ಅನುವಾದ : ಅಬ್ದುಲ್ ರಹಮಾನ್ ಪಾಷಾ
ದಿ ವೈರ್ (THE WIRE ) ಪೋರ್ಟಲ್‌ಗಾಗಿ, ಕರಣ್ ಥಾಪರ್, ಆಗಸ್ಟ್ ೨೦೧೮ರಿಂದ ಅಕ್ಟೋಬರ್ ೨೦೧೯ರ ವರೆಗೆ ಕಾಶ್ಮೀರದ ಕೊನೆಯ ರಾಜ್ಯಪಾಲರಾಗಿದ್ದ ಸತ್ಯ ಪಾಲ್ ಮಲಿಕ್ ರೊಂದಿಗೆ ಮಾಡಿದ ಸಂದರ್ಶನದ ಸಂಕ್ಷಿಪ್ತ ಪಠ್ಯ. ಈಗಾಗಲೇ ಭಾಗ-1 ರಲ್ಲಿ ಪೀಠಿಕೆ, 2ರಲ್ಲಿ ಕಾಶ್ಮೀರದ ವಿಧಾನಸಭೆ ವಿಸರ್ಜನೆ,ಭಾಗ 3ರಲ್ಲಿ ಫುಲ್ವಾಮಾ ದುರ್ಘಟನೆ, ಭಾಗ 4ರಲ್ಲಿ ‘ಅನುಚ್ಛೇದ ೩೭೦ರ ರದ್ದತಿ’, ಭಾಗ 5ರಲ್ಲಿ ‘ರಿಲಯನ್ಸ್ ಇನ್ಶೂರೆನ್ಸ್, ಭ್ರಷ್ಟಾಚಾರ’, ಭಾಗ 6ರಲ್ಲಿ ‘ಮೋದಿ ಬಹಳ ill informed, BBC’, ಭಾಗ 7ರಲ್ಲಿ ‘ಅದಾನಿ ಹಗರಣ’ ಕುರಿತ ಸಂದರ್ಶನದ ಭಾಗಗಳು ಇವೆ. ಈ ಭಾಗ 8 ‘ರಾಹುಲ್ ಗಾಂಧಿ,ರಾಜ್ಯಪಾಲರ ನೇಮಕ ’ ಕುರಿತ ಸಂದರ್ಶನದ ಕೊನೆಯ ಭಾಗ.
ಕರಣ್: ರಾಹುಲ್ ಗಾಂಧಿಯವರು ಸಂಸತ್ತಿನಲ್ಲಿ ಮಾತಾಡಬೇಕು ಅಂತಿದ್ರು……
ಮಲಿಕ್: ಅವರನ್ನು ಮಾತಾಡಲು ಅವಕಾಶ ಕೊಡದೇ ಇರುವುದರಿಂದ ಸಂಸದೀಯ ಜನತಂತ್ರದಲ್ಲಿ ಈ ವರೆಗೆ ಆಗಿರದಷ್ಟು ಬಹುದೊಡ್ಡ ತಪ್ಪು ಇವರು ಮಾಡಿರುವುದು. ನಾನು ಸಭಾಧ್ಯಕ್ಷರ ವಿರುದ್ಧ ಮಾತಾಡಬಯಸುವುದಿಲ್ಲ; ಆದರೆ ಅದು ತಪ್ಪಾಗಿತ್ತು, ಅವರಿಗೆ ಖಂಡಿತವಾಗಿಯೂ ಮಾತಾಡಲು ಅವಕಾಶ ಕೊಡಬೇಕಾಗಿತ್ತು. ಅವರು ಹಕ್ಕಾಗಿತ್ತು.
ಕರಣ್: ಇದು ಸಭಾಧ್ಯಕ್ಷರ ನಿರ್ಧಾರವಾಗಿತ್ತೋ, ಇನ್ಯಾರದೋ ನಿರ್ಧಾರವನ್ನು ಇವರು ಪಾಲಿಸಿದರೋ?
