ಮಂಡ್ಯ : ಸಾಕಷ್ಟು ಅನುಮಾನ, ಆಕ್ರೋಶಗಳ ನಡುವೆ ಇದ್ರಿಶ್‌ ಪಾಷಾ ಅಂತ್ಯಕ್ರಿಯೆ

ಮಂಡ್ಯ: ಕನಕಪುರ ತಾಲ್ಲೂಕು ಸಾತನೂರು ಬಳಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ನಗರದ ಸಬ್ದರಿಯಾಬಾದ್‌ ಬಡಾವಣೆಯ ಇದ್ರಿಶ್‌ ಪಾಷಾ ಅವರ ಅಂತ್ಯಕ್ರಿಯೆಯನ್ನು ನೆನ್ನೆ ದಿನ  ಶಂಕರಮಠ ಬಳಿಯ ಖಬರಸ್ಥಾನದಲ್ಲಿ ನಡೆಸಲಾಯಿತು.

ಗುತ್ತಲು ಬಡಾವಣೆ, ಸಬ್ದರಿಯಾಬಾದ್‌ನ ಇದ್ರಿಶ್‌ ಪಾಷಾ ನಿವಾಸದಿಂದ ಖಬರಸ್ಥಾನದವರೆಗೂ ಮೃತದೇಹದ ಮೆರವಣಿಗೆ ನಡೆಯಿತು. ಲಾರಿ, ಬಸ್‌ಗಳಲ್ಲಿ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಜನರು ಇದ್ರಿಶ್‌ ಪಾಷಾ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದರು. ಮೆರವಣಿಗೆಯುದ್ದಕ್ಕೂ ಬೈಕ್‌ ರ‍್ಯಾಲಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕೆ.ಆರ್‌.ವೃತ್ತದಲ್ಲಿ ಕೆಲಕಾಲ ಮೃತದೇಹ ಇಟ್ಟು ಕೆಲಕಾಲ ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಇತ್ತು, ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿದ್ದರು. ಪುನೀತ್‌ ಕೆರೆಹಳ್ಳಿ ಹಾಗೂ ಆತನ ಸಹಚರರೇ ಇದ್ರಿಶ್ ಪಾಷಾ ಅವರನ್ನು ಕೊಲೆ ಮಾಡಿದ್ದಾರೆ, ಈ ಬಗ್ಗೆ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ. ಪೊಲೀಸರು ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸಬೇಕು. ಕೊಲೆಗಾರರು ಮೊದಲು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ, ಹಣ ನೀಡದೇ ಇದ್ದಾಗ ಕೊಲೆ ಮಾಡಿದ್ದಾರೆ. ಕೊಲೆಗಾರರ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ : ಜಾನುವಾರು ವ್ಯಾಪಾರಿ ಹತ್ಯೆ ಪ್ರಕರಣ : ಪುನೀತ್ ಕೆರೆಹಳ್ಳಿ ಬಂಧನ

ಕನಕಪುರ, ಮಂಡ್ಯ ಭಾಗದಲ್ಲಿ ಯಾವುದೇ ಕೋಮು ದ್ವೇಷವಿಲ್ಲ, ಇಲ್ಲಿಯ ಜನರು ಒಗ್ಗಟ್ಟಿನಿಂದ ಇದ್ದಾರೆ. ಆದರೆ ಹೊರಗಿನ ವ್ಯಕ್ತಿಗಳು ಇಲ್ಲಿಗೆ ಬಂದು ಈ ಭಾಗದ ಕೋಮು ಸೌಹಾರ್ದ ನು ಹಾಳುಗೆಡವಲು ಯತ್ನಿಸಿದ್ದಾರೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಶಾಂತಿಗೆ ಭಂಗ ತರುತ್ತಿರುವವ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Donate Janashakthi Media

Leave a Reply

Your email address will not be published. Required fields are marked *