ಮಂಸೋರೆ ನಿರ್ದೇಶನದ ಸತ್ಯ ಘಟನೆ ಆಧಾರಿತ 19.20.21 ಸಿನಿಮಾ ತೆರೆಗೆ

‘ಹರಿವು’, ‘ನಾತಿಚರಾಮಿ’, ‘ಆ್ಯಕ್ಟ್​-1978’ ಚಿತ್ರಗಳನ್ನು ನಿರ್ದೇಶಿಸಿ ಪ್ರೇಕ್ಷಕರ ಮನ ಗೆದ್ದಿರುವ ‘ರಾಷ್ಟ್ರ ಪ್ರಶಸ್ತಿ’ ಪುರಸ್ಕೃತ ನಿರ್ದೇಶಕ ಮಂಸೋರೆ ಅವರ ನಿರ್ದೇಶನದ ಹೊಸ ‘19.20.21’ ಸಿನಿಮಾ ಇಂದು(ಮಾರ್ಚ್‌ 03) ತೆರೆಗೆ ಬರಲಿದೆ. ಸತ್ಯ ಘಟನೆ ಆಧಾರಿತ ‘ಜೈ ಭೀಮ್’, ‘ಜನಗಣಮನ’ ಸಿನಿಮಾಗಳ ಮಾದರಿಯಲ್ಲಿ ‘19.20.21’ ನೈಜ ಘಟನೆಯೊಂದರ ಚಲನಚಿತ್ರವಾಗಿದೆ.

ಸಿನಿಮಾ ಬಗ್ಗೆ ಮಾತನಾಡಿರುವ ಮಂಸೋರೆ, ” 19.20.21. ಸಿನಿಮಾ ಕತೆಯಾಧಾರಿತವಲ್ಲ, ಬದಲಾಗಿ ಸತ್ಯ ಘಟನೆ ಆಧಾರಿತವಾಗಿದೆ. ಹೊಸ ಸಿನಿಮಾ, ಹೊಸ ಪ್ರಯತ್ನವೊಂದರ ಬೆನ್ನತ್ತಿ ಹೊರಟಿದ ಚಿತ್ರ ಇದಾಗಿದೆ. ಬಹಳ ಹಿಂದೆಯೇ ಸತ್ಯ ಘಟನೆ ಆಧಾರಿತ ಸಿನಿಮಾವನ್ನು ಮಾಡಬೇಕೆಂದು ನಿರ್ಧರಿಸಿದ್ದೆ. ಹತ್ತೂಂಬತ್ತು, ಇಪ್ಪತ್ತು, ಇಪ್ಪತ್ತೂಂದು… ಎಲ್ಲರ ಬದುಕಿಗೆ ಬಹಳ ಮುಖ್ಯವಾದ ಸಂಖ್ಯೆಗಳು. ಅದು ಏನು? ಹೇಗೆ? ಎಂಬುವ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳುವ ಕುತೂಹಲಕ್ಕೆ ಸಿನಿಮಾ ನೋಡಬೇಕೆಂದರು.

ಇದನ್ನು ಓದಿ: ‘ಆಕ್ಟ್ 1978’ ಸೇರಿದಂತೆ ಪನೋರಮಾ ವಿಭಾಗಕ್ಕೆ ನಾಲ್ಕು ಕನ್ನಡ ಸಿನಿಮಾಗಳು ಆಯ್ಕೆ

ಆದರೆ ಇದು ಕನಸಲ್ಲ, ಕತೆಯಲ್ಲ, ಸತ್ಯ ಘಟನೆ ಆಧಾರಿತವಾದುದು. ಬಹಳ ಹಿಂದೆಯೇ ಸಿನಿಮಾ ಮಾಡಬೇಕು ಅಂದುಕೊಂಡಿದ್ದ ಒಂದು ಘಟನೆಯು ದೃಶ್ಯರೂಪ ಪಡೆದುಕೊಳ್ಳಲು ಈಗ ಕಾಲ ಕೂಡಿಬಂದಿದೆ.‌ ಹತ್ತೊಂಬತ್ತು, ಇಪ್ಪತ್ತು, ಇಪ್ಪತ್ತೊಂದು…” ಎಲ್ಲರ ಬದುಕಿಗೆ ಬಹಳ ಮುಖ್ಯವಾದ ಸಂಖ್ಯೆಗಳು.. ಅದು ಏನು? ಹೇಗೆ? ಎಂಬುವ ಪ್ರಶ್ನೆಗಳಿಗೆ ಉತ್ತರ ಈ ಚಿತ್ರದಲ್ಲಿದೆ” ಎಂದಿದ್ದಾರೆ.

