ನಾಗ್ಪುರ: ಸಂಬಂಧಿಕರ ಮೇಲಿನ ದ್ವೇಷದಿಂದ 40 ವರ್ಷದ ವ್ಯಕ್ತಿಯೊಬ್ಬ ತನ್ನ ಮಗಳನ್ನು ಕೊಲೆ ಮಾಡಿ, ಆತ್ಮಹತ್ಯೆ ನಾಟಕವಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಗಳ ಕೈಯಿಂದಲೇ ಆತ್ಮಹತ್ಯೆ ಕಾರಣವೆಂಬಂತೆ ಪತ್ರ ಬರೆಸಿದ ಆರೋಪಿಯು, ನಂತರ ಕೊಲೆ ಮಾಡಿದ್ದಾನೆ.
ನವೆಂಬರ್ 6 ರಂದು ನಾಗ್ಪುರದ ಕಾಲಮ್ನಾ ಪ್ರದೇಶದಲ್ಲಿ 16 ವರ್ಷದ ಹುಡುಗಿ ನೇಣು ಹಾಕಿಕೊಂಡಂತೆ ಆಕೆಯ ಮೃತದೇಹ ಪತ್ತೆಯಾಗಿತ್ತು. ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ತಂದೆಯನ್ನು ಬಳಿಕ ಬಂಧಿಸಲಾಗಿದ್ದು, ತನಿಖೆ ವೇಳೆ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಹಾಗೂ ಕೊಲೆಗೆ ಕಾರಣವೇನೆಂಬುದನ್ನು ಸಹ ಹೇಳಿದ್ದಾರೆ.
ಆರಂಭದಲ್ಲಿ ಪೊಲೀಸರು ಈ ಪ್ರಕರಣವನ್ನು ಆತ್ಮಹತ್ಯೆಯ ಪ್ರಕರಣವೆಂದು ದಾಖಲಿಸಿಕೊಂಡಿದ್ದರು. ಅಲ್ಲದೆ, ಬಾಲಕಿಯ ಮಲತಾಯಿ, ಚಿಕ್ಕಪ್ಪ, ಚಿಕ್ಕಮ್ಮ ಹಾಗೂ ಅಜ್ಜಿ – ತಾತ ಈ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂದೂ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಆದರೆ, ಮೃತ ಬಾಲಕಿಯ ತಂದೆಯ ಮೊಬೈಲ್ ಫೋನು ಪರಿಶೀಲಿಸಿದ ನಂತರ ಆರೋಪಿ ಮೇಲಿನ ಅನುಮಾನಗೊಂಡು ತನಿಖೆ ನಡೆಸಿದಾಗ ಆತ್ಮಹತ್ಯೆಯಾಗಿ ಕಾಣುವಂತೆ ಮಾಡಿ ಕೊಲೆ ಮಾಡಿರುವುದು ಬಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಲಕಿ ಸಾಯುವ ಮುನ್ನ ಆಕೆ ತನ್ನ ಸಂಬಂಧಿಕರ ಹೆಸರು ಬರೆದಿಟ್ಟು 5 ಬಾರಿ ಆತ್ಮಹತ್ಯೆ ಕಾರಣಕರ್ತರೆಂದು ಪತ್ರ ಬರೆದಿದ್ದಳು. ನಂತರ, ಫ್ಯಾನಿಗೆ ಹಗ್ಗ ಕಟ್ಟಿ ನೇಣು ಹಾಕಿಕೊಳ್ಳುವಂತೆ ನಟಿಸುವಂತೆ ಮಾಡು ಎಂದು ಎಂದು ಹೇಳಿದ ಆರೋಪಿ ಕೂಡಲೇ ನಂತರ ಸ್ಟೂಲ್ ಅನ್ನು ತಳ್ಳಿ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ರೀತಿ ಕೊಲೆ ಮಾಡಿದ್ದಾನೆ. ಬಾಲಕಿಯ ತಂದೆ ಹಾಗೂ 12 ವರ್ಷದ ತಂಗಿಯೇ ಎದುರೇ ಬಾಲಕಿ ಬಲಿಯಾಗಿದ್ದಾಳೆ ಎಂದು ಅಧಿಕಾರಿ ತಿಳಿಸಿದ್ದಾರೆ.