ಸತ್ಯಪಾಲ್ ಮಾಲಿಕ್ ಸಂದರ್ಶನ – ಥಾಪರ್ ಜತೆ (ದಿ ವೈರ್ ನಲ್ಲಿ ಪ್ರಕಟವಾದ್ದು) ಭಾಗ 4 : ಅನುಚ್ಛೇದ ೩೭೦ರ ರದ್ದತಿ

ಅನುವಾದ : ಅಬ್ದುಲ್ ರಹಮಾನ್ ಪಾಷಾ

ದಿ ವೈರ್ (THE WIRE ) ಪೋರ್ಟಲ್‌ಗಾಗಿ, ಕರಣ್ ಥಾಪರ್,  ಆಗಸ್ಟ್ ೨೦೧೮ರಿಂದ  ಅಕ್ಟೋಬರ್ ೨೦೧೯ರ ವರೆಗೆ  ಕಾಶ್ಮೀರದ ಕೊನೆಯ ರಾಜ್ಯಪಾಲರಾಗಿದ್ದ ಸತ್ಯ ಪಾಲ್ ಮಲಿಕ್ ರೊಂದಿಗೆ ಮಾಡಿದ ಸಂದರ್ಶನದ ಸಂಕ್ಷಿಪ್ತ ಪಠ್ಯ.  ಈಗಾಗಲೇ ಭಾಗ-1 ರಲ್ಲಿ ಪೀಠಿಕೆ, 2ರಲ್ಲಿ ಕಾಶ್ಮೀರದ ವಿಧಾನಸಭೆ ವಿಸರ್ಜನೆ,ಭಾಗ 3ರಲ್ಲಿ ಫುಲ್ವಾಮಾ ದುರ್ಘಟನೆ ಕುರಿತ ಸಂದರ್ಶನದ ಭಾಗಗಳು ಇವೆ. ಈ ಭಾಗ 4ರಲ್ಲಿ ‘ಅನುಚ್ಛೇದ ೩೭೦ರ ರದ್ದತಿ’ ಕುರಿತ ಸಂದರ್ಶನದ ಭಾಗ (ಇತರ ಭಾಗಗಳು ಮುಂದಿನ ಕಂತುಗಳಲ್ಲಿ) 

ಕರಣ್: ಆಗಸ್ಟ್ ೫, ೨೦೧೯, ಅನುಚ್ಛೇದ ೩೭೦ನ್ನು ರದ್ದುಗೊಳಿಸಲಾದ ದಿನಕ್ಕೆ ಬರೋಣ. ಅದಕ್ಕಿಂತ ಎರಡೇ ದಿನ ಮುಂಚೆ ನೀವು ಆ ತರಹದ್ದೇನೂ ಆಗುವುದಿಲ್ಲ ಎಂದು ಸಾರ್ವಜನಿಕ ಭರವಸೆಯನ್ನು ನೀಡಿದ್ದಿರಿ. ನೀವು ಸ್ಪಷ್ಟವಾಗಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಿರಿ. ಮೋದಿಯವರು ನಿಮಗೆ ಆ ಹುಸಿ ಭರವಸೆಯನ್ನು ಕೊಡಲು ಹೇಳಿದ್ದರೇ?

ಮಲಿಕ್: ಇಲ್ಲ. ಅವರು ಅದನ್ನು ಮಾಡುತ್ತಿದ್ದಾರೆ, ಇಲ್ಲವೇ ಯಾವುದನ್ನೂ ಅವರು ನನಗೆ ತಿಳಿಸಿರಲಿಲ್ಲ. ಮೆಹಬೂಬಾ ಅವರು ನನ್ನನ್ನು ನೋಡಲು ಬಂದಿದ್ದಾಗ, ಹಾಗೆಲ್ಲಾ ಮಾಡುವುದು ಜೇಬಿನಿಂದ ಕಾಗದವನ್ನು ತೆಗೆದಂತೆ ಮಾಡಲು ಬರುವ ಸಂಗತಿಯಲ್ಲ.  ಸಂಸತ್ತು ನಡೆಯುತ್ತಾ ಇದೆ. ಹನ್ನೊಂದು ಗಂಟೆಗೆ ಸಂಸತ್ತಿನಲ್ಲಿ ಇರಿಸುತ್ತಾರೆ, ಸಂಜೆಯೊಳಗೆ ಪಾಸಾಗುತ್ತದೆ. ಈ ಕುರಿತು ಪ್ರಾಮಾಣಿಕವಾಗಿ ನನಗೆ ಮಾಹಿತಿ ಇರಲಿಲ್ಲ.

