ಫ್ಲೈ ಓವರ್ ಮೇಲೆ ನಿಂತು ಹಣ ಎಸೆದ ಅಸಾಮಿ : ಮುಗಿಬಿದ್ದ ಜನ!

ಬೆಂಗಳೂರು: ನಗರದ ಮಾರ್ಕೆಟ್​ ಫ್ಲೈ  ಓವರ್​​ನಿಂದ ಅನಾಮಿಕ ವ್ಯಕ್ತಿಯೋರ್ವ ಹಣದ ಮಳೆಯನ್ನೇ ಸುರಿಸಿದ್ದಾನೆ. ಇಂದು ಮಧ್ಯಾಹ್ನದ ವೇಳೆ ಫ್ಲೈ ಓವರ್​ ಮೇಲೆ ಬಂದಿದ್ದ ವ್ಯಕ್ತಿ ಚೀಲದಿಂದ ಹಣವನ್ನು ತೆಗೆದು ಜನರ ಮೇಲೆ ಎಸೆದಿದ್ದಾನೆ. ಹಣ ಎಸೆಯುವ ದೃಶ್ಯ ಮೊಬೈಲ್  ನಲ್ಲಿ ಸೆರೆಯಾಗಿದ್ದು, ಆ ವಿಡಿಯೋ ವೈರಲ್‌ ಆಗಿದೆ.

ಹಣ  ಆಯ್ದುಕೊಳ್ಳಲು ಜನರು ಮುಗಿಬಿದ್ದಿದ್ದರು. ಅಪಚಿರ ವ್ಯಕ್ತಿ ಹತ್ತು ರೂಪಾಯಿ ಹಾಗೂ ಐದುನೂರು ಮುಖಬೆಲೆಯ ನೋಟಗಳನ್ನು ಫ್ಲೈ ಓವರ್​ನಿಂದ ಎಸೆದಿದ್ದಾನೆ. ಇನ್ನು ಹಣ ಎಸೆಯುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಕೆಲ ಜನರು ಹಣ ಎಸೆಯಬೇಡಿ ನಮಗೆ ಕೊಡಿ ಎಂದು ಮನವಿ ಮಾಡಿದ್ದಾರೆ. ಇನ್ನು ಕೆಲವರು ಈತ ಏಕೆ ಈ ರೀತಿ ಹಣ ಎಸೆಯುತ್ತಿದ್ದಾನೆ ಎಂದು ಕಂಡು ಕ್ಷಣ ಕಾಲ ಶಾಕ್ ಆಗಿದ್ದಾರೆ. ಏಕಾಏಕಿ ವ್ಯಕ್ತಿ ಹಣ ಎಸೆದ ಪರಿಣಾಮ ಸ್ಥಳದಲ್ಲಿ ಕ್ಷಣ ಕಾಲ ಟ್ರಾಫಿಕ್​ ಸಮಸ್ಯೆ ಎದುರಾಗಿತ್ತು. ಆದರೆ ಕೂಡಲೇ ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ಜನರನ್ನು ಸ್ಥಳದಿಂದ ಕಳುಹಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರು.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ, ಕೆಆರ್ ಮಾರ್ಕೆಟ್ ಫ್ಲೈ ಓವರ್​​ ಮೇಲೆ ನಿಂತು ಹಣ ಎಸೆದು ವ್ಯಕ್ತಿ ಹೋಗಿದ್ದಾನೆ. ಹತ್ತು ರೂಪಾಯಿ ನೋಟುಗಳನ್ನ ವ್ಯಕ್ತಿ ಎಸೆದು ಹೋಗಿದ್ದು, ಆದರೆ ಎಷ್ಟು ನೋಟು ಎಸೆದಿದ್ದಾರೆ ಅನ್ನೋ ಬಗ್ಗೆ ಮಾಹಿತಿ ಇಲ್ಲ. ಸ್ಥಳಕ್ಕೆ ಸಿಟಿ ಮಾರ್ಕೆಟ್​ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಣ ಎಸೆದು ಹೋದ ವ್ಯಕ್ತಿ ಪತ್ತೆ ಮಾಡಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

 

 

ಹಣ ಎಸೆದ ವ್ಯಕ್ತಿ ಕಬ್ಬಡಿ ಆಟಗಾರ : ಹಣ ಎಸೆದು ಹೋದ ವ್ಯಕ್ತಿ ಬೆಂಗಳೂರಿನ ನಿವಾಸಿ ಅರುಣ್​ ಎನ್ನಲಾಗಿದೆ. ಅರುಣ್ ವೃತ್ತಿಯಲ್ಲಿ ಕಬಡ್ಡಿ ಆಟಗಾರ ಹಾಗೂ ಇವೆಂಟ್ ಮ್ಯಾನೇಜರ್ ಆಗಿದ್ದಾರೆ. ಆದರೆ ಈ ರೀತಿ ಏಕೆ ಹಣ ಎಸೆದು ಹೋಗಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬ್ಯಾಗ್​ನಲ್ಲಿ ಹಣ ತಂದಿದ್ದ ಅರುಣ್, ಫ್ಲೈ ಓವರ್ ಮೇಲಿಂದ ಜನರು ಇರುವ ಕಡೆ ಹಣ ಎಸೆದು ಸ್ಥಳದಿಂದ ತೆರಳಿದ್ದರು. ವಿಡಿಯೋ ನೋಡಿದ ಹಲವರು ಕತ್ತಲ್ಲಿ ದೊಡ್ಡ ಗಡಿಯಾರ ನೇತ್ಹಾಕಿಕೊಂಡು ಹಣ ಎಸೆದಿದ್ದು ಏಕೆ ಎಂದು ತಲೆಕೆಡಿಸಿಕೊಂಡಿದ್ದಾರೆ.

ಅರುಣ್​​ಗೆ ಪೊಲೀಸರ ಕರೆ : ಯಾವುದೇ ಸಿನಿಮಾದಲ್ಲಿ ಆಗಸದಿಂದ ಸಿನಿಮೀಯ ರೀತಿಯಲ್ಲಿ ಹಣ ಎಸೆದ ಬಳಿಕ ಪ್ರತಿಕ್ರಿಯೆ ನೀಡಿರೋ ಅರುಣ್, ತಾನು ಯಾವುದೇ ರೀಲ್ಸ್ ಮಾಡೋಕೆ ಹಣ ಎಸೆದಿಲ್ಲ. ಒಂದು ಉದ್ದೇಶ ಇಟ್ಕೊಂಡು ಈ ರೀತಿ ಮಾಡಿದ್ದೀನಿ. ನನಗೆ ಸ್ವಲ್ಪ ಸಮಯ ಕೊಟ್ಟರೆ ಮಾತನಾಡುತ್ತೇನೆ. ಪೊಲೀಸರು ಈಗಾಗಲೇ ನನಗೆ ಕರೆ ಮಾಡಿ ಮಾತನಾಡಿದ್ದಾರೆ. ಅವರಿಗೂ ಮಾಹಿತಿ ನೀಡಿದ್ದೇನೆ ಎಂದು ಹೇಳಿದ್ದಾನೆ.

Donate Janashakthi Media

Leave a Reply

Your email address will not be published. Required fields are marked *