತುಸೆಕ್ಷನ್‍ 153 ಎ ಅಡಿಯಲ್ಲಿ ‘ಗುಂಪುಗಳ ನಡುವೆ ವೈರತ್ವ ಸೃಷ್ಟಿಸುತ್ತದೆ ಎಂಬ ಆಧಾರದಲ್ಲಿಎಫ್‍.ಐ.ಆರ್. ದಾಖಲಿಸಿದ್ದೀರಿ. ಒಂದು ಅಭೂತಪೂರ್ವ ಕಾರ್ಯಾಚರಣೆಯಲ್ಲಿ ನಿಮ್ಮಪೋಲೀಸರನ್ನು ಬೆಂಗಳೂರಿಗೆ ಕಳಿಸಿ ಒಬ್ಬ 21 ವರ್ಷದ ಪರಿಸರವಾದಿ ದಿಶಾ ರವಿಯನ್ನು ಬಂಧಿಸಿ ಜೈಲಿಗೆ ಕಳಿಸಿದ್ದೀರಿ. ರೈತರಿಗೆ ಸೌಹಾರ್ದವನ್ನು ವ್ಯಕ್ತಪಡಿಸುತ್ತಿರುವ ಯುವಜನರನ್ನು ಹೆದರಿಸುವ ,ಬೆದರಿಸುವ ಈ ಆಕ್ರೋಶಕಾರೀ ಮತ್ತು ಖಂಡನಾರ್ಹ ಕ್ರಮಗಳು ನಾಗರಿಕ ಸ್ವಾತಂತ್ರ್ಯಗಳು ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ದಮನವಾಗಿದೆ. ಅವರು ಬಳಸುವ ಟೂಲ್‍ ಕಿಟ್‍ ಗಳಲ್ಲಿ ರಾಜದ್ರೋಹವೆನ್ನಬಹುದಾದ ಏನನ್ನೂ ಬಳಸಿಲ್ಲ, ವೈರತ್ವ ಉಂಟುಮಾಢುತ್ತವೆ ಎಂಬ ಆರೋಪಕ್ಕೆ ತದ್ವಿರುದ್ಧವಾಗಿ ಈ ಟೂಲ್‍ ಕಿಟ್ಗಳು ಐಕ್ಯತೆಗೆ ಕರೆ ನೀಡುತ್ತವೆ” ಎನ್ನುತ್ತ ಬೃಂದಾ ಕಾರಟ್‍ ಮತ್ತು ಕೆ.ಎಂ.ತಿವಾರಿಯವರು ದಿಲ್ಲಿಪೋಲಿಸ್‍ ಆಯುಕ್ತರಿಗೆ ಬರೆದ ಈ ಪತ್ರದಲ್ಲಿ ಕಪಿಲ್‍ ಮಿಶ್ರರನ್ನು ವಿವಿಧ ಗುಂಫುಗಳ ನಡುವೆ ವೈರತ್ವ ಹರಡುವುದಕ್ಕಾಗಿ ಬಂಧಿಸಬೇಕು, ಅವರ ಕೃತ್ಯಗಳು ರಾಷ್ಟ್ರ-ವಿರೋಧಿಯಾಗಿವೆಯಾದ್ದರಿಂದ ಸೂಕ್ತ ಕಲಮುಗಳ ಅಡಿಯಲ್ಲಿಅವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವ್ಯಂಗ್ಯಚಿತ್ರ: ಸಾತ್ವಿಕ್‍ ಗಡೆ, ದಿಹಿಂದೂ, ಫೆಬ್ರುವರಿ 17

 

Donate Janashakthi Media

Leave a Reply

Your email address will not be published. Required fields are marked *