ಮಲಿಕ್: ಇನ್ಯಾರದಾದರೂ ನಿರ್ಧಾರ ಇರುತ್ತದೆಯೇನು? ನಿಮಗೆ ಅಚ್ಚರಿಯಾಗಬಹುದು, ನನ್ನದು ರಾಷ್ಟ್ರಪತಿಯವರೊಂದಿಗೆ ಭೇಟಿ ನಿಗದಿಯಾಗಿತ್ತು. ನಾನು ಆಗ ರಾಜ್ಯಪಾಲನಾಗಿದ್ದೆ. ನಾನು ಅವರ ಭೇಟಿಗಾಗಿ ಹೊರಟಿದ್ದೆ. ಹಾಗಿಯಲ್ಲಿ ನನಗೆ ರಾಷ್ಟ್ರಪತಿ ಭವನದಿಂದ ಫೋನ್ ಬಂತು, ರಾಷ್ಟ್ರಪತಿಯವರು ಬೇರೊಂದು ಕೆಲಸದಲ್ಲಿ ಬಿಜಿಯಾಗಿದ್ದಾರೆ, ನಿಮ್ಮ ಭೇಟಿ ರದ್ದಾಗಿದೆ ಎಂದು. ರಾಷ್ಟ್ರಪತಿ ಭವನದಲ್ಲಿ ನಮ್ಮ ಕಡೆಯ ಹುಡುಗರೂ ಇರುತ್ತಾರೆ. ಅಲ್ಲಿಂದ ಗೊತ್ತಾಗುತ್ತೆ, ರಾಷ್ಟ್ರಪತಿಯವರ ಸಂದರ್ಶಕರ ಪಟ್ಟಿಯೂ ಪ್ರಧಾನಿಯವರ ಕಛೇರಿಯಿಂದ ಅನುಮತಿಯನ್ನು ಪಡೆಯುತ್ತದೆ. ಅಂಥವರಿಗೆ ಮಾತ್ರ ಭೇಟಿಯ ಅವಕಾಶ ಸಿಗುತ್ತದೆ.
ಕರಣ್:ನೀವು ರಾಷ್ಟ್ರಪತಿ ಮುರ್ಮುಅವರ ಕುರಿತು ಹೇಳುತ್ತಾ ಇದ್ದೀರಿ? ಅವರ ಸಂದರ್ಶಕರ ಪಟ್ಟಿಯನ್ನು ಪ್ರಧಾನಿಯವರ ಕಛೇರಿಯಿಂದ ಅನುಮತಿ ಪಡೆಯಬೇಕಾಗುತ್ತದೆಯೇ? ತನಗೆ ಬೇಕಾದವರನ್ನು ಅವರು ಭೇಟಿ ಮಾಡಲು ಸಾಧ್ಯವಿಲ್ಲವೇ? ಅಂದರೆ, ಅವರು ಪ್ರಧಾನಿಯವರ ಕೈಗೊಂಬೆಯೇ?
ಮಲಿಕ್: ಅಫ್ ಕೋರ್ಸ್
ಕರಣ್: ಇದು ದೇಶದ ಅತ್ಯುನ್ನತ ವ್ಯಕ್ತಿಯ ಅಗೌರವ?
ಮಲಿಕ್: (ನಸುನಕ್ಕು) ಇಲ್ಲಿ ಯಾವುದೂ ಅಸಾಧ್ಯವಲ್ಲ.
ಕರಣ್: ರಾಜೀವ್ ಗಾಂಧಿಯವರನ್ನು ಅನರ್ಹಗೊಳಿದ್ದರ ಬಗ್ಗೆ ಹೇಳಿ, ಕನ್ವಿಕ್ಷನ್ ಆಯಿತು. ೨೪ ಗಂಟೆಯ ಒಳಗೆ ಅವರನ್ನು ಅನರ್ಹಗೊಳಿಸಲಾಯಿತು. ಆದರೆ, ೨೦೧೬ರಲ್ಲಿ ಖಜಾರಿಯಾ ಒಬ್ಬ ಬಿಜೆಪಿ ಎಂಪಿ ಕನ್ವಿಕ್ಟ್ ಆದರು, ಸ್ಟೇ ತರಲು ಅವರಿಗೆ ಹದಿನಾರು ದಿನ ಕೊಡಲಾಯಿತು.
