ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸುತ್ತಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷ ರಾಜ್ಯದಲ್ಲಿ ಅಧಿಕಾರ ಹಿಡಿಯುವಲ್ಲಿಗೆ ಮುನ್ನಡೆಯತ್ತ ಸಾಗಿದೆ. 292 ಸ್ಥಾನಗಳ ಪೈಕಿ 202 ಸ್ಥಾನಗಳಲ್ಲಿ ಟಿಎಂಸಿ ಪಕ್ಷ ಮುನ್ನಡೆಯಲ್ಲಿದೆ.
ವಿಧಾನಸಭೆಯಲ್ಲಿನ ಅತ್ಯಂತ ಪ್ರಬಲ ಕ್ಷೇತ್ರವೆಂದು ಗುರುತಿಸಿರುವ ನಂದಿಗ್ರಾಮದಿಂದ ಸ್ಪರ್ಧಿಸಿರುವ ಮಮತಾ ಬ್ಯಾನರ್ಜಿ ಕಣಕ್ಕಿಳಿದಿದ್ದಾರೆ. ಇವರ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಮುನ್ನಡೆಯಲ್ಲಿದ್ದಾರೆ. ಇಲ್ಲಿಯವರೆಗಿನ ಎಣಿಕೆಯಲ್ಲಿ ಸುವೆಂದು ಅಧಿಕಾರಿಯವರು ಮಮತಾ ಅವರಿಗಿಂತ ಸುಮಾರು ನಾಲ್ಕು ಸಾವಿರ ಮತ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಇದನ್ನು ಓದಿ: ಚುನಾವಣಾ ಫಲಿತಾಂಶ : ಹೊಸ ಇತಿಹಾಸದತ್ತ ಎಲ್.ಡಿ.ಎಫ್ – ಭಾರೀ ಮುನ್ನಡೆ ಕಾಯ್ದುಕೊಂಡ ಎಡರಂಗ
ಈ ಬಾರಿಯೂ ಟಿಎಂಸಿ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ಕಾರ್ಯಕರ್ತರು ವಿಜಯೋತ್ಸವ ಆಚರಿಸುತ್ತಿದ್ದರೆ, ಪಕ್ಷದ ಮುಂದಾಳು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಿನ್ನಡೆಯಲ್ಲಿದ್ದಾರೆ. ಏಕೆಂದರೆ ಖುದ್ದು ಇವರ ಖುರ್ಚಿಯೇ ಅಲ್ಲಾಡುವ ಸ್ಥಿತಿಯಲ್ಲಿದೆ.
ನಂದಿಗ್ರಾಮ ವಿಧಾನಸಭೆಯಂತೂ ಅತ್ಯಂತ ಕುತೂಹಲದ ಕೇಂದ್ರವಾಗಿದೆ. ಒಟ್ಟು ಎಂಟು ಹಂತಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತ ಎಣಿಕೆ ಇನ್ನು ಮುಂದುವರೆದಿದೆ. ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗುವ ಸಾಧ್ಯತೆಯಿದೆ.