ಬೆಂಗಳೂರು : ಸಿಎಂ ಬೊಮ್ಮಾಯಿಗೆ ಮತ್ತೊಂದು ರಾಜೀನಾಮೆ ಟೆನ್ಷನ್ ಶುರುವಾಗಿದೆ. ತುರುವೆಕೆರೆ ಶಾಸಕ ಸ್ಥಾನಕ್ಕೆ ಮಸಾಲೆ ಜಯರಾಂ ರಾಜೀನಾಮೆ ನೀಡುವ ಬೆದರಿಕೆ ಒಡ್ಡಿದ್ದಾರೆ.
ಎಲ್ಲೋ ಒಂದು ಕಡೆ ಬಿಜೆಪಿ ನನಗೆ ದ್ರೋಹ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಮಸಾಲೆ ಜಯರಾಮ್ ಹೇಳಿದ್ದಾರೆ. ‘ಒಳ್ಳೆಯ ನಿಗಮ ಮಂಡಳಿ ಕೊಡದಿದ್ರೆ ಪಕ್ಷದಲ್ಲಿ ಇರುವುದಿಲ್ಲ. ನನ್ನ ತಾಳ್ಮೆಗೂ ಮಿತಿ ಇದೆ. ಸಾಂಬಾರು ಅಭಿವೃದ್ಧಿ ನಿಗಮದಲ್ಲಿ 10 ರೂಪಾಯಿ ದುಡ್ಡಿಲ್ಲ. ನಾನೇ ಊಟ ತೆಗೆದುಕೊಂಡು ಹೋಗಿ ಕೊಟ್ಟು ಬರಬೇಕು ಹಾಗಾಗಿ ಹಿರಿಯ ನಾಯಕರು ನಿರ್ಲಕ್ಷ್ಯ ವಹಿಸಿದರೆ ತಕ್ಕ ಪಾಠ ಕಲಿಸುತ್ತೇನೆ.
ಈ ತಿಂಗಳ ಅಂತ್ಯದವರೆಗೆ ಗಡುವು ಕೊಟ್ಟಿದ್ದೇನೆ. ನಾನೇನು ‘ಸಚಿವ ಸ್ಥಾನ ಕೇಳುತ್ತಿಲ್ಲ. ಒಂದು ಒಳ್ಳೆಯ ನಿಗಮ, ಮಂಡಳಿ ಸ್ಥಾನ ಕೊಡಿ ಎಂದು ಕೇಳಿಕೊಂಡಿದ್ದೇನೆ. ಅದಕ್ಕೂ ಸ್ಪಂದಿಸುತ್ತಿಲ್ಲ. ಕೊಟ್ರೆ ಕೊಡಲಿ. ಇಲ್ಲದಿದ್ರೆ ಏನು ಮಾಡಬೇಕೋ ಮಾಡ್ತೀವಿ’ ಎಂದಿದ್ದಾರೆ.
ಕಳೆದ ತಿಂಗಳು ಮಾಜಿ ಶಾಸಕ, ಬಿ. ಸುರೇಶ್ ಗೌಡ ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಜಿಲ್ಲೆಯ ಮತ್ತೊಬ್ಬ ಶಾಸಕರು ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.