ಮಲಿಕ್: ರಾಹುಲ್ ಗಾಂಧಿಯವರ ಬಗ್ಗೆ ಅವರು ತುಂಬ ಅನ್‌ಕನ್ಫರ್ಟಬಲ್ ಆಗಿದ್ದಾರೆ. ರಾಹುಲ್ ಗಾಂಧಿಯವರು ಇತ್ತೀಚೆಗೆ ಬಹಳ ಸಂಗತವಾದ ವಿಚಾರಗಳನ್ನು ಮಾತಾಡುತ್ತಿದ್ದಾರೆ. ಅದಾನಿಯವರ ಹಗರಣ ಅವರು ಸರಿಯಾಗಿಯೇ ಹಿಡಿದ್ದಾರೆ.
ಕರಣ್: ಈ ಸರಕಾರ ರಾಹುಲ್ ಗಾಂಧಿಯವರನ್ನು ಕಂಡರೆ ಭಯ ಪಡುತ್ತದೆಯೇ?
ಮಲಿಕ್: ಹೆದರೋದು ಅಂತಲ್ಲ, ಉತ್ತರ ಕೊಡಲಾರದು.
ಕರಣ್: ಪ್ರಧಾನಿಯವರಿಗೆ ರಾಹುಲ್ ಗಾಂಧಿಯವರ ಪ್ರಶ್ನೆಗಳಿಗೆ ಉತ್ತರ ಕೊಡಲಾಗುತ್ತಿಲ್ಲ.
ಮಲಿಕ್: ಇಲ್ಲ, ಎಲ್ಲಿ ಕೊಟ್ಟರು? ಎರಡೂ ಸದನಗಳಲ್ಲಿ ಅವರು ಮಾಡಿದ ಭಾಷಣವನ್ನು ನಾನು ಕೇಳಿದ್ದೇನಲ್ಲ, ಅವರಿಗೆ ಎಲ್ಲಿ ಉತ್ತರ ಕೊಟ್ಟರು?
ಕರಣ್: ನೀವು ದೇಶದ ನಾಡಿಬಡಿತವನ್ನು ಬಲ್ಲವರು, ಇವತ್ತು ದೇಶವು ರಾಹುಲ್ ಗಾಂಧಿಯವರನ್ನು ಹೇಗೆ ಕಾಣುತ್ತಿದೆ?
ಮಲಿಕ್: ದೇಶದ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ಯಾತ್ರೆಯ ನಂತರ ಜನರಲ್ಲಿ ಅವರ ಸ್ಥಾನ ಉನ್ನತವಾಗಿದೆ, ಜನ ಅವರನ್ನು ಇಷ್ಟಪಡಲು ಆರಂಭಿಸಿದ್ದಾರೆ. ನೋಡಿ, ನಾನಿಲ್ಲಿ ಹತು ನಾಯಕರ ಕುರಿತು ಹೇಳುತ್ತೇನೆ. ಅವರು ಮೀರಟ್‌ನವರು, ಅವರು ಮೀರಟ್‌ಗೆ ಹೋಗುವಾಗಲೂ ಹೆಲಿಕಾಪ್ಟರಿನಲ್ಲಿ ಹೋಗುತ್ತಾರೆ. ಅವರು ಈ ಸಂಸ್ಕೃತಿಯ ಮೇಲೆ ದಾಳಿ ಮಾಡಿದರು. ಇಲ್ಲ, ಕಾಲ್ನಡಿಗೆಯಲ್ಲಿಯೂ ಹೋಗಬೇಕು ಎಂದರು. ಜನರ ನಡುವೆ ಹೋಗ್ಬೇಕು. ೩,೫೦೦ ಕಿ.ಮೀ. ಕಾಲ್ನಡಿಗೆಯಲ್ಲಿ. ಇದೇನೂ ಸಾಮಾನ್ಯ ವಿಚಾರವಲ್ಲ. ನಾನು ನಿಮಗೆ ಹೇಳುತ್ತೇನೆ. ಅವರು ಶ್ರೀನಗರಕ್ಕೆ ಹೋಗಿದ್ದಾಗ ಇಡೀ ನಗರ ಅವರನ್ನು ನೋಡುವುದಕ್ಕಾಗಿ ಮನೆಗಳನ್ನು ಬಿಟ್ಟು ಹೊರಬಂದಿತ್ತು. ಅವರು ಬೀಳುತ್ತಿದ್ದ ಹಿಮದಲ್ಲಿ ನಿಂತು ಭಾಷಣ ಮಾಡಿದರು. ಕೊಡೆಯೂ ಇಲ್ಲದೇ.
ಇದನ್ನೂ ಓದಿ : ಸತ್ಯಪಾಲ್ ಮಾಲಿಕ್ ಸಂದರ್ಶನ – ಥಾಪರ್ ಜತೆ (ದಿ ವೈರ್ ನಲ್ಲಿ ಪ್ರಕಟವಾದ್ದು) ಭಾಗ 7 : ‘ಅದಾನಿ ಹಗರಣ’
ರಾಜ್ಯಪಾಲರ ನೇಮಕ
ಕರಣ್: ನೀವು ಆ ಯುಟ್ಯೂಬ್ ಸಂದರ್ಶನದಲ್ಲಿ ಇದನ್ನು ಹೇಳಿದ್ದೀರಿ, ರಾಜ್ಯಪಾಲರನ್ನು ವಿರೋಧ ಪಕ್ಷಗಳ ಸಮಾಲೋಚನೆಯೊಂದಿಗೆ ನೇಮಿಸಬೇಕು ಎಂದು.
ಮಲಿಕ್: ಆ ತರದ ಏನಾದರೊಂದು ವ್ಯವಸ್ಥೆ ಇರಬೇಕು. ಯಾರನ್ನೋ ಎತ್ತಿಕೊಂಡು ಮಾಡಿಬಿಡುವುದಲ್ಲ.
ಕರಣ್: ನೀವು ಇದನ್ನೂ ಹೇಳಿದ್ದಿರಿ, ರಾಜ್ಯಪಾಲರನ್ನು ಸುಪ್ರೀಪ್ ಕೋರ್ಟ್ ನ್ಯಾಯಾಧೀಶರು, ಅಥವಾ ಚುನಾವಣಾ ಆಯೋಗದ ಮುಖ್ಯ ಆಯುಕ್ತರನ್ನು ಆಯ್ಕೆ ಮಾಡುವ ರೀತಿಯಲ್ಲಿ ಆಯ್ಕೆಮಾಡಬೇಕು.
ಮಲಿಕ್: ಹೌದು.
ಕರಣ್: ಎಂದರೆ, ಪ್ರಧಾನಿಯೊಬ್ಬರದೇ ಅಭಿಪ್ರಾಯ ಆಗಿರಬಾರದು, ಅದು ಒಂದು ಕೊಲಿಜಿಯಂ ನಿರ್ಧಾರ ಆಗಿರಬೇಕು ಎಂದು ನೀವನ್ನುತ್ತೀರಿ.
