ಮಂಗಳೂರು| ಸರಕಾರಿ ಆರೋಗ್ಯ ಬಲಪಡಿಸಲು ಆಗ್ರಹ

ಮಂಗಳೂರು: ಖಾಸಗಿ ಆರೋಗ್ಯ, ಮೆಡಿಕಲ್ ಲಾಬಿಗಳ ಹಿಡಿತದಿಂದ ನಲುಗಿ ಹೋಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಆರೋಗ್ಯ ರಂಗವನ್ನು ಬಲಪಡಿಸಬೇಕು ಎಂದು ನಾವು ಹಲವು ವರ್ಷಗಳಿಂದ ವಿವಿಧ ಹಂತಗಳಲ್ಲಿ ಹೋರಾಟಗಳನ್ನು‌ ಸಂಘಟಿಸುತ್ತಾ ಬಂದಿದ್ದೇವೆ ಎಂದು ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ. ಮಂಗಳೂರು 

ಸಂಬಂಧ ಪಟ್ಟವರಿಗೆ ಮನವಿಗಳನ್ನು‌ ಸಲ್ಲಿಸುತ್ತಾ ಬಂದಿದ್ದೇವೆ. ತೀರಾ ಇತ್ತೀಚೆಗೆ ಸುರತ್ಕಲ್ ನಲ್ಲಿ ಹೋರಾಟ ಸಮಿತಿ ಬ್ಯಾನರ್ ಅಡಿ 12 ತಾಸುಗಳ ಸಾಮೂಹಿಕ ಧರಣಿ, ಸಿಪಿಐಎಂ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ನಡೆಸಿ ಹಲವು ಬೇಡಿಕೆಗಳನ್ನು ಮುಂದಿಟ್ಟು ಆರೋಗ್ಯ ಕ್ಷೇತ್ರದ ಸುಧಾರಣೆಗೆ ಆಗ್ರಹಿಸಿದ್ದೆವು ಎಂದರು.

ಇದನ್ನೂ ಓದಿ: ರಾಜಸ್ಥಾನ | ಎಥೆನಾಲ್ ಕಾರ್ಖಾನೆ ವಿರುದ್ಧ ರೈತರ ಬೃಹತ್ ಪ್ರತಿಭಟನೆ

ನಮ್ಮ ಬೇಡಿಕೆಗಳಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಘಟಕ, ಜಯದೇವ ಹೃದಯದ ಆಸ್ಪತ್ರೆಯ ಘಟಕಗಳನ್ನು ಮಂಗಳೂರಿನಲ್ಲಿ ಸ್ಥಾಪಿಸುವುದೂ ಪ್ರಧಾನ ಬೇಡಿಕೆಗಳಾಗಿದ್ದವು ಎಂದು ಹೇಳಿದರು.

ಈಗ ಸರಕಾರದ ಮಟ್ಟದಲ್ಲಿ‌ ನಮ್ಮ ಬೇಡಿಕೆಗಳು ಚರ್ಚೆಯಾಗ ತೊಡಗಿದೆ. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯದ ಆಸ್ಪತ್ರೆಯ ಘಟಕಗಳನ್ನು ಮಂಗಳೂರಿನಲ್ಲಿ ಸ್ಥಾಪಿಸುವ ಕುರಿತು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿರುವುದಾಗಿ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.

ಅವರಿಗೆ ಧನ್ಯವಾದಗಳು. ಈ ಕುರಿತಾಗಿ ರಾಜ್ಯ ಸರಕಾರ ಶೀಘ್ರ ನಿರ್ಧಾರ ಕೈಗೊಳ್ಳಬೇಕು, ಖಾಸಗಿ ಮೆಡಿಕಲ್ ಲಾಬಿಗಳ ಯಾವುದೇ ಒತ್ತಡಕ್ಕೆ ತಲೆಬಾಗಬಾರದು ಎಂದು ಆಗ್ರಹಿಸುತ್ತೇವೆ. ಖಾಸಗಿ ಆಸ್ಪತ್ರೆಗಳ ದುಬಾರಿ ದರ ಪಾವತಿಸಲಾಗದೆ ಕಂಗಾಲಾಗುತ್ತಿರುವ ಕರಾವಳಿಯ ಜನತೆಯ ನೆರವಿಗೆ ಈ ಮೂಲಕ ಧಾವಿಸಬೇಕು ಎಂದು ರಾಜ್ಯ ಸರಕಾರ ಹಾಗು ಮುಖ್ಯಮಂತ್ರಿ ಗಳಲ್ಲಿ ವಿನಂತಿಸುತ್ತೇವೆ ಎಂದು ಹೇಳಿದರು.

ಇದನ್ನೂ ನೋಡಿ: ಡಿಸೆಂಬರ್ 10| ಮಾನವ ಹಕ್ಕುಗಳ ದಿನ ; ನಮ್ಮ ದೈನಂದಿನ ಹಕ್ಕುಗಳು Janashakthi Media

Donate Janashakthi Media

Leave a Reply

Your email address will not be published. Required fields are marked *