ಮಾವೋವಾದಿಗಳ ಎನ್ಕೌಂಟರ್: ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡನೆ

ಮಾತುಕತೆಗಳ ವಿನಂತಿಯನ್ನು ತಕ್ಷಣವೇ ಸ್ವೀಕರಿಸಲು  ಆಗ್ರಹ

ಛತ್ತೀಸ್‌ಗಢ: ರಾಜ್ಯದಲ್ಲಿ ಮಾವೋವಾದಿಗಳ ಪ್ರಧಾನ ಕಾರ್ಯದರ್ಶಿ ನಂಬಲ ಕೇಶವರಾವ್ ಸೇರಿದಂತೆ 27 ಮಾವೋವಾದಿಗಳ ಎನ್ಕೌಂಟರ್ ನಡೆಸಿರುವುದನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ಖಂಡಿಸಿದೆ.

ಮಾತುಕತೆಗಾಗಿ ಮಾವೋವಾದಿಗಳಿಂದ ಪದೇ ಪದೇ ಬಂದ ಮನವಿಗಳನ್ನು ನಿರ್ಲಕ್ಷಿಸಿ, ಕೇಂದ್ರ ಸರ್ಕಾರ ಮತ್ತು ಬಿಜೆಪಿ ನೇತೃತ್ವದ ಛತ್ತೀಸ್‌ಗಢ ರಾಜ್ಯ ಸರ್ಕಾರ ಮಾತುಕತೆಯ ಮೂಲಕ ಒಂದು ಪರಿಹಾರವನ್ನು ಕಂಡುಕೊಳ್ಳುವ ಆಯ್ಕೆಯ ಬದಲಾಗಿ, ಹತ್ಯೆಗಳು ಮತ್ತು ಸಂಹಾರದ ಅಮಾನವೀಯ ನೀತಿಯನ್ನು ಅನುಸರಿಸುತ್ತಿವೆ.

ಇದನ್ನೂ ಓದಿ: ಕೋಮು ದ್ವೇಷ ಭಾಷಣ ಪ್ರಕರಣ: ಹರೀಶ್ ಪೂಂಜಾಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್

ಕೇಂದ್ರ ಗೃಹ ಸಚಿವರು ನೀಡುತ್ತಿದ್ದ ಗಡುವನ್ನು ಪುನರುಚ್ಚರಿಸುವ ಹೇಳಿಕೆಗಳು ಮತ್ತು ಮಾತುಕತೆಯ ಅಗತ್ಯವಿಲ್ಲ ಎಂಬ ಛತ್ತೀಸ್‌ಗಢದ ಮುಖ್ಯಮಂತ್ರಿಯ ಹೇಳಿಕೆಯು ಮಾನವ ಜೀವಗಳನ್ನು ತೆಗೆದುಕೊಳ್ಳುವುದರಲ್ಲಿ ಖುಶಿಪಡುವಂತೆ ಕಾಣುವ ಫ್ಯಾಸಿಸ್ಟ್ ತೆರನ ಮನೋಭಾವವನ್ನು ಬಿಂಬಿಸುತ್ತವೆ, ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಪೊಲಿಟ್‍ಬ್ಯುರೊ ಹೇಳಿದೆ.

ಅನೇಕ ರಾಜಕೀಯ ಪಕ್ಷಗಳು ಮತ್ತು ಕಾಳಜಿಯುಳ್ಳ ನಾಗರಿಕರು ಸಂವಾದದ ವಿನಂತಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮಾವೋವಾದಿಗಳ ರಾಜಕೀಯಕ್ಕೆ ತಮ್ಮ ವಿರೋಧವಿರುವುದಾದರೂ, ಮಾತುಕತೆಗಾಗಿ ಅವರ ವಿನಂತಿಯನ್ನು ತಕ್ಷಣವೇ ಸ್ವೀಕರಿಸಬೇಕು ಮತ್ತು ಎಲ್ಲಾ ಅರೆಸೈನಿಕ ಕಾರ್ಯಾಚರಣೆಗಳನ್ನು ನಿಲ್ಲಿಸಬೇಕು ಎಂದು ತಾವು ಸರ್ಕಾರವನ್ನು ಆಗ್ರಹಿಸುವುದಾಗಿ ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಇದನ್ನೂ ನೋಡಿ: ಆರೋಗ್ಯ ಹಕ್ಕು – ಸರಣಿ ಕಾರ್ಯಕ್ರಮ| ಅಲ್ಮಾ-ಅಟಾ ಘೋಷಣೆ ಏನು? ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಲವರ್ಧನೆ ಸಂಚಿಕೆ 03

Donate Janashakthi Media

Leave a Reply

Your email address will not be published. Required fields are marked *