ಕರಣ್: ಎ ಎನ್ ಐ ಗೆ ನೀವು ನೀಡಿದ ವಿಡಿಯೋ ಆಗಿರುವ ನಿಮ್ಮದೊಂದು ಸಂದರ್ಶನದಲ್ಲಿ ನೀವು, ೩ನೇ ತಾರೀಖಿನಂದು ಹೀಗೆ ಹೇಳಿದ್ದಿರಿ, “ಬರೀ ಹುಸಿ ಸುದ್ದಿಗಳು ಓಡಾಡುತ್ತಿವೆ. ನನಗೆ ಈ ಕುರಿತು ಯಾವುದೇ ಮಾಹಿತಿ ಇಲ್ಲ. ನಾನು ದೆಹಲಿಯಲ್ಲಿರುವ ಎಲ್ಲರನ್ನೂ ಮಾತಾಡಿದ್ದೇನೆ. ಆದರೆ, ಅವರು ಇದನ್ನು ಮಾಡುತ್ತಾರೆ ಎಂಬುದರ ಕುರಿತು ನನಗೆ ಯಾವುದೇ ಸುಳಿವು ನೀಡುವುದಿಲ್ಲ. ಒಬ್ಬರು ಹೇಳುತ್ತಿರುವರು ಮೂರು ಭಾಗ ಮಾಡಲಾಗುವುದು ಎಂದು, ಇನ್ನೊಬ್ಬರು ಹೇಳುತ್ತಾರೆ ಅನುಚ್ಛೇದ ೩೫ ಮತ್ತು ೩೭೦ನ್ನು… ಗೃಹ ಮಂತ್ರಿಗಳಾಗಲೀ ಪ್ರಧಾನಿಯಾಗಲೀ ಇದನ್ನು ನನ್ನೊಂದಿಗೆ ಚರ್ಚಿಸಿಲ್ಲ.

ಮಲಿಕ್: ನನಗೆ ಈ ಕುರಿತು ಏನೂ ಗೊತ್ತಿರಲಿಲ್ಲ. ಒಂದು ದಿನ ಮುಂಚೆ ಅಂದರೆ ೪ನೇ ತಾರೀಖು ರಾತ್ರಿ, ಗೃಹ ಮಂತ್ರಿಗಳ ಫೋನ್ ಬಂತು, ಅವರೆಂದರು, ನಾನು ಪತ್ರ ಕಳಿಸುತ್ತಿದ್ದೇನೆ. ಅದನ್ನು ನಾಳೆ ನಿಮ್ಮ ಸಮಿತಿಯಲ್ಲಿ ಪಾಸು ಮಾಡಿಸಿ ಹನ್ನೊಂದು ಗಂಟೆಗಿAತ ಮುಂಚೆ ಕಳಿಸಿಕೊಡಬೇಕು…

ಕರಣ್ ಥಾಪರ್-ಸತ್ಪಾಲ್ ಮಲಿಕ್ ಇಡೀ (ಇಂಗ್ಲಿಷ್) ಸಂದರ್ಶನದ ಇಡೀ ವೀಡಿಯೋ ಲಿಂಕ್:

ಕರಣ್: ಎಂದರೆ, ನೀವು ಎ ಎನ್ ಐ ಗೆ ಸಂದರ್ಶನ ನೀಡುವ ಹೊತ್ತಿನಲ್ಲಿ ನಿಮಗೆ ಈ ಕುರಿತು ಏನೂ ಗೊತ್ತಿರಲಿಲ್ಲ.

ಮಲಿಕ್: ಇಲ್ಲ.

ಕರಣ್: ಆಗ ಇದ್ದದ್ದು ರಾಷ್ಟಪತಿ ಆಡಳಿತ, ನೀವು ರಾಜ್ಯಪಾಲರಾಗಿದ್ದಿರಿ. ನಿಮಗೆ ಹೇಳಬೇಕಾಗಿತ್ತಲ್ಲವೇ? ನೀವು ನಿಜವಾದ ಆಳುವವರಾಗಿದ್ದಿರಿ. 

ಮಲಿಕ್: ನನಗೆ ಈ ಕುರಿತು ಏನನ್ನೂ ಹೇಳಲಿಲ್ಲ. ನನಗಿದು ಬೇಸರವೂ ಆಗಲಿಲ್ಲ.

ಕರಣ್: ನಿಮಗೆ ಯಾವಾಗಲೂ ಏನನ್ನೂ ಹೇಳಿರ್ಲಿಲ್ಲ.

