ಧಾರವಾಡ: ಮಹಿಳಾ ವಕೀಲರೊಂದಿಗೆ ಅನುಚಿತವಾಗಿ ವರ್ತಿಸಿದ ಧಾರವಾಡ ಗ್ರಾಮೀಣ ಸಿಪಿಐ ಮಂಜುನಾಥ್ ಕುಸುಗಲ್ ಅವರ ಮೇಲೆ ಸೂಕ್ತ ಕ್ರಮ ಜರುಗಿಸಲು ಒತ್ತಾಯಿಸಿ ಜುಬ್ಲಿ ಸರ್ಕಲ್ ನಲ್ಲಿ ವಕೀಲರ ಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಧಾರವಾಡ ಮಹಿಳಾ ವಕೀಲರೊಬ್ಬರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುಪರ್ದಿಯಲ್ಲಿ ಬರುವ ಸಖಿ ಒನ್ ಸ್ಟಾಪ್ ಸೆಂಟರ್ ನಲ್ಲಿ ಪ್ಯಾರ ಲೀಗಲ್ ಸಿಬ್ಬಂದಿಯಾಗಿ (ಮಹಿಳಾ ಕಾನೂನು ಆಧಿಕಾರಿ) ನೇಮಕವಾಗಿದ್ದರು.
ಸದರಿ ಮಹಿಳಾ ವಕೀಲರು ಧಾರವಾಡ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕರ ಹಾಗೂ ಸಖಿ ಒನ್ ಸೆಂಟರ್ ಸ್ಟಾಪ್ ನ ಆಡಳಿತಾಧಿಕಾರಿಯ ಮೌಖಿಕ ಆದೇಶದ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪತ್ರ ಪಡೆದುಕೊಂಡು ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣೆ ಮತ್ತು ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣೆಗಳಲ್ಲಿ ಮಹಿಳೆಯರು, ಮಕ್ಕಳಿಗೆ ಸಂಬಂಧಿಸಿದಂತೆ ಅತ್ಯಾಚಾರ, ದೌರ್ಜನ್ಯ, ಅಪಹರಣ, ಲೈಂಗಿಕ ದೌರ್ಜನ್ಯ, ಹಾಗೂ ಇತರ ಗಂಭೀರ ಅಪಾರದ ಪ್ರಕರಣಗಳ ಕುರಿತು ಮಾಹಿತಿ ಪಡೆಯಲು ಮಹಿಳಾ ವಕೀಲರು ಕೋಟ್ ಧರಿಸಿಕೊಂಡು ಭೇಡಿ ನೀಡಿದರು.
ಹಾಗೆಯೇ, ಧಾರವಾಡ ಗ್ರಾಮಿಣ ಪೊಲೀಸ್ ಠಾಣೆಗೆ ಭೇಟಿ ನೀಡಿದ ಮಹಿಳಾ ವಕೀಲರು ಪ್ರಕರಣಗಳ ಮಾಹಿತಿ ನೀಡುವಂತೆ ಠಾಣೆಯ ಸಿ.ಪಿ.ಐ. ಮಂಜುನಾಥ ಕುಸುಗಲ್ ಅವರನ್ನು ಕೇಳಿದಾಗ ಸಿಪಿಐ ಅವರು ಮಹಿಳಾ ವಕೀಲರೊಂದಿಗೆ ಅನುಚಿವಾಗಿ ವರ್ತನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಹಿಳಾ ವಕೀಲರು ಸಿ.ಪಿ.ಐ. ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಛೀಮಾರಿ ಹಾಕಿದ್ದಾರೆ. ಘಟನೆ ಗಂಭೀರಗೊಂಡು ಎಚ್ಚೆತ್ತುಕೊಂಡ ಸಿಪಿಐ ಮಂಜುನಾಥ ಕುಸುಗಲ್ ಕ್ಷೇಮ ಕೇಳುವ ನಾಟಕ ಮಾಡಿದ್ದಾರೆ.
ಮಹಿಳಾ ವಕೀಲರ ಪತಿ ಹಾಗೂ ವಕೀಲರ ಸ್ನೇಹಿತ ಗ್ರಾಮಿಣ ಪೋಲಿಸ್ ಠಾಣೆಗೆ ಭೇಟಿ ನೀಡಿ ಘಟನೆ ಕುರಿತು ಅವರ ಮೇಲೆಯೂ ಅನುಚಿತವಾಗಿ ವರ್ತನೆ ಮಾಡಿದ ಮಂಜುನಾಥ ಕುಸುಗಲ್ ಮೂರು ಜನ ವಕೀಲ ಮೊಬೈಲ್ ಕಸಿದುಕೊಳ್ಳಲು ತಮ್ಮ ಸಿಬ್ಬಂದಿಗೆ ತಿಳಿಸಿ ಆಕ್ರಮವಾಗಿ ಕೂಡಿ ಹಾಕಿದ ಘಟನೆ ನಡೆದಿದೆ. ತಕ್ಷಣ ಮೂರು ಮಂದಿ ಕೃತ್ಯವನ್ನು ಪ್ರತಿಭಟಿಸಿ ಠಾಣೆಯಿಂದ ಹೊರಬಂದಿದ್ದಾರೆ.
ಈ ಸಂಬಂಧ ಮಹಿಳಾ ವಕೀಲರು, ಧಾರವಾಡ ವಕೀಲರ ಸಂಘ, ಧಾರವಾಡ ಜಿಲ್ಲಾಧಿಕಾರಿಗಳಿಗೆ ಹಾಗೂ ಧಾರವಾಡ ಜಿಲ್ಲಾ ಎಸ್.ಪಿ. ಯವರಿಗೆ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಸಂಬಂಧ ಯಾವುದೇ ಕ್ರಮ ಜರುಗಿಸದ ಪರಿಣಾಮ ಅನುಚಿತ ವರ್ತನೆ ತೊರಿದ ಸಿ.ಪಿ.ಐರವರ ವಿರುದ್ದ ಕ್ರಮಕ್ಕೆ ಆಗ್ರಹಿಸಲಾಯಿತು. ಆದರೆ ಧಾರವಾಡ ಜಿಲ್ಲಾಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದ್ದರಿಂದ ಧಾರವಾಡ ಉಪ ನಗರ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದರು. ಆದರೂ ಪ್ರಕರಣವನ್ನು ದಾಖಲಿಸಲು ವಿಳಂಬ ಮಾಡಿದ್ದನ್ನು ಖಂಡಿಸಿದ ವಕೀಲರ ಸಂಘದ ಪದಾಧಿಕಾರಿಗಳು ಪ್ರಕರಣ ದಾಖಲಿಸುವಂತೆ ಪಟ್ಟು ಹಿಡಿದಿದ್ದಾರೆ.
ಸಿಪಿಐ ಮಂಜುನಾಥ ಕುಸುಗಲ್ ಮೇಲೆ ಕ್ರಮ ವಹಿಸಬೇಕು, ಇಲಾಖಾ ವಿಚಾರಣೆ ಮುಗಿಯುವವರೆಗೂ ಸದರಿ ಪೊಲೀಸ್ ಅಧಿಕಾರಿಯನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿ ಧಾರವಾಡ ವಕೀಲರ ಸಂಘ ಬೃಹತ್ ಪ್ರತಿಭಟನೆ ನಡೆಸಿದರು.