ಅರ್ಜೆಂಟೀನಾ ಉಪಾಧ್ಯಕ್ಷೆ ಮೇಲೆ ಗುಂಡಿನ ದಾಳಿ:  ಪ್ರಾಣಾಪಾಯದಿಂದ ಪಾರು

ಬ್ಯೂನಸ್ ಐರಿಸ್: ಅರ್ಜೆಂಟೀನಾದ ಉಪಾಧ್ಯಕ್ಷೆ ಕ್ರಿಸ್ಟಿನಾ ಫೆರ್ನಾಂಡಿಸ್ ಡಿ ಕಿರ್ಚ್ನರ್ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವ್ಯಕ್ತಿಯೊಬ್ಬ ಕೊಲೆಗೆ ಯತ್ನಿಸಿದ್ದಾನೆ.

ಕ್ರಿಸ್ಟಿನಾ ತಮ್ಮ ಕಾರಿನಿಂದ ಇಳಿದಾಗ ಅವರನ್ನು ಮಾತನಾಡಿಸಲು ಅನೇಕರು ಮುಂದಾದರು. ಜನಸಂದಣಿ ನಡುವೆ ಇದ್ದ ವ್ಯಕ್ತಿಯೊಬ್ಬ ಕ್ರಿಸ್ಟಿನಾ ಅವರ ಬಳಿಗೆ ಬಂದು, ತಲೆಗೆ ಗನ್‌ ಮೂಲಕ ಗುರಿಯಿಟ್ಟಿದ್ದಾನೆ. ಈ ವೇಳೆ ಗುಂಡು ಹಾರಿಲ್ಲ. ತಕ್ಷಣ ಎಚ್ಚೆತ್ತ ರಕ್ಷಣಾ ಸಿಬ್ಬಂದಿ, ಆ ವ್ಯಕ್ತಿಯನ್ನು ವಶಕ್ಕೆ ಪಡೆಯುತ್ತಾರೆ. ಅದೃಷ್ಟವಶಾತ್‌ ಕ್ರಿಸ್ಟಿನಾ ಅವರು ಅಪಾಯದಿಂದ ಪಾರಾಗಿದ್ದಾರೆ. ದಾಳಿಕೋರನು ಬ್ರೆಜಿಲ್ ಮೂಲದ 35 ವರ್ಷದ ವ್ಯಕ್ತಿ ಎಂದು ಅಧಿಕಾರಿಗಳು ತಿಳಿಸಿದ್ದು, ತಕ್ಷಣ ಆತನನ್ನು ಬಂಧಿಸಿ ಗನ್‌ ವಶಕ್ಕೆ ಪಡೆದಿದ್ದಾರೆ.

ಫರ್ನಾಂಡೀಸ್ ಡಿ ಕಿರ್ಚ್ನರ್ ಭ್ರಷ್ಟಾಚಾರದ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದಾರೆ. ಆರೋಪಿತ ವ್ಯಕ್ತಿ ಬ್ರೆಜಿಲ್​​ ಮೂಲದವನು ಎನ್ನಲಾಗುತ್ತಿದೆ. ಆತನ ಬಂಧನ ಮಾಡಲಾಗಿದೆ. ಬಂದೂಕಿನಲ್ಲಿ ಐದು ಗುಂಡುಗಳು ತುಂಬಿದ್ದವು ಎಂದು ಹೇಳಿರುವ ಅವರು, ದಾಳಿ ನಡೆದಾಗ ನೂರಾರು ಬೆಂಬಲಿಗರು ಆಕೆಯ ಬ್ಯೂನಸ್ ಐರಿಸ್ ಮನೆಯ ಹೊರಗೆ ಜಮಾಯಿಸಿದ್ದರು.

ಘಟನೆ ಬಗ್ಗೆ ಅರ್ಜೆಂಟೀನಾ ಅಧ್ಯಕ್ಷ ಆಲ್ಬರ್ಟೊ ಫೆರ್ನಾಂಡಿಸ್ ಆತಂಕ ವ್ಯಕ್ತಪಡಿಸಿದ್ದಾರೆ. ಅರ್ಜೆಂಟೀನಾದಲ್ಲಿ ಇತ್ತೀಚಿನ ದಿನಗಳಲ್ಲಿ ರಾಜಕೀಯ ಉದ್ವಿಗ್ನತೆ ಹೆಚ್ಚಾಗಿದ್ದು, ಅರ್ಜೆಂಟೀನಾ ಪ್ರಜಾಪ್ರಭುತ್ವಕ್ಕೆ ಮರಳಿದ ನಂತರ ನಾವು ಎದುರಿಸಿದ ಗಂಭೀರ ಘಟನೆ ಇದಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಫೆರ್ನಾಂಡಿಸ್ ಡಿ ಕಿರ್ಚ್ನರ್ ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಸೆನೆಟ್ ಮತ್ತು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಾರೆಂದು ಹೇಳಲಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *