ಅನುವಾದ : ಅಬ್ದುಲ್ ರಹಮಾನ್ ಪಾಷಾ
ದಿ ವೈರ್ (THE WIRE ) ಪೋರ್ಟಲ್ಗಾಗಿ, ಕರಣ್ ಥಾಪರ್, ಆಗಸ್ಟ್ ೨೦೧೮ರಿಂದ ಅಕ್ಟೋಬರ್ ೨೦೧೯ರ ವರೆಗೆ ಕಾಶ್ಮೀರದ ಕೊನೆಯ ರಾಜ್ಯಪಾಲರಾಗಿದ್ದ ಸತ್ಯ ಪಾಲ್ ಮಲಿಕ್ ರೊಂದಿಗೆ ಮಾಡಿದ ಸಂದರ್ಶನದ ಸಂಕ್ಷಿಪ್ತ ಪಠ್ಯ. ಈಗಾಗಲೇ ಭಾಗ-1 ರಲ್ಲಿ ಪೀಠಿಕೆ, 2ರಲ್ಲಿ ಕಾಶ್ಮೀರದ ವಿಧಾನಸಭೆ ವಿಸರ್ಜನೆ,ಭಾಗ 3ರಲ್ಲಿ ಫುಲ್ವಾಮಾ ದುರ್ಘಟನೆ, ಭಾಗ 4ರಲ್ಲಿ ‘ಅನುಚ್ಛೇದ ೩೭೦ರ ರದ್ದತಿ’, ಭಾಗ 5ರಲ್ಲಿ ‘ರಿಲಯನ್ಸ್ ಇನ್ಶೂರೆನ್ಸ್, ಭ್ರಷ್ಟಾಚಾರ’ ಕುರಿತ ಸಂದರ್ಶನದ ಭಾಗಗಳು ಇವೆ. ಈ ಭಾಗ 6ರಲ್ಲಿ ‘ಮೋದಿ ಬಹಳ ill informed, BBC’ ಕುರಿತ ಸಂದರ್ಶನದ ಭಾಗ (ಇತರ ಭಾಗಗಳು ಮುಂದಿನ ಕಂತುಗಳಲ್ಲಿ)
ಕರಣ್: ಜನವರಿ ೨೦೨೨, ಧಾತ್ರಿ, ಹರಿಯಾಣದ ಒಂದು ಸಭೆಯಲ್ಲಿ, ರೈತರ ಹೋರಾಟ ನಡೆಯುತ್ತಿರುವಾಗ, ನೀವು ಪ್ರಧಾನಿಯವರ ಜೊತೆಗಿನ ಭೇಟಿಯ ಬಗ್ಗೆ ಮಾತಾಡಿದಿರಿ, ಆಗ ನೀವು ಹೇಳಿದ್ದು ಇದನ್ನು, ‘ನನ್ನ ಐದು ನಿಮಿಷದಲ್ಲಿ ಅವರ ಜೊತೆ ಜಗಳವೇ ಆಯಿತು. ಅವರು ಬಹಳ ಅಹಂಕಾರದಲ್ಲಿದ್ದರು’ ಅದರ ನಂತರ ನೀವು ಅಮಿತ್ ಶಾ ರನ್ನೂ ಭೇಟಿಯಾದಿರಿ, ಅವರು ಮೋದಿಯವರ ಬಗ್ಗೆ ಹೀಗೆ ಹೇಳಿದರು, ‘ಸತ್ಯಪಾಲ್ ಇಸ್ ಕಿ ಅಕ್ಲ್ ಮಾರ್ ರಕ್ಖಿ ಹೈ ಲೋಗೋನೆ,’ ನಾನು ಈಗ ಈ ಪ್ರಶ್ನೆ ಕೇಳುತ್ತೇನೆ, ನರೇಂದ್ರ ಮೋದಿಯವರ ಬಗ್ಗೆ ಇವತ್ತಿಗೆ ನಿಮ್ಮ ಅಭಿಪ್ರಾಯವೇನು?
ಮಲಿಕ್: ನರೇಂದ್ರ ಮೋದಿಯವರ ಬಗ್ಗಿ ಇಡೀ ಜಗತ್ತಿಗೆ ಇರುವ ಅಭಿಪ್ರಾಯ ನನಗಿಲ್ಲ. ನಾನು ಅವರನ್ನು ಭೇಟಿಯಾದಾಗಲೆಲ್ಲಾ, ಅವರು ಬಹಳ ‘ill informed (ಮಾಹಿತಿ ಇಲ್ಲದವರು) ವ್ಯಕ್ತಿ. ಅವರಿಗೆ ಯಾವುದೇ ತಿಳಿವಳಿಕೆ ಇಲ್ಲ. ಕಾಶ್ಮೀರದ ಬಗ್ಗೆ ಅವರ ಜೊತೆ ಮಾತಾಡಿದಾಗಲೆಲ್ಲಾ ಆ ಕುರಿತು ಅವರ ಮಾಹಿತಿ ಬಹಳ ಕೆಳಮಟ್ಟದ್ದಾಗಿತ್ತು. ಒಂದು ಉದಾಹರಣೆ ಕೊಡುತ್ತೇನೆ. ಅಲ್ಲಿಯ ಅಸಲಿ ಸಮಸ್ಯೆ ಜಮಾತ್ ಆಗಿದೆ. ಆದರೆ ಪ್ರಧಾನಿಯವರಿಗೆ ಅದರ ಬಗ್ಗೆ ಚಿಂತೆಯೇ ಇರಲಿಲ್ಲ. ಆ ಕುರಿತು ನನಗೊಂದು ನೋಟ್ ಕೊಡಿ ಎಂದರು. ಸರಿ, ನಾನು ಅದರ ಬಗ್ಗೆ ೨೦ ಪುಟಗಳ ಟಿಪ್ಪಣಿ ಕೊಟ್ಟೆ. ಅದರ ಕುರಿತು ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅಮಿತ್ ಶಾ ಅದರ ಕುರಿತು ಕ್ರಮ ಕೈಗೊಂಡರು. ಈಗಲೂ ಅದರ ಕುರಿತು ಅವರು ಕ್ರಮ ಕೈಗೊಳ್ಳುತ್ತಿದ್ದಾರೆ. ಏಕೆಂದರೆ, ಜಮಾತ್ ಎಷ್ಟೊಂದು ಪ್ರಬಲವಾಗಿದೆ ಎಂದರೆ, ೨೦-೩೦% ಸರಕಾರಿ ನೌಕರರು ಅವರೊಂದಿಗೆ ಇದ್ದಾರೆ. ಅವರದು ದೊಡ್ಡ ಸ್ವತ್ತುಗಳಿವೆ, ಮಸೀದಿಗಳಿವೆ.
ಕರಣ್: ತಮ್ಮನ್ನು ತಾವು ಬಹಳ ಬಲ್ಲವರು ಎಂದು ತೋರಿಸಿಕೊಳ್ಳುವ ನಮ್ಮ ಪ್ರಧಾನಿಯವರನ್ನು ನೀವು ill informed ಎನ್ನುತ್ತಿದ್ದೀರಿ; ಎಂದರೆ, ಇಗ್ನೋರೆಂಟ್ ಅಂತೀರಾ?
ಮಲಿಕ್: ಇಗ್ನೋರೆಂಟ್ ಮೀನ್ಸ್, ಮಸ್ತ್ ಹೈ ಅಪನೇ ಮೇ, ಜೊ ಹೋ ರಹಾ ಹೈ ಟು ಹೆಲ್ ವಿತ್ ಇಟ್ (ತಮ್ಮಷ್ಟಕ್ಕೆ ಅವರು ಮಸ್ತ್ ಆಗಿದ್ದಾರೆ, ಆಗುತ್ತಿರುವುದು ಹಾಳಾಗಿ ಹೋಗಲಿ, ಏನಂತೆ) ಎನ್ನುವ ಧೋರಣೆ. ಕಾಶ್ಮೀರದ ಬಗ್ಗೆನೇ ಹೇಳುವುದಾದರೆ ಇವರಿಗೆ ಅದರ ಯಾವುದೇ ಸಮಸ್ಯೆಯ ಕುರಿತು ಗೊತ್ತಿರಲಿಲ್ಲ. ಹುರಿಯತ್ ಹೇಗೆ ಆಪರೇಟ್ ಆಗಬಹುದು ಎಂಬುದೂ ಗೊತ್ತಿರಲಿಲ್ಲ. ನಾನು ಅಲ್ಲಿಗೆ ಹೋದ ಕೂಡಲೇ ಒಂದು ಸಂದರ್ಶನ ನೀಡಿದ್ದೆ, ಇಂಡಿಯನ್ ಎಕ್ಸ್ ಪ್ರೆಸ್ನಲ್ಲಿ ಪ್ರಕಟ ಆಗಿತ್ತು. ಅದರಲ್ಲಿ ನಾನು ಹೇಳಿದ್ದೆ, ಕಾಶ್ಮೀರದ ಸಮಸ್ಯೆಗಳನ್ನು