ಮಂಡ್ಯ | ಪ್ರಭಾಕರ ಭಟ್ ವಿರುದ್ಧ ಮತ್ತೊಂದು ದೂರು ದಾಖಲು

ಮಂಡ್ಯ: ಮುಸ್ಲಿಂ ಮಹಿಳೆಯರನ್ನು ಅವಹೇಳನ ಮಾಡಿದ ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಮಿತಿ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಗೆ ಮಂಗಳವಾರ ದೂರು ನೀಡಿದೆ.  ದೂರು ಸ್ವೀಕರಿಸಿದರು ಪೊಲೀಸರು ಭಟ್ ವಿರುದ್ಧ ಶ್ರಿರಂಗಪಟ್ಟಣದಲ್ಲಿ ದಾಖಲಾಗಿರುವ ಎಫ್ಐಆರ್‌ ಜೊತೆಗೆ ಅಳವಡಿಸಿಕೊಳ್ಳಲು ವಿನಂತಿಸಲಾಗಿದೆ ಎಂದು ಹೇಳಿದ್ದಾರೆ.

ಭಾನುವಾರ ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ನಡೆದ ಹನುಮ ಜಯಂತಿ ಆಂಗವಾಗಿ ಆಯೋಜಿಸಿದ್ದ ಹನುಮಮಾಲೆ ಸಂಕೀರ್ತನಾ ಯಾತ್ರೆ ಸಮಾರಂಭದಲ್ಲಿ ಮಾತನಾಡಿದ್ದ ಕಲ್ಲಡ್ಕ ಪ್ರಭಾಕರ ಭಟ್, “ಮುಸ್ಲಿಂ ಮಹಿಳೆಯರಿಗೆ ದಿನಕ್ಕೆ ಒಬ್ಬ ಗಂಡ. ಅವರಿಗೆ ಪರ್ಮೆನೆಂಟ್ ಗಂಡ ಇರಲಿಲ್ಲ. ಪರ್ಮೆನೆಂಟ್ ಗಂಡನನ್ನ ಕೊಟ್ಟಿದ್ದು ಮೋದಿ ಸರ್ಕಾರ. ಮುಸ್ಲಿಂ ಯುವಕರು ಮಾತ್ರ ಅಲ್ಲ. ಮುಸ್ಲಿಂ ಯುವತಿಯರು ಮೋಸ ಮಾಡುತ್ತಿದ್ದಾರೆ. ಹಿಂದೂ ಯುವಕ ಯುವತಿಯರನ್ನ ಲವ್ ಜಿಹಾದ್ ಮಾಡುತ್ತಿದ್ದಾರೆ. ನಿಮ್ಮಲ್ಲಿ ಯುವತಿ ಯುವಕರು ಇಲ್ಲವೇ?” ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಮುಸ್ಲಿಂ ಮಹಿಳೆಯರ ಅವಹೇಳನ | ಹೋರಾಟಗಾರ್ತಿ ನಜ್ಮಾ ನಜೀರ್ ದೂರು; ಕಲ್ಲಡ್ಕ ಭಟ್ ವಿರುದ್ಧ ಎಫ್‌ಐಆರ್

“ಕಲ್ಲಡ್ಕ ಭಟ್ ಕೀಳು ಅಭರುಜಿಯ ಮಾತುಗಳನ್ನಾಡುವಾಗ ದೇಶದ ಪ್ರಧಾನ ಮಂತ್ರಿಯ ಹೆಸರನ್ನೂ ಬಳಸಿದ್ದಾರೆ ಎನ್ನುವುದು ಅತ್ಯಂತ ಆಘಾತಕಾರಿ ಸಂಗತಿಯಾಗಿದ್ದು, ಇದು ಮಹಿಳೆಯರ ಘನತೆಗೆ ಕುಂದುಂಟುಮಾಡುವ ದುರುದ್ದೇಶದಿಂದಲೆ ಆಡಿದ ಮಾತುಗಳಾಗಿವೆ” ಎಂದು ಜನವಾದಿ ಸಂಘಟನೆ ಹೇಳಿದೆ. ಸಾರ್ವಜನಿಕವಾಗಿ ಮಹಿಳೆಯರ ವಿರುದ್ಧ ಅವಮಾನಕರವಾಗಿ, ಅವರ ಘನತೆಗೆ ಕುಂದುಂಟು ಮಾಡುವ ರೀತಿ ಮಾತನಾಡುವುದು ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಅವರ ಮಾತುಗಳಲ್ಲಿ ಕೋಮುಗಳ ಮಧ್ಯೆ ವೈಷಮ್ಯ ಹುಟ್ಟಿಸುವ ದುರುದ್ದೇಶ ಕೂಡಾ ಗೋಚರಿಸುತ್ತದೆ ಎಂದು ದೂರಿನಲ್ಲಿ ತಿಳಿಸಿದೆ.