ಮಲಿಕ್: ಅದಕ್ಕಿಂತ ಬಹಳ ಮುಂಚೆ ನಾನು ದೆಹಲಿಗೆ ಹೋಗಿದ್ದಾಗ ಮಾತುಕತೆಯಾಗಿತ್ತು.  ಪ್ರಧಾನಿಗಳು ಕೇಳಿದ್ದರು, ಇದನ್ನು ಮಾಡಿದರೆ ಏನೂ ಆಗುವುದಿಲ್ಲ ತಾನೇ ಎಂದು ಕೇಳಿದ್ದರು. ನೋಡಿ, ಕರಣ್ ಭಾಯಿ. ಸೆನ್ಸ್ ಆಫ್ ಫೆಟಿಗ್ ಅನ್ನೋದನ್ನು ಅಲ್ಲಿ ಹುಟ್ಟುಹಾಕಿದ್ದರು. ನಾನು ಅಲ್ಲಿನ ಜನರಿಗೆ ಹೇಳಿದೆ, ನೋಡಿ, ನಿಮ್ಮ ಮಕ್ಕಳು ಸಾಯುತ್ತಾರೆ. ೨೫೦ ಮಕ್ಕಳು. ಜಗತ್ತಿನ ಮೊದಲ ಅಥವಾ ಎರಡನೇ ಸ್ಥಾನದಲ್ಲಿರುವ ಸೈನಿಕರೊಂದಿಗೆ ಹೋರಾಡುತ್ತಿದ್ದಾರೆ. ಏನನ್ನು ಸಾಧಿಸುವಿರಿ? ಇವರ ಮಕ್ಕಳು ಲಂಡನ್ನಿನಲ್ಲಿ ಓದುತ್ತಿದ್ದಾರೆ. ಜಗಳದಿಂದ ಏನೂ ಸಿಗುವುದಿಲ್ಲ, ಮಾತುಕತೆಯಿಂದ ಎಲ್ಲವೂ ಸಿಗುತ್ತದೆ.

ಕರಣ್: ಮೋದಿಯವರು ನಿಮ್ಮೊಂದಿಗೆ ೩೭೦ರ ಕುರಿತು ಮಾತಾಡಿದಾಗ..

ಮಲಿಕ್: ನೋಡಿ, ಇದು ನಮಗೆ ಗೊತ್ತಿತ್ತು. ಅವರು ಅಧಿಕಾರಕ್ಕೆ ಬಂದರೆ ೩೭೦ನ್ನು ರದ್ದು ಪಡಿಸುತ್ತರೆ ಎಂದು.. ಇದನ್ನು ಅವರು ಚುನಾವಣಾ ಪ್ರಚಾರದ ಎಲ್ಲಾ ಭಾಷಣಗಳಲ್ಲಿ ಹೇಳುತ್ತಿದ್ದರು. ಕೆಲವರು ಹೇಳುತ್ತಾರೆ ಇದಕ್ಕೆ ಜನತೆಯ ಸಮರ್ಥನೆ ಇರುವುದಿಲ್ಲ ಎಂದು. ಆದರೆ ಅವರನ್ನು ಗೆಲ್ಲಿಸಿ ಜನತೆ ಸಮರ್ಥನೆಯನ್ನು ನೀಡಿದರಲ್ಲಾ! ಅವರು ಇದನ್ನು ಸಂಸತ್ತಿನಲ್ಲಿಯೂ ಹೇಳುತ್ತಿದ್ದರು, ೩೭೦ರ ವಿರುದ್ಧ.

ಕರಣ್: ಅನುಚ್ಛೇದ ೩೭೦ಯನ್ನು ರದ್ದುಗೊಳಿಸುವುದು ಬಿಜೆಪಿಯ ಹಲವು ದಶಕಗಳ ಗುರಿಯಾಗಿತ್ತು. ಅವರು ರಾಜ್ಯವನ್ನು ಎರಡು ಭಾಗವಾಗಿ ಏಕೆ ವಿಭಜಿಸಿದರು. ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಏಕೆ ಡಿಮೋಟ್ ಮಾಡಿದರು. ಹಲವು ಜನ ಕಾಶ್ಮೀರಿಗಳಿಗೆ ಇದು ಉದ್ದೇಶಪೂರ್ವಕ ಅವಮಾನ ಎಂದು ಅನ್ನಿಸಿತು. 

ಮಲಿಕ್: ಕಾಶ್ಮೀರದ ಜನ ೩೭೦ನ್ನು ರದ್ದುಗೊಳಿಸಿದ್ದಕ್ಕಿಂತ ಈ ವಿಚಾರದ ಕುರಿತು ಬೇಸರಗೊಂದಿದ್ದಾರೆ.  ನನಗೆ ಕೇಳಿದ್ದರೆ ನಾನು ಈ ಕ್ರಮವನ್ನು ಒಪ್ಪುತ್ತಿರಲಿಲ್ಲ. ನನ್ನ ಪ್ರಕಾರ, ಯುನಿಯನ್ ಟೆರಿಟರಿ ಮಾಡಿದಾಗ ಅಲ್ಲಿನ ಪೊಲೀಸರು ನೇರವಾಗಿ ಕೇಂದ್ರದ ಅಡಿಯಲ್ಲಿ ಬರುತ್ತದೆ. ಇಲ್ಲವಾದರೆ ಅದು ರಾಜ್ಯಪಾಲರು ಅಥವಾ ರಾಜ್ಯ ವಿಧಾನ ಸಭೆಯ ನಿಯಂತ್ರಣದಲ್ಲಿರುತ್ತದೆ. ಇಲ್ಲಿ ಪೊಲೀಸ್ ಬಂಡಾಯ ಮಾಡಬಹುದು ಎಂಬ ಒಂದು ಭಯವಿತ್ತು. ಈ ಮಾತನ್ನು ಮುಖ್ಯ ಕಾರ್ಯದರ್ಶಿಯವರೂ ನನ್ನೊಂದಿಗೆ ಹೇಳಿದ್ದರು. ನಾನು ಗೃಹ ಸಚಿವರಿಂದ ಸಂಜೆ ಬಂದ ಪತ್ರವನ್ನು ನಾಳೆ ಬೆಳಿಗ್ಗೆ ಕಳಿಸಬೇಕು ಎಂದು ಹೇಳಿದಾಗ ಮುಖ್ಯಕಾರ್ಯದರ್ಶಿ ಹೇಳಿದ್ದರು, ಮಲಿಕ್ ಸಾಬ್, ಒಂದು ಸಾವಿರ ಜನರನ್ನು ಕೊಲ್ಲಬೇಕಾಬಹುದು. ಇವರು ಪೊಲೀಸ್ ಠಾಣೆಗಳಲ್ಲಿ ನುಗ್ಗುವರು, ಶಸ್ತಾçಸ್ತçಗಳನ್ನು ಕಸಿಯುವರು. ಪೊಲೀಸರು ಬಂಡಾಯ ಏಳುವರು. ನಾನು ಇಲ್ಲಿಗೇ ರಾಜಭವನಕ್ಕೆ ಬರುತ್ತಿದ್ದೇನೆ ಎಂದು ಅವರು ಹೇಳಿದರು ನಾನೆಂದರೆ, ನಿಶ್ಚಿಂತರಾಗಿರಿ. ನಾನು ಆರು ತಿಂಗಳೇನು ಕೆಲಸ ಮಾಡಿದ್ದೇನೆ, ಅತ್ಯಂತ ವಿಶ್ವಾಸದಿಂದ ಹೇಳಬಲ್ಲೆ ಒಂದು ನಾಯಿ ಕೂಡ ಬೊಗಳುವುದಿಲ್ಲ. ಪೊಲೀಸರು ಬಂಡಾಯ ಏಳಬಹುದು ಎಂದು ಅದನ್ನು ಯು.ಟಿ. ಮಾಡಿದ್ದು ತಪ್ಪು ನಡೆ. ಪೊಲೀಸರಲ್ಲಿ ಅಂಥದ್ದೇನೂ ಆಗುತ್ತಿರಲಿಲ್ಲ. ಪೊಲೀಸರಲ್ಲಿ ನಮಗೆ ತುಂಬಾ ಬೆಂಬಲ ಇತ್ತು. ನನಗೆ ಕೇಳಿದ್ದರೆ ರಾಜ್ಯವನ್ನು ಎರಡು ಭಾಗ ಮಾಡಿದ್ದೂ ನಾನು ಒಪ್ಪುತ್ತಿರಲಿಲ್ಲ. ಇದರಿಂದ ಜನರ ಭಾವನೆಗಳಿಗ ಹೆಚ್ಚು ದಕ್ಕೆ ಆಗುವದಿತ್ತು. ಲದಾಖನ ಜನ ಕಾಶ್ಮೀರದ ಜೊತೆ ತಾರತಮ್ಯ ಎದುರಿಸುತ್ತಾ ಇದ್ದರು, ಹೆಚ್ಚು ಹತಾಶರಾಗದ್ದು, ಅದು ಕಾಶ್ಮೀರದಿಂದ ಬೇರ್ಪಡುವ ಅಪೇಕ್ಷೆ ಅವರಿಗಿತ್ತು. ಅಷ್ಟರ ಮಟ್ಟಿಗೆ ವಿಭಜನೆ ಸ್ವಾಗತಾರ್ಹವಾಗಿತ್ತೇನೊ ಆದರೆ, ಅದನ್ನು ಯು.ಟಿ ಸ್ಥಾನಕ್ಕೆ ಇಳಿಸಿದ್ದ ತಪ್ಪು. ಜನ ಇದನ್ನು ಇಷ್ಟ ಪಡುವುದಿಲ್ಲ.

Donate Janashakthi Media

Leave a Reply

Your email address will not be published. Required fields are marked *