ಟೋಕಿಯೋ: ಒಲಿಂಪಿಕ್ಸ್‌ನಲ್ಲಿ ಬಹು ನಿರೀಕ್ಷೆಯೊಂದಿಗೆ ಮತ್ತೊಂದು ಮತ್ತೊಂದು ಪದಕ ಅವಕಾಶದಲ್ಲಿ ಭಾರತಕ್ಕೆ ನಿರಾಶೆಯಾಗಿದೆ. ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 51 ಕೆ.ಜಿ. ಬಾಕ್ಸಿಂಗ್ ವಿಭಾಗದ ಸ್ಪರ್ಧಿ ಎಂ ಸಿ ಮೇರಿ ಕೋಮ್ ಕ್ವಾರ್ಟರ್ ಫೈನಲ್ ಪ್ರವೇಶಕ್ಕೆ ಅವಕಾಶ ಸಿಗಲಿಲ್ಲ.
ಮೇರಿ ಕೋಮ್ ತನ್ನ ಪೂರ್ವ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊನೆಯ ಎರಡು ಸುತ್ತುಗಳನ್ನು ಗೆದ್ದರು, ಆದರೆ ಮೊದಲ ಸುತ್ತಿನಲ್ಲಿ 4-1 ನಿರ್ಧಾರದಿಂದಾಗಿ ಪಂದ್ಯವು ಕೈಬಿಡಲಾಗಿತ್ತು. ಪಂದ್ಯದ ನಂತರ, ಮೇರಿ ಕೋಮ್ ಸಹ ಫಲಿತಾಂಶದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು. ಎರಡನೇ ಮತ್ತು ಮೂರನೇ ಸುತ್ತನ್ನು 3-2ರಿಂದ ಗೆದ್ದು ಅದ್ಭುತ ಪುನರಾಗಮನ ಮಾಡಿದರು. ಆದರೆ ಆರಂಭಿಕ ಸುತ್ತಿನ ಮುನ್ನಡೆಯಿಂದಾಗಿ ವೇಲೆನ್ಸಿಯಾ ಈ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾದರು.
ಇದನ್ನು ಓದಿ: ಆರ್ಚರಿ: ಚಾಂಪಿಯನ್ ವಿರುದ್ಧ ಅತನು ದಾಸ್ ಭರ್ಜರಿ ಗೆಲುವು- ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶ
ಒಟ್ಟು ಮೂರು ಸುತ್ತಿನ ಸ್ಪರ್ಧೆಯಲ್ಲಿ ಬಾಕ್ಸರ್ ಮೇರಿ ಕೋಮ್ ಎರಡು ಸುತ್ತುಗಳನ್ನು ಗೆದ್ದಿದ್ದರು. ಆದರೆ, ಒಟ್ಟು ಅಂಕಗಳ ಅಂತರದಲ್ಲಿ ಎದುರಾದ ಅಲ್ಪ ಹಿನ್ನಡೆಯಿಂದಾಗಿ ತಮ್ಮ ಹೋರಾಟ ಅಂತ್ಯಗೊಳಿಸಿದ್ದಾರೆ. ಇಂದು ನಡೆದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಅಂತ್ಯದಲ್ಲಿ ರೆಫ್ರಿ ಕೆಂಪು ಸಮವಸ್ತ್ರ ತೊಟ್ಟ ವೆಲೆನ್ಸಿಯಾ ಅವರ ಕೈ ಮೇಲೆತ್ತಿದಾಗ ಕೋಮ್ ಕಣ್ಣಲ್ಲಿ ನೀರು ಹರಿಯಲಾರಂಭಿಸಿತ್ತು. ಆದರೂ ನಗುತ್ತಲೇ ಎಲ್ಲರಿಗೂ ಧನ್ಯವಾದ ಹೇಳಿ ಎದುರಾಳಿಗೆ ಅಪ್ಪುಗೆಯನ್ನೂ ನೀಡಿದರು. ಅಲ್ಲದೆ, ಅವರ ಸಿಬ್ಬಂದಿ ಮತ್ತು ಎಲ್ಲರನ್ನೂ ಕೃತಜ್ಞತೆಯಿಂದ ಧನ್ಯವಾದ ಅರ್ಪಿಸಿದರು.