ಮಲಿಕ್: ಹೌದು. ಎಗ್ಸಾಕ್ಟ್ ಲೀ . ಏಕೆಂದರೆ ಬಿಲ್ಕುಲ್ ಥರ್ಡ್ ಕ್ಲಾಸ್ ಜನ ರಾಜ್ಯಪಾಲರಾಗುತ್ತಿದ್ದಾರೆ. ನಮ್ಮ ವ್ಯವಸ್ಥೆಯಲ್ಲಿ ಎಷ್ಟೊಂದು ಅವನತಿ ಆಗಿದೆ ಅನ್ನೋದನ್ನು ಹೇಳುತ್ತೇನೆ, ಕಳೆದ ಎರಡು ವರ್ಷಗಳಲ್ಲಿ ಸೆಂಟ್ರಲ್ ವಿಶ್ವವಿದ್ಯಾಲಯಗಳ ಉಪಕುಲಪತಿಗಳನ್ನು ಆಯ್ಕೆ ಮಾಡಲಾಗಿದೆ, ಅವರಲ್ಲಿ ಸಂಘದ ಸಂಬಂಧ ಇಲ್ಲದವರು ಒಬ್ಬರೂ ಇಲ್ಲ. ಅವರಲ್ಲಿ ಹೆಚ್ಚಿನವರಿಗೆ ಒಂದು ಕಾಲೇಜಿನ ಪ್ರಿನ್ಸಿಪಾಲ್ ಆಗುವ ಯೋಗ್ಯತೆಯೂ ಇಲ್ಲದವರಾಗಿದ್ದಾರೆ. ನೀವು ಪಟ್ಟಿ ತರಿಸಿ ನೋಡಿ. ಕಾಶ್ಮೀರದಲ್ಲಿ ನನ್ನ ಬಳಿಯೂ ಬಂದಿದ್ದರು. ನಾನು ಪಿ.ಎಂ.ಅವರಿಗೂ ತಿಳಿಸಿದ್ದೆ. ಸಾರ್ ಇವರು ದಿನವೂ ಬರುತ್ತಾರೆ ವಿ.ಸಿ. ಮಾಡಿ ಎಂದು. ಅವರು ಈ ವಿಚಾರದಲ್ಲಿ ನನಗೆ ಬೆಂಬಲವನ್ನೇ ನೀಡಿದರು. ಈ ಕುರಿತು ನಾನು ಪಿ.ಎಂ.ಅವರನ್ನು ಮೆಚ್ಚುತ್ತೇನೆ. (ನಕ್ಕು) ಭ್ರಷ್ಟಾಚಾರದ ವಿರುದ್ಧವೂ ಅವರು ನನಗೆ ಬೆಂಬಲ ನೀಡಿದರು, ಆರಂಭದಲ್ಲಿ, ಗೋವಾದಲ್ಲಿ ಅವರ ನಿಲುವು ಬದಲಾಗಿ ಹೋಯಿತು. ನನಗೆ ಗೊತ್ತಿಲ್ಲ ಏಕೆ ಎಂದು.
ಕರಣ್: ನೀವು ಇನ್ನೊಂದು ಹೇಳಿದ್ದಿರಿ, ಪ್ರಧಾನಿಯವರಿಗೆ ಭ್ರಷ್ಟಾಚರ ಕುರಿತು ದ್ವೇಷವೇನೂ ಇಲ್ಲ. ಅವರ ಅಕ್ಕಪಕ್ಕದ ಜನ ಭ್ರಷ್ಟರಾಗಿದ್ದಾರೆ, ಅವರಿಗೆ ಅದು ಗೊತ್ತೂ ಇದೆ, ಪಿ.ಎಂ.ಒ.ದಿಂದ ಜಿತೇಂದ್ರ ಸಿಂಗ್ ಅವರ ಹೆಸರು ತೆಗೆದುಕೊಂಡು ಫೋನುಗಳು ಬರುತ್ತವೆ. ಅವರಿಗೆ ಇದೂ ಗೊತ್ತು. ಆದರೆ ಈ ಕುರಿತು ಅವರು ಏನೂ ಮಾಡಿಲ್ಲ.
ಮಲಿಕ್: ಹೌದು.
(ಮುಗಿಯಿತು)
ಕರಣ್ ಥಾಪರ್-ಸತ್ಪಾಲ್ ಮಲಿಕ್ ಇಡೀ (ಇಂಗ್ಲಿಷ್) ಸಂದರ್ಶನದ ಇಡೀ ವೀಡಿಯೋ ಲಿಂಕ್: