ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಿಸುವ ಹೋರಾಟ ಇಂದಿನಿಂದ ಪ್ರಾರಂಭವೆಂದ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: “ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೋರಾಟ ಇಂದಿನಿಂದ ಪ್ರಾರಂಭವಾಗುತ್ತದೆ”. “ಆರ್ಥಿಕ ಸಬಲೀಕರಣ ಮತ್ತು ಸಮಾನ ಅವಕಾಶಗಳ ಹೊಸ ಯುಗವು ತಮ್ಮನ್ನು ಕೈಬೀಸಿ ಕರೆಯುತ್ತದೆ” ಎಂದು ಎಐಸಿಸಿ ಅಧ್ಯಕ್ಷರೂ ಆಗಿರುವ ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮೊದಲ ಹಂತದ ಲೋಕಸಭಾ ಚುನಾವಣಾ ಮತದಾನದ ಹಿನ್ನಲೆಯಲ್ಲಿ ಕರೆ ನೀಡಿದ್ದಾರೆ.

“ನನ್ನ ಪ್ರೀತಿಯ ನಾಗರಿಕರೇ, ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ಮತದಾನ ಮಾಡುತ್ತಿರುವ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ, ನಿಮ್ಮ ಮತವನ್ನು ಎಚ್ಚರಿಕೆಯಿಂದ ಚಲಾಯಿಸುವಂತೆ ನಾನು ವಿನಂತಿಸುತ್ತೇನೆ. ಸಂವಿಧಾನ

ಇದನ್ನು ಓದಿ : ಲೋಕಸಭಾ ಚುನಾವಣೆ 2024 : ಬಿಜೆಪಿ ವಿರುದ್ಧ ಮತ ಚಲಾಯಿಸಲು ಸಿದ್ಧರಾದ ರೈತ-ಕಾರ್ಮಿಕ-ಕೂಲಿಕಾರರು

ನ್ಯಾಯ ನಿಮಗಾಗಿ ಕಾಯುತ್ತಿರುವ ಭವಿಷ್ಯ. ಆರ್ಥಿಕ ಸಬಲೀಕರಣ ಮತ್ತು ಸಮಾನತೆಯ ಹೊಸ ಯುಗ ಅವಕಾಶಗಳು ನಿಮ್ಮನ್ನು ಕೈಬೀಸಿ ಕರೆಯುತ್ತವೆ ಟ್ವಿಟ್ಟರ್‌ ಎಕ್ಸ್‌ಪೋಸ್ಟ್‌ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, 2024ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದಿನಿಂದ ಆರಂಭಗೊಂಡಿದ್ದು, ಮತದಾರರು ಎಚ್ಚರಿಕೆಯಿಂದ ಮತದಾನ ಮಾಡಬೇಕು ಎಂದು ಮನವಿ ಮಾಡಿದ್ದಾಋಎ.

ಕಳೆದ 10 ವರ್ಷಗಳ ದಾಖಲೆಯ ನಿರುದ್ಯೋಗದ ಮುಂದುವರಿಕೆಗಿಂತ ಯುವ ನ್ಯಾಯದ ಮೂಲಕ ನೀವು ಉದ್ಯೋಗ ಕ್ರಾಂತಿಗೆ ಮತ ಹಾಕುತ್ತೀರಿ. ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಕಾಂಕ್ರೀಟ್ ಕ್ರಮಗಳನ್ನು ಕೈಗೊಳ್ಳುವ ‘ನಾರಿ ನ್ಯಾಯ’ ಖಾತರಿಗಾಗಿ ಮತ್ತು ಅವರ ಮನೆಯ ಉಳಿತಾಯವನ್ನು 50 ವರ್ಷಗಳ ಕನಿಷ್ಠಕ್ಕೆ ಇಳಿಸಿದ ಬೆಲೆ ಏರಿಕೆಯ ಮುಂದುವರಿಕೆಯ ವಿರುದ್ಧ ಜನರು ಮತ ಚಲಾಯಿಸುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನು ನೋಡಿ : ಬಿಜೆಪಿ ಪ್ರಣಾಳಿಕೆ : ಇವತ್ತೇನು ಎಂಬುದಕ್ಕೆ ಉತ್ತರ ಇಲ್ಲ – 25 ವರ್ಷ ಕಾಯಬೇಕು Janashakthi Media

Donate Janashakthi Media

Leave a Reply

Your email address will not be published. Required fields are marked *