ಕಳೆದ ಎರಡು ಮುಖಾಮುಖಿಗಳಲ್ಲಿ ಕೋಮ್ ಎದುರು ಸೋತಿದ್ದ ವೆಲೆನ್ಸಿಯಾ, ಇಂದಿನ ಪಂದ್ಯದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಂತೆ ಕಂಡು ಬಂದಿತ್ತು. ತಮ್ಮ ಎತ್ತರದ ಲಾಭ ಪಡೆದು ಕೋಮ್ ಅವರ ಬಲಿಷ್ಠ ಪಂಚ್‌ಗೆ ಪಾರಾದರು. ಅಲ್ಲದೆ, ಎಡ ಮತ್ತು ಬಲ ಹುಕ್ ಹೊಡೆತಗಳ ಮೂಲಕ ಅಂಕ ಕಲೆಹಾಕುವಲ್ಲಿ ಸಫಲರಾದರು.
ಆರು ಬಾರಿ ವಿಶ್ವ ಚಾಂಪಿಯನ್ ಆದ 38 ವರ್ಷದ ಬಾಕ್ಸರ್ ಮೇರಿ ಕೋಮ್ ಎರಡನೇ ಒಲಿಂಪಿಕ್ ಪದಕ ಗೆಲ್ಲುವ ಕನಸು ಫಲಿಸಲಿಲ್ಲ. ಏಷ್ಯನ್ ಚಾಂಪಿಯನ್ ಮತ್ತು 2012 ರ ಲಂಡನ್ ಒಲಿಂಪಿಕ್ ಕಂಚಿನ ಪದಕ ವಿಜೇತ ಮೇರಿ ಕೋಮ್ ಈ ಸವಾಲಿನ ಪಂದ್ಯದಲ್ಲಿ ಅತ್ಯುತ್ತಮ ಸಾಧನೆ ಮಾಡಿದರು.
ಇದನ್ನು ಓದಿ: ಟೋಕಿಯೋ ಒಲಿಂಪಿಕ್ಸ್: ಭಾರತಕ್ಕೆ ಮೊದಲ ಪದಕ – ಬೆಳ್ಳಿ ಪದಕ ಗೆದ್ದ ಸೈಕೋಮ್ ಮೀರಾಬಾಯಿ ಚಾನು
32 ವರ್ಷದ ಇಂಗ್ರಿಟ್ ವೇಲೆನ್ಸಿಯಾ ಕೂಡ ಕೊಲಂಬಿಯಾ ದೇಶಕ್ಕೆ ಬಹಳ ಮುಖ್ಯವಾದ ಆಟಗಾರ್ತಿ. ಒಲಿಂಪಿಕ್ ಕ್ರೀಡಾಕೂಟದಲ್ಲಿ ತನ್ನ ದೇಶವನ್ನು ಪ್ರತಿನಿಧಿಸಿದ ಮೊದಲ ಮಹಿಳಾ ಬಾಕ್ಸರ್ ಮತ್ತು ದೇಶಕ್ಕಾಗಿ ಒಲಿಂಪಿಕ್ ಪದಕ ಗೆದ್ದ ಮೊದಲ ಮಹಿಳಾ ಬಾಕ್ಸರ್ ಆಗಿದ್ದಾರೆ. 2019 ರ ವಿಶ್ವ ಚಾಂಪಿಯನ್‌ಶಿಪ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಮೇರಿ ಕೋಮ್ ವೇಲೆನ್ಸಿಯಾ ಅವರನ್ನು ಸೋಲಿಸಿದ್ದಾರೆ. ಇದು ಕೊಲಂಬಿಯಾದ ಬಾಕ್ಸರ್ ಮೇರಿ ಕೋಮ್ ವಿರುದ್ಧದ ಮೊದಲ ಗೆಲುವು ಆಗಿತ್ತು.
2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಆಡುವ ಭರವಸೆಯು ತುಂಬಾ ಕಡಿಮೆಯಾಗಿದೆ. ಆದರೂ, ಮುಂದಿನ ಒಲಿಂಪಿಕ್ಸ್‌ಗೆ ಕೇವಲ ಮೂರು ವರ್ಷಗಳ ಮಾತ್ರ ಬಾಕಿ ಇರುವುದರಿಂದ ಮೇರಿ ಕೋಮ್ ಅವರ ಪುನರಾಗಮನ ಮಾಡಿದರೆ ಆಶ್ಚರ್ಯ ಪಡಬೇಕಾಗಿಲ್ಲ.