“ಧರ್ಮ ಮತ್ತು ದೇವರ ಹೆಸರು ಬಳಸಿ ಸೇರಿದ ಜನರನ್ನು ಧರ್ಮ ಧ್ವೇಷಕ್ಕೆ ಪ್ರಚೋದಿಸಲಾಗಿದೆ. ದ್ವೇಷ ಭಾಷಣಗಳನ್ನು ಮಾಡದಂತೆ ಸರ್ವೋಚ್ಚ ನ್ಯಾಯಾಲಯ ಸಿರ್ಬಂಧ ವಿಧಿಸಿದೆ, ಅದಾಗ್ಯೂ, ಪ್ರಭಾಕರ ಭಟ್ ಭಾಷಣದ ಬಹುಭಾಗ ಒ೦ದು ಕೋಮಿನ ಜನರ ವಿರುದ್ಧ ನೆರೆದಿದ್ದ ಜನಸ್ಫೋಮವನ್ನು ಪ್ರಚೋದಿಸುತ್ತಿದ್ದುದು ಕೇಳಬಂದಿದೆ. ಇದು ಸರ್ವೋಚ್ಚ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದ್ದು, ನ್ಯಾಯಾಂಗ ನಿಂದನೆಯೂ ಆಗುತ್ತದೆ” ಎಂದು ಸಂಘಟನೆಯು ಪ್ರತಿಪಾದಿಸಿದೆ.

“ಭಟ್ ವಿರುದ್ಧ ಈ ಹಿಂದೆ ಕೂಡ ಇಂತಹದೇ ಕಾರಣಕ್ಕೆ ಪ್ರಕರಣಗಳೂ ದಾಖಲಾಗಿದ್ದು, ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಸಂವಿಧಾನದ ಆಶಯಗಳಗೆ ವಿರುದ್ಧವಾಗಿ ಮಾತನಾಡುತ್ತ ಜನರನ್ನು ಹಿಂಸೆಗೆ ಪ್ರಚೋದಿಸುವ ಪ್ರಯತ್ಯವನ್ನು ಮಾಡುತ್ತಿದ್ದಾರೆ. ಅಲ್ಲದೆ ಈ ಕಾರ್ಯಕ್ರಮದ ಆಯೋಜಕರಾದ ಹಿ೦ದೂ ಜಾಗರಣ ವೇದಿಕೆಯವರು ಮತ್ತು ಇತರರು ಸೇರಿ ಮಂಡ್ಯ ಜಿಲ್ಲೆ ಮತ್ತು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕದಡುವ ಉದ್ದೇಶದಿಂದಲೇ ಈ ವ್ಯಕ್ತಿಯನ್ನು ಕರೆಯಿಸಿ ಧ್ವೇಷ ಭಾಷಣ ಮಾಡಿಸಿರುತ್ತಾರೆ” ಎಂದು ಸಂಘಟನೆ ದೂರಿನಲ್ಲಿ ತಿಳಿಸಿದೆ.

ವಿಡಯೊ ನೋಡಿ: ಕಲ್ಲಡ್ಕ ಪ್ರಭಾಕರ್‌ ಭಟ್‌ನದ್ದು ಕೊಳಕು ಮನಸ್ಸು, ಭಯೋತ್ಪಾದಕ ಮನಸ್ಥಿತಿ – ಹೋರಾಟಗಾರರ ಆಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *