- ಬಿ.ಬಿ.ಎಂ.ಪಿ.ಅಧಿಕಾರಿಗಳ ವಿರುದ್ದ ತಮಟೆ ಚಳುವಳಿ
- ಸ್ವೆಟರ್ ನೀಡದೆ 1.76 ಕೋಟಿ ಹಣ ಎಲ್ಲಿ ಹೋಯಿತು? ಪ್ರತಿಭಟನೆಕಾರರ ಪ್ರಶ್ನೆ?
ಬೆಂಗಳೂರು : ಶಾಲಾ ಮಕ್ಕಳಿಗೆ ವಿತರಿಸಬೇಕಿದ್ದ ಸ್ವೆಟರ್ ಗಳನ್ನು ವಿತರಣೆ ಮಾಡದೆ ಬಿಬಿಎಂಪಿ ವಂಚನೆ ಮಾಡಿದೆ ಎಂದು ಆರೋಪಿಸಿ, ಬಿ.ಬಿ.ಎಂ.ಪಿ.ಕೇಂದ್ರ ಕಛೇರಿ ಅವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕಾಧ್ಯಕ್ಷರಾದ ಡಾ. ಸಿ.ಎಸ್.ರಘು ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯ ಶಾಲಾ ,ಕಾಲೇಜುಗಳಲ್ಲಿ ದಲಿತ ,ಹಿಂದುಳಿದ ಮತ್ತು ಕಡು ಬಡ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ . 2020-21 ಸಾಲಿನಲ್ಲಿ ಬಿಬಿಎಂಪಿ ವ್ಯಾಪ್ತಿಯ ಮಕ್ಕಳಿಗೆ ಸ್ವೆಟರ್ ಗಳನ್ನು ನೀಡಲು ಅನುದಾನ ಮೀಸಲು ಇಟ್ಟಿತ್ತು. ಆದರೆ ಕೆಲವು ಭ್ರಷ್ಟ ಅಧಿಕಾರಿಗಳು ಟೆಂಡರ್ ಕರೆಯದೇ 4ಜಿ ವಿನಾಯಿತಿ ಪಡೆದು ಕರ್ನಾಟಕ ಕೈಮಗ್ಗ ನಿಗಮಕ್ಕೆ ಸ್ವೆಟರ್ ಗಳನ್ನು ಸರಬರಾಜು ಮಾಡಲು ಆದೇಶ ನೀಡಿದ್ದರೆ ಎಂದು ಆರೋಪಿಸಿದರು.
ಕಳೆದ ಸಾಲಿನಲ್ಲಿ ಕೊರೋನ ಸಾಂಕ್ರಮಿಕ ರೋಗದ ಕಾರಣದಿಂದ ಶಾಲಾ ,ಕಾಲೇಜು ಮುಚ್ಚಲಾಗಿತ್ತು. ಆದರೆ ವಿದ್ಯಾರ್ಥಿಗಳಿಗೆ ಸ್ವೆಟರ್ ನೀಡಲಾಗಿದೆ ಎಂದು ಇಲಾಖೆಯ ದಾಖಲೆಗಳು ಹೇಳುತ್ತಿವೆ. ಶಾಲಾ – ಕಾಲೇಜ್ ತೆರೆಯದೆ ಇದ್ದರೂ ಮಕ್ಕಳಿಗೆ ಸ್ವೆಟರ್ ನೀಡಿದ್ದು ಹೇಗೆ? ಅಧಿಕಾರಿಗಳೇ ಮಕ್ಕಳ ಮನೆ ಬಾಗೀಲಿಗೆ ಹೋಗಿ ವತರಣೆ ಮಾಡಿದ್ದಾರೆ? ಎಂದು ಪ್ರಶ್ನಿಸಿದರು. ಒಟ್ಟಾರೆ ಸ್ವೆಟರ್ ಹೆಸರಿನಲ್ಲಿ ಬಿಬಿಎಂಪಿ 1. 75 ಕೋಟಿ ರೂ ಹಣವನ್ನು ಪಾವತಿ ಮಾಡಿದ್ದಾರೆ. ಇದೊಂದು ದೊಡ್ಡ ಹಗರಣ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಶಾಲಾ, ಕಾಲೇಜು ಮಕ್ಕಳು ಮಳೆ ,ಚಳಿಯಿಂದ ರಕ್ಷಣೆ ಪಡೆಯಬೇಕು ಮತ್ತು ಶಿಸ್ತುನಿಂದ ಕಾಣಬೇಕು ಎಂದು ಸ್ವೆಟರ್ ವಿತರಣಾ ಯೋಜನೆಯನ್ನು ಜಾರಿ ಮಾಡಲಾಗಿದೆ. ಅಂದಾಜು 16 ಸಾವಿರ ವಿದ್ಯಾರ್ಥಿಗಳಿಗೆ ಸ್ವೆಟರ್ ಸಿಗುತ್ತಿತ್ತು. ಆದರೆ ಈ ಯೋಜನೆ ಈಗ ಹಳ್ಳ ಹಿಡಿದಿದ್ದು. ಭ್ರಷ್ಟ ಅಧಿಕಾರಿಗಳಿಗೆ ಕಾನೂನು ಶಿಕ್ಷೆಯಾಗಬೇಕು ಎಂದು ಪ್ರತಿಭಟನೆ ಕಾರರು ಆಗ್ರಹಿಸಿದರು. ತಮಟೆ ಬಾರಿಸುವ ಮೂಲಕ ಪ್ರತಿಭಟನೆ ಆರಂಭಿಸಿದ ಕಾರ್ಯಕರ್ತರು. ಸ್ವೆಟರ್ ಹರಾಜು ಹಾಕುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಕೊಡಲೆ ಗಮನಹರಿಸಿ ಸ್ವೆಟರ್ ಖರೀದಿ ಅವ್ಯವಹಾರದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಅಮಾನತು ಮಾಡಬೇಕು ಮತ್ತು ಶಾಲಾ ,ಕಾಲೇಜು ವಿಧ್ಯಾರ್ಥಿಗಳಿಗೆ ಸ್ವೆಟರ್ ಗಳನ್ನು ವಿತರಿಸುವ ವ್ಯವಸ್ಥೆ ಬಗ್ಗೆ ಕ್ರಮವಹಿಸಬೇಕು ಎಂದು ಪ್ರತಿಭನೆಕಾರರು ಮನವಿ ಮಾಡಿದ್ದಾರೆ. ಈ ಪ್ರತಿಭಟನೆಯಲ್ಲಿ ಕೆಡಿಎಸ್‌ಎಸ್ ನ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.