19.20.21 ಚಿತ್ರದಲ್ಲಿ ಸತ್ಯವಂತರು, ಪ್ರಾಮಾಣಿಕತೆ ಮತ್ತು ನ್ಯಾಯಕ್ಕಾಗಿ ಹೋರಾಡುವ ವಕೀಲರ ಪಾತ್ರ ಮಾಡಿರುವ ಬಾಲಾಜಿ ಮನೋಹರ್‌ ಚಿತ್ರವು ರಾಜಕೀಯ ವಿಷಯಾಧಾರಿತವಾಗಿದ್ದೂ ಸುಳ್ಳು ಆರೋಪಗಳನ್ನು ಹೊತ್ತ ಬುಡಕಟ್ಟು ಹುಡುಗನಿಗೆ ನ್ಯಾಯ ಒದಗಿಸಲು ಕಾರ್ಯಕರ್ತ ಮತ್ತು ಪತ್ರಕರ್ತನೊಂದಿಗೆ ತಂಡವನ್ನು ಕಟ್ಟುವ ವಕೀಲನಾಗಿ ನಟಿಸಿದ್ದಾರೆ. ಅವರು ನಾತಿಚರಾಮಿ, ಭಕ್-ಪೈಲಟ್ (2019), ಅರಿಷಡ್ವರ್ಗ (2019) ಮತ್ತು ಅವನೇ ಶ್ರೀಮನ್ನಾರಾಯಣ (2019) ಚಿತ್ರಗಳಲ್ಲಿ ನಟಿಸಿದ್ದಾರೆ.

ನಿರ್ದೇಶಕ ಮಂಸೋರೆ ಕೈಗೆತ್ತಿಕೊಳ್ಳುವ ಚಿತ್ರಗಳೆಲ್ಲವೂ ವಿಶೇಷ ಕಥೆಯಾಗಿರುತ್ತದೆ. ಅದೇ ರೀತಿ ಅವರ ನಿರ್ದೇಶನದ ʻ19.20.21.ʼ ಸಿನಿಮಾ ಇಂದು(ಮಾರ್ಚ್​ 3ರಂದು) ತೆರೆಗೆ ಬರಲಿದೆ. ಇದೂ ಸಹ ಹಲವು ವರ್ಷಗಳಿಂದ ದೌರ್ಜನ್ಯಕ್ಕೆ ಒಳಗಾದ ಬುಡಕಟ್ಟು ಸಮುದಾಯದ ಜನರ ಕುರಿತು ಸಿನಿಮಾವಾಗಿದೆ.

ಇದನ್ನು ಓದಿ: ಸಂಚಾರ ನಿಲ್ಲಿಸಿದ ಸ್ಯಾಂಡಲ್​ವುಡ್​ ನಟ ವಿಜಯ್ – ಸಾವಲ್ಲೂ ಸಾರ್ಥಕತೆ ಮೆರೆದ ಸಂಚಾರಿ ವಿಜಯ್

ಶೃಂಗ ಬಿ.ವಿ., ಬಾಲಾಜಿ ಮನೋಹರ್, ಸಂಪತ್, ಎಂ.ಡಿ. ಪಲ್ಲವಿ, ಮಹದೇವ್ ಹಡಪದ್, ಉಗ್ರಂ ಸಂದೀಪ್ ಸೇರಿದಂತೆ ಅನೇಕರು ‘19.20.21’ ಚಿತ್ರದಲ್ಲಿ ನಟಿಸಿದ್ದಾರೆ. ಶಿವು ಬಿ.ಕೆ. ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ, ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ. ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಅವರ ಸಾಹಿತ್ಯ ಈ ಚಿತ್ರಕ್ಕಿದೆ. ದೇವರಾಜ್. ಆರ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸತ್ಯ ಹೆಗಡೆ ಸಹ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ಇದು ಮಂಸೋರೆ ಅವರ 4ನೇ ಸಿನಿಮಾ.

ಬಿಡುಗಡೆಗೂ ಮುನ್ನಾ ವಿಶೇಷ ಪ್ರದರ್ಶನ

ಚಿತ್ರ ಬಿಡುಗಡೆಗೂ ಮುನ್ನ ಮಂಗಳೂರಿನಲ್ಲಿ ವಿಶೇಷ ಪ್ರದರ್ಶನವೊಂದನ್ನು ಏರ್ಪಡಿಸಲಾಗಿತ್ತು.  ಈ ಸಂದರ್ಭದಲ್ಲಿ ಬುಡಕಟ್ಟು ಸಮುದಾಯದ ಮಲೆಕುಡಿಯರು ತಮ್ಮದೇ ಕಥೆಯನ್ನು ಬೆಳ್ಳಿಪರದೆಯ ಮೇಲೆ ನೋಡಿ ಎಲ್ಲರೂ ಭಾವುಕರಾದರು. ಬೆಂಗಳೂರಿನಲ್ಲಿಯೂ ವಿಶೇಷ ಪ್ರದರ್ಶನ ನಡೆಯಿತು. ಚಿತ್ರತಂಡ, ಜನಪರ ಚಳುವಳಿಯ ನಾಯಕರು, ಸಾಹಿತಿಗಳು, ಪತ್ರಕರ್ತರು ಸಿನೆಮಾವನ್ನು ವೀಕ್ಷಿಸಿದರು.