ಎಲ್ಲವನ್ನೂ ಕಾಶ್ಮೀರದ ಜನರೇ ಹುಟ್ಟು ಹಾಕಿಲ್ಲ, ಅದರಲ್ಲಿ ೫೦% ದೆಹಲಿ ಹುಟ್ಟುಹಾಕಿದೆ. ಹುರಿಯತ್ನ ಮುಖ್ಯಸ್ಥರು ಸಾರ್ವಜನಿಕವಾಗಿ ಹೇಳಿಕೆ ನೀಡಿದರು, ರಾಜ್ಯಪಾಲರು ೫೦% ಸರಿಯಾಗಿ ಹೇಳಿದ್ದಾರೆ ಎಂದು. ಅದಕ್ಕೆ ನಾನೆಂದೆ, ಉಳಿದ ಶೇಕಡಾ ೫೦ ನೀವು ಸರಿಯಾದ್ದನ್ನು ಹೇಳಿ.
ಕರಣ್: ನೀವು ೨೦೧೮ರಲ್ಲಿ ಕಾಶ್ಮೀರದ ರಾಜ್ಯಪಾಲರಾಗುವ ಹೊತ್ತಿಗೆ ಮೋದಿಯವರು ಪ್ರಧಾನಿಯಾಗಿ ೪ ವರ್ಷವಾಗಿತ್ತು. ಆದರೂ, ಕಾಶ್ಮೀರದ ಬಗ್ಗೆ ಅವರಿಗೆ ತಿಳಿವಳಿಕೆ ಇರಲಿಲ್ಲ?
ಮಲಿಕ್: ೧೦೦% ill informed. ಇನ್ನೂ ಹೇಳುತ್ತೇನೆ, ಮುಫ್ತಿ ಸಯೀದ್ರ ಬಹಳ ನಿಕಟವರ್ತಿಯಾಗಿದ್ದರು, ತುಂಬಾ ಒಳ್ಳೆಯ ಸಹೋದ್ಯೋಗಿಗಳಾಗಿದ್ದರು, ಉಪ ಮುಖ್ಯಮಂತ್ರಿಯಾಗಿದ್ದರು, ಮುಜಫ್ಫರ್ ಬೇಗ್. ಅವರು ಒಂದು ನನ್ನ ಭೇಟಿಗಾಗಿ ಬರುವವರಿದ್ದರು. ಸ್ವಲ್ಪ ತಡವಾಯಿತು. ಏಕೆ ತಡವಾಯಿತು ಎಂದು ನಾನು ಕೇಳಿದೆ. ಅವರೆಂದರು, ಜಿಲಾನಿಯವರು ಕರೆಸಿಕೊಂಡಿದ್ದರು. ನಾನು ರಾಜ್ಯಪಾಲರನ್ನು ನೋಡೋದಕ್ಕೆ ಹೊರಟಿದ್ದೇ ಎಂದು ಹೇಳಿದರು. ಅವರೆಂದರು, ಇವರು ಅದ್ಭುತ ರಾಜ್ಯಪಾಲರು, ಇವರ ಜೊತೆ ಡೀಲ್ ಸಾಧ್ಯವಾಗುತ್ತದೆ ಎಂದರು, ಅವರು ಪ್ರೋ-ಪಾಕಿಸ್ತಾನ್ ಹುರಿಯತ್ ನಾಯಕರು, ಅವರು ಈಗ ನಿಧರಾಗಿದ್ದಾರೆ. ಅವರು ಹೇಳಿದರು,, ಏಕೆಂದರೆ ಅವರು ಮಾತಾಡಿದಾಗ ತಮ್ಮ ಮನಸ್ಸನ್ನು ತೆಗೆದು ಹಸ್ತದಲ್ಲಿಟ್ಟುಕೊಳ್ಳುತ್ತಾರೆ. ನಾನು ಏನು ಹೇಳೋದಕ್ಕೆ ನೋಡುತ್ತಾ ಇದ್ದೇನೆ ಎಂದರೆ ನಾವು ಕಾಶ್ಮೀರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ,- ಏಕೆಂದರೆ ನಾವು ಅಲ್ಲಿ ಚುನಾವಣೆಗಳನ್ನು ಯಾವಾಗಲೂ ನ್ಯಾಯಯುತವಾಗಿ ಮಾಡಿಸಲಿಲ್ಲ. ನಾವು ಚುನಾವಣೆಗಳ ಫಲಿತಾಂಶಗಳನ್ನು ಬದಲಾಯಿಸಿದೆವು. ಬಕ್ಷಿಯವರ ಕಾಲದಲ್ಲಿಯಂತೂ ನಾವು ಇಡೀ ಪರ್ಚಿ ಕ್ಯಾನ್ಸಲ್ ಮಾಡಿದೆವು. ನಮ್ಮ ಈ ತಿಕಡಂ ಇದೆಯಲ್ಲ, ಇದರಿಂದಾಗಿ ಇವರಿಗೆ ನಮ್ಮ ಬಗ್ಗೆ ವಿಶ್ವಾಸವೇ ಮೂಡುವುದಿಲ್ಲ.
ಕರಣ್: ನೀವು ಇದನ್ನೂ ಹೇಳುತ್ತಿದ್ದೀರಿ, ಪಾಕಿಸ್ತಾನದ ಪರವಾಗಿರುವ ಗಿಲಾನಿ ಸಾಬ್ ವೈಯಕ್ತಿಕವಾಗಿ ನಿಮ್ಮಲ್ಲಿ ವಿಶ್ವಾಸವನ್ನಿಟ್ಟುಕೊಂಡಿದ್ದರೆ, ನಿಮ್ಮ ಮಧ್ಯಸ್ಥಿಕೆಯಲ್ಲಿ ಕೆಲವು ತರದ ಒಪ್ಪಂದಗಳು ಮತ್ತು ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿತ್ತು?
ಮಲಿಕ್: ಎರಡು ಮೂರು ಬಾರಿ ಪ್ರಧಾನಿಯವರಿಗೆ ಇದನ್ನು ಬಗೆಹರಿಸಬಹುದು ಎನ್ನುವ ಸುಳಿವನ್ನು ನೀಡಿದೆ. ಆದರೆ, ಅವರಿಗೆ ಇದರಲ್ಲಿ ಕಿಂಚಿತ್ತೂ ಆಸಕ್ತಿ ಇರಲಿಲ್ಲ. ಅಲ್ಲೊಂದು ಫುಟ್ ಬಾಲ್ ಟೀಮ್ ಇತ್ತು. ನಾನು ಅದಕ್ಕೆ ಸಪೊರ್ಟ್ ಮಾಡಿದೆ. ನಾನು ಒಂದು ಕೋಟಿ ಕೊಟ್ಟೆ ಇನ್ನೊಂದು ಕೋಟಿ ಜೆಕೆ ಬ್ಯಾಂಕಿನಿಂದ ಕೊಡಿಸಿದೆ. ಆ ತಂಡ ಮೊದಲ ಪ್ರಯತ್ನದಲ್ಲಿಯೇ ದೇಶದ ಮೊದಲ ಮೂರು ತಂಡಗಳಲ್ಲಿ ಬಂತು. ಅದರದೊಂದು ಪಂದ್ಯ ಆಗುತ್ತದೆ. ಅದನ್ನು ನೋಡುವುದಕ್ಕೆ ೨೦ ಸಾವಿರ ಯುವಕರು ಬರುತ್ತಾರೆ. ಯಾಸಿನ್ ಮಲಿಕ್ ಹುರಿಯತ್ನ ಒಂದು ತುರ್ತು ಸಭೆ ಕರೆಯುತ್ತಾರೆ. ಗಿಲಾನಿಗೆ ಹೇಳುತ್ತಾರೆ, ‘ಈ ಹುಡುಗರೆಲ್ಲಾ.. ಅಲ್ಲಿಗೆ ಹೋಗಿ ಬಿಟ್ಟಿದ್ದಾರೆ,’ ಅದಕ್ಕೆ ಗಿಲಾನಿ ಹೇಳುತ್ತಾರೆ, ಅವರು ತಮ್ಮ ಇಚ್ಛೆಯಿಂದ ಹೋಗಿದ್ದಾರೆ, ನೀವು ಸುಮ್ಮನಿರಿ. ಹತ್ತು ವರ್ಷದಲ್ಲಿ ಈ ಹುಡುಗರು ಸಿನಿಮಾ ನೋಡಿಲ್ಲ. ಈ ಆಟವನ್ನೂ ನೋಡುವುದು ಬೇಡವೇ? ನಾನು ರಾಜ್ಯಪಾಲರ ನಿಲುವಿನೊಂದಿಗೆ ಸಹಮತ ಹೊಂದಿದ್ದೇನೆ.’ ಎನ್ನುತ್ತಾರೆ. ನಾನು ಹೇಳಿದ್ದೆ, ಈ ಹುಡುಗರಿಗೆ ಬಾಲ್ ಕೊಡಿ, ಇಲ್ಲವಾದರೆ ಇವರು ಕಲ್ಲು ಎತ್ತಿಕೊಳ್ಳುತ್ತಾರೆ. ನಾನು ಪ್ರತಿಯೊಂದು ಊರಿನಲ್ಲಿಯೂ ಒಂದು ಆಟದ ಮೈದಾನವನ್ನು ಗುರುತಿಸಿ ಕೊಟ್ಟೆ.
ಕರಣ್ ಥಾಪರ್-ಸತ್ಪಾಲ್ ಮಲಿಕ್ ಇಡೀ (ಇಂಗ್ಲಿಷ್) ಸಂದರ್ಶನದ ಇಡೀ ವೀಡಿಯೋ ಲಿಂಕ್:
ಕರಣ್: ೨೦೧೯ರಿಂದ ಕಾಶ್ಮೀರವನ್ನು ನಡೆಸಿಕೊಂಡ ರೀತಿಯ ಬಗ್ಗೆ ಹೇಳಿ, ಸರಕಾರದಿಂದ ಹೆಚ್ಚು ತಪ್ಪುಗಳು ಆಗಿವೆಯೇ?
ಮಲಿಕ್: ಅಲ್ಲಿನ ರಾಜ್ಯಪಾಲರು ತಮ್ಮ ಗುರಿಗಳನ್ನು ಸಾಧಿಸುತ್ತಿದ್ದರು. ಆನಂದಿಸುತ್ತಿದ್ದರು. ದೆಹಲಿಯಿಂದ ಯಾವುದೇ ಇನಿಷಿಯೇಟಿವ್ ಇರುತ್ತಿರಲಿಲ್ಲ. ಅಲ್ಲಿ ಪ್ರವಾಹ ಬಂದಿತ್ತು. ೨೦೧೪ರಲ್ಲಿ, ಮೋದಿಯವರು ಇನಿಷಿಯೇಟಿವ್ ತೆಗೆದುಕೊಂಡಿದ್ದರು. ಅಲ್ಲಿಗೆ ಹೋದರು
ಕರಣ್: ನಾನೀನ ೨೦೧೯ರ ನಂತರ ಬಗ್ಗೆ ಕೇಳುತ್ತಿದ್ದೇನೆ. ಚುನಾವಣೆಗಳನ್ನು ನಡೆಸಬೇಕೆ, ಸ್ಟೇಟ್ ಹುಡ್ನ್ನು ಮರಳಿಸಬೇಕೇ?
ಮಲಿಕ್: ಸ್ಟೇಟ್ಹುಡ್ ಬಗ್ಗೆ ಅಮಿತ್ ಶಾ ಅವರು ಸದನದಲ್ಲಿ ಭರವಸೆಯನ್ನಂತೂ ನೀಡಿದ್ದಾರೆ. ಆದರೆ ಪಿ.ಎಂ. ಇದನ್ನು ಬೇಗ ಮಾಡುತ್ತಾರೆ ಎಮ್ದು ನನಗೆ ಅನ್ನಿಸುವುದಿಲ್ಲ. ಇದನ್ನು ತಕ್ಷಣ ಮಾಡಬೇಕು. ಚುನಾವಣೆಗಿಂತ ಮುಂಚೆ ಇದನ್ನು ಮಾಡಬೇಕು. ನಿಮಗೆ ಜನರಲ್ಲಿ ವಿಶ್ವಾಸವನ್ನು ಮೂಡಿಸಬೇಕು ಎಂಬುದಿದ್ದರೆ, ಯಾವುದರ ಚುನಾವಣೆ ಮಾಡಿಸುತ್ತಿದ್ದೀರಿ, ಮುನಿಸಿಪಾಲಿಟಿಯದಲ್ಲ, ರಾಜ್ಯದ ಚುನಾವಣೆ ಮಾಡಿಸಿ, ಅಸೆಂಬ್ಲಿ ಇರಲಿ. ಅವರಿಗೆ ರಾಜ್ಯದ ಸ್ಥಾನವನ್ನು ಕೂಡಲೇ ಮರಳಿಸಬೇಕು, ಆದಷ್ಟು ಬೇಗ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಬೇಕು.
ಇದನ್ನೂ ಓದಿ : ಸತ್ಯಪಾಲ್ ಮಾಲಿಕ್ ಸಂದರ್ಶನ – ಥಾಪರ್ ಜತೆ (ದಿ ವೈರ್ ನಲ್ಲಿ ಪ್ರಕಟವಾದ್ದು) ಭಾಗ 5 : ರಿಲಯನ್ಸ್ ಇನ್ಶೂರೆನ್ಸ್, ಭ್ರಷ್ಟಾಚಾರ
ಮುಸ್ಲಿಮರು ಕುರಿತು
ಕರಣ್: ಮೋದಿಯವರ ಬಗ್ಗೆ ಇನ್ನೊಂದು ವಿಚಾರವಾಗಿ ಮಾತಾಡೋಣ, ಅವರ ಮಂತ್ರಿಗಳು, ಅವರ ಮುಖ್ಯಮಂತ್ರಿಗಳು ನಿರಂತರವಾಗಿ ಮುಸ್ಲಿಮರನ್ನು ಚುಚ್ಚಿ ಮಾತಾಡುತ್ತಿದ್ದಾರೆ. ಮುಸಲ್ಮಾನರನ್ನು ಬಾಬರನ ಸಂತತಿ ಎಂಬಂತೆ ಪ್ರತಿಬಿಂಬಿಸಲಾಗುತ್ತದೆ. ಯೋಗಿಯವರು ಮುಸಲ್ಮಾನರ ಬಗ್ಗೆ ಮಾತಾಡುವಾಗ ಅಬ್ಬಾ ಜಾನ್ ಅಬ್ಬಾ ಜಾನ್ ಅಂತಾರೆ. ಒಂದು ಕಾಲದಲ್ಲಿ ಅಮಿತ್ ಶಾ ಅವರು ಅವರನ್ನು ಗೆದ್ದಲು ಎಂದು ಕರೆಯುತ್ತಿದ್ದರು. ಎಲ್ಲರೂ ಹೇಳುತ್ತಾರೆ, ಪಾಕಿಸ್ತಾನಕ್ಕೆ ಹೋಗಿ. ಪ್ರಧಾನಿಯವರೂ ಕೂಡ ಕೆಲವೊಮ್ಮೆ ಈ ಪದಗಳನ್ನು ಬಳಸುತ್ತಾರೆ, ‘ಬಟ್ಟೆಯಿಂದ ಗುರುತಿಸಬಹುದು,’ ‘ಕಬರ್ಸ್ತಾನ್’ ಮತ್ತು ‘ಸ್ಮಶಾನ’ ದಿಂದ ಗುರುತಿಸಬಹುದು ಎಂದಿದ್ದಾರೆ. ಪ್ರಧಾನ ಮಂತ್ರಿ ಹೀಗೆ ಮಾಡುವುದು ಸರಿಯೇ?
ಮಲಿಕ್: ಖಂಡಿತ ಅಲ್ಲ. ದೇಶವು ಸರ್ವೈವ್ ಆಗಬೇಕು ಎಂದರೆ ಇದು ಬಹಳ ತಪ್ಪಾದ ಆಲೊಚನೆ. ಮುಸಲ್ಮಾನರನ್ನು ಮೈನಸ್ ಮಾಡಿ ಸರ್ವೈವ್ ಮಾಡುತ್ತೇವೆ ಎನ್ನುವುದು ಅಸಾಧ್ಯ. ಅವರ ಜನಸಂಖ್ಯೆ ಇಷ್ಟೊಂದು ದೊಡ್ಡದಿದೆ. ಒಳ್ಳೆಯ ಸಮುದಾಯ. ಅದರ ತನ್ನದೇ ಆದ ಕೊಡುಗೆ ಇದೆ ಈ ದೇಶಕ್ಕೆ. ಅವರ ವಿಶ್ವಾಸವನ್ನು ಗೆದ್ದು ದೇಶವನ್ನು ನಡೆಸಬೇಕು. ಇಷ್ಟೊ ದೊಡ್ಡ ಸಂಖ್ಯೆಯ ಯಾವುದೇ ಸಮುದಾಯವನ್ನು ಏಲಿನೆಯೇಟ್ ಮಾಡುವುದು ಯಾವುದೇ ಸರಕಾರ ಮಾಡಬಹುದಾದ ದೊಡ್ಡ ತಪ್ಪು.
ಬಿಬಿಸಿ ಸಾಕ್ಷ್ಯಚಿತ್ರದ ವಿಚಾರ
ಕರಣ್: ಪ್ರಧಾನಿಯವರು ಅದನ್ನು ಸಾಮಾಜಿಕ ಮಾಧ್ಯಮಗಳಿಂದ ತೆಗೆದು ಹಾಕುವಂತೆ ಒತ್ತಡ ಹೇರಿದರು. ಮೂರು ವಾರಗಳ ನಂತರ ಭಾರತದಲ್ಲಿನ ದೆಹಲಿ ಮತ್ತು ಬಾಂಬೆಯಲ್ಲಿನ ಬಿಬಿಸಿ ಆಫಿಸಿನ ಮೇಲೆ ತೆರಿಗೆ ಇಲಾಖೆ ದಾಳಿ ಆಯಿತು. ಒಂದು ಜನತಂತ್ರದ ಪ್ರಧಾನಿ ನಡೆದುಕೊಳ್ಳುವ ರೀತಿನೇ ಇದು?
ಮಲಿಕ್: ಅವರ ದೃಷ್ಟಿಯಿಂದ ಇದು ಸರಿ ಇದೆ. ನನ್ನ ದೃಷ್ಟಿಯಿಂದ ಇದರ ಅಗತ್ಯ ಇರಲಿಲ್ಲ. ಇವರು ಹೀಗೆ ಮಾಡಿದ್ದಕ್ಕೇ ಹೆಚ್ಚು ಜನ ಅದನ್ನು ನೋಡಿದ್ದಾರೆ. ಈ ರೀತಿಯ ನಿರ್ಬಂಧವನ್ನು ಹೇರಬಾರದು. ಬಿಬಿಸಿ ಬಹಳ ಗೌರವಾನ್ವಿತ ಸಂಸ್ಥೆ. ನಾನು ನಿಮಗೆ ಈಗಲೂ ಹೇಳುತ್ತೇನೆ ಊರುಗಳಲ್ಲಿ ಜನ ಈಗಲೂ ರೇಡಿಯೋ ಬಿಬಿಸಿ ಆಲಿಸುತ್ತಾರೆ, ಅದನ್ನೇ ಹೆಚ್ಚು ನಂಬುತ್ತಾರೆ. ಬಿಬಿಸಿಯಲ್ಲಿ ಬಂದಿತ್ತು ಅನ್ನುತ್ತಾರೆ.
ಕರಣ್: ಪ್ರಧಾನಿಯವರು ಬಹಳ ಹೆಮ್ಮೆಯಿಂದ ಹೇಳುತ್ತಾರೆ ಭಾರತವು ಜಗತ್ತಿನಲ್ಲಿ ಅತ್ಯಂತ ದೊಡ್ಡ ಜನತಂತ್ರ ಎಂದು. ಇತ್ತೀಚೆಗೆ ಹೇಳೋದಕ್ಕೆ ಶುರು ಮಾಡಿದ್ದಾರೆ, ‘ಭಾರತವು ಜನತಂತ್ರದ ತಾಯಿ’ ಎಂದು. ಜನತಂತ್ರದ ತಾಯಿಯಾದ ದೇಶದ ಪ್ರಧಾನಿಯು ಮಾಧ್ಯಮವನ್ನು ಈ ರೀತಿ ನಡೆಸಿಕೊಳ್ಳಬೇಕೆ?
ಮಲಿಕ್: ನಾನಾದರೆ ಹಾಗೆ ಮಾಡುವುದಿಲ್ಲ. ಆದರೆ ಅದು ಅವರ ಮೌಲ್ಯಗಳ ವ್ಯವಸ್ಥೆ, ನಾನೇನು ಹೇಳಲಿ.