19.20.21. ಚಿತ್ರದ ವಿಶೇಷ ಪ್ರದರ್ಶನದ ಅನುಭವವನ್ನು ಹಂಚಿಕೊಂಡಿರುವ ಚಿತ್ರದ ನಿರ್ದೇಶಕ ಮಂಸೋರೆ ಅವರು ‘ಇದಕ್ಕಿಂತ ಸಾರ್ಥಕತೆ ಇನ್ನೇನಿದೆ? ಇಲ್ಲಿಯವರೆಗಿನ ನನ್ನ ಸಿನಿ ಪಯಣದಲ್ಲಿ ಇಂತಹ ಭಾವುಕ ಸಂಗತಿ ಎಂದೂ ಘಟಿಸಿಲ್ಲ. ‘ಹರಿವು’ ನೈಜ ಘಟನೆ ಆಧರಿಸಿದ ಕತೆಯಾದರೂ ಮೂಲ ವ್ಯಕ್ತಿಯನ್ನು ಭೇಟಿ ಮಾಡುವ ಅವಕಾಶ ದೊರಕಿರಲಿಲ್ಲ. ಆದರೆ ಈ ಬಾರಿ ಸಿನಿಮಾ ಮಾಡುವ ಮೊದಲು ಅವರೊಂದಿಗಿನ ಒಡನಾಟ ಹಾಗೂ ಆ ನಂತರ ಅವರದೇ ಕತೆಯ ಸಿನಿಮಾವನ್ನು ಅವರಿಗೇ ತೋರಿಸುವ ಅವಕಾಶ ಮೊದಲ ಬಾರಿಗೆ ದಕ್ಕಿತು. ಅದರಲ್ಲೂ ಆ ಸಮುದಾಯದ ಬಹುತೇಕರು ಮೊದಲ ಬಾರಿಗೆ ಚಿತ್ರಮಂದಿರದ ಒಳಗೆ ಪ್ರವೇಶ ಮಾಡಿರುವುದು’ ಎಂದು ಬರೆದಿದ್ದಾರೆ.

ಇದನ್ನು ಓದಿ: ವಿಠಲ ಮಲೆಕುಡಿಯ ನಿರ್ದೋಷಿಯೆಂದು ನ್ಯಾಯಾಲಯ ತೀರ್ಪು

‘ಅವರದೇ ಬದುಕಿನ ಪುಟ್ಟ ಭಾಗವನ್ನು ಸಿನಿಮಾ ರೂಪದಲ್ಲಿ ತೆರೆಯ ಮೇಲೆ ಕಂಡ ನಂತರ ಆ ಮುಗ್ಧ ಕಣ್ಣಲ್ಲಿ ಕಾಣಿಸಿದ್ದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಾಗದು. ಆ ಕ್ಷಣಗಳಲ್ಲಿ ಆ ಕಣ್ಣುಗಳ ಮೂಲಕ ಅವರು ದಾಟಿಸಿದ ಪ್ರೀತಿ ಎದೆಯಾಳವನ್ನು ಹೊಕ್ಕು ಶಾಶ್ವತವಾಗಿ ಕೂತುಬಿಟ್ಟಿದೆ. ಅವರು ತಮ್ಮ ಬೆಚ್ಚನೆಯ ಕೈಯಲ್ಲಿ ನನ್ನ ಕೈಹಿಡಿದು ಮಾತೇ ಆಡದೇ ನೀಡಿದ ಮೆಚ್ಚುಗೆಯ ಮುಂದೆ ಇನ್ಯಾವ ಪ್ರಶಸ್ತಿ ಗೌರವಗಳು ಸರಿಗಟ್ಟಲಾರವೇನೊ. ಹೌದು ಇವರು ಅದೇ ಮಲೆಕುಡಿಯರು. ದಶಕಗಳ ಕಾಲ ದೌರ್ಜನ್ಯವನ್ನು ಅನುಭವಿಸುತ್ತಾ, ನ್ಯಾಯಯುತ ಹೋರಾಟದಿಂದಲೇ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವವರು. ಇದು ಅವರದೇ ಕತೆ. ಈ ಜೀವಕ್ಕೆ ಇದಕ್ಕಿಂತ ಸಾರ್ಥಕತೆ ಇನ್ನೇನು ಬೇಕಿದೆ?’ ಎಂದು ಮಂಸೋರೆ ಬರೆದುಕೊಂಡಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

 

 

Donate Janashakthi Media

One thought on “ಮಂಸೋರೆ ನಿರ್ದೇಶನದ ಸತ್ಯ ಘಟನೆ ಆಧಾರಿತ 19.20.21 ಸಿನಿಮಾ ತೆರೆಗೆ

Leave a Reply

Your email address will not be published. Required fields are marked *