ಮಹಾರಾಷ್ಟ್ರ ದೆಹಲಿಯಲ್ಲಿ ಒಂದೇ ದಿನ ಸಾವಿರ ಗಡಿ ದಾಟಿದ ಕೋವಿಡ್‌ ಸೋಂಕಿತರ ಸಾವು

ನವದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಒಟ್ಟಾರೆ 3,46,786 ಹೊಸ ಕೊರೊನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಇದೇ ಸಂದರ್ಭದಲ್ಲಿ 2,624 ಮಂದಿ ನಿಧನರಾಗಿದ್ದಾರೆ ಅದರಲ್ಲಿ ಮಹಾರಾಷ್ಟ್ರದಲ್ಲಿ 773 ಮಂದಿ ಹಾಗೂ ದೆಹಲಿಯಲ್ಲಿ 348 ಮಂದಿ ಸಾವಿಗೀಡಾಗಿದ್ದು ಎರಡು ರಾಜ್ಯದಲ್ಲಿ ಸಾವಿನ ಸಂಖ್ಯೆ ಸಾವಿರದ ಗಡಿ ದಾಟಿದೆ.

3,46,786 ರಷ್ಟು ಹೊಸದಾದ ಕೋವಿಡ್ ಸೋಂಕಿತರ ದಾಖಲಾತಿಯೊಂದಿಗೆ‌ ದೇಶದಲ್ಲಿ ಒಟ್ಟು 1,66,10,481ರಷ್ಟಾಗಿದೆ. ಅಲ್ಲದೆ ಇದುವರೆಗೆ 1,38,67,997 (ಶೇ.83.49) ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದುವರೆಗೆ 1,89,544 (ಶೇ.1.14) ಮಂದಿ ನಿಧನರಾಗಿದ್ದಾರೆ.

ಇದನ್ನು ಓದಿ: ಪರದೆಯಲ್ಲಿ ಮುಖ ತೋರ್ಸಿದ್ರೆ ಕೊರೊನಾ ಹೋಗಲ್ಲ ಪ್ರಧಾನಿಯವರೆ, ರಾಜ್ಯಗಳಿಗೆ ಆಕ್ಸಿಜನ್ ನೀಡಿ – ಸಿದ್ಧರಾಮಯ್ಯ

ಕಳೆದ 24 ಗಂಟೆಗಳಲ್ಲಿ 2,19,838 ಮಂದಿ ಗುಣಮುಖರಾಗಿದ್ದಾರೆ.  ಈಗ 25,52,940 ಸಕ್ರಿಯ ಪ್ರಕರಣಗಳಿವೆ.

ನೆನ್ನೆ ಒಂದೇ ದಿನ ಮಹಾರಾಷ್ಟ್ರ-66,836, ಕೇರಳ-28,447, ತಮಿಳುನಾಡು-13,776, ಉತ್ತರ ಪ್ರದೇಶ-36,605, ಆಂಧ್ರಪ್ರದೇಶ-11,766, ದೆಹಲಿ-24,331, ಪಶ್ಚಿಮ ಬಂಗಾಳ-12,876, ಛತ್ತೀಸಘಡ-17,397, ರಾಜಸ್ಥಾನ-15,398, ಮಧ್ಯ ಪ್ರದೇಶ-13,590, ಗುಜರಾತ್‌-13,804 ಹೊಸದಾಗಿ ಪ್ರಕರಣಗಳು ದಾಖಲಾಗಿವೆ.

ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರು 41,61,676 ಆಗಿದ್ದು ಅದರಲ್ಲಿ 34,04,792 (ಶೇ.82ರಷ್ಟು) ಮಂದಿ ಗುಣಮುಣರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 63,252 ಆಗಿದೆ. ಸದ್ಯ 6,93,632 ಸಕ್ರಿಯ ಪ್ರಕರಣಗಳು ಇವೆ.

ಇದನ್ನು ಓದಿ: ಪ್ರಧಾನಿಗಳಿಗೆ ಆಮ್ಲಜನಕ ಹಾಗೂ ಔಷಧಿ ಪೂರೈಸಲು ಹಲವು ರಾಜ್ಯಗಳಿಂದ ಬೇಡಿಕೆ

ರಾಜ್ಯದಲ್ಲಿ ಒಂದೇ ದಿನ 66,836 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ. ಎರಡನೇ ಅಲೆಯ ಅಬ್ಬರ ಹೆಚ್ಚಾಗುತ್ತಿವೆ. ಆದಾಗ್ಯೂ ವಾರಗಳ ಬಳಿಕ ಇದೇ ಮೊದಲ ಬಾರಿಗೆ ಹೊಸ ಪ್ರಕರಣಗಳಿಗಿಂತ ಅಧಿಕ ಸಂಖ್ಯೆಯ ರೋಗಿಗಳು ಗುಣಮುಖರಾಗಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿದೆ.

ದೆಹಲಿಯಲ್ಲಿ ಕೂಡಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಒಟ್ಟಾರೆ ಇದುವರೆಗೆ ಇಲ್ಲಿ 9,80,679 ಪ್ರಕರಣಗಳು ದಾಖಲಾಗಿದ್ದು 8,75,109 ಮಂದಿ ಗುಣಮುಖರಾಗಿದ್ದಾರೆ. 92,029 ಪ್ರಕರಣಗಳು ಸಕ್ರಿಯವಾಗಿದೆ. ಇದುವರೆಗೆ ರಾಜ್ಯದಲ್ಲಿ 13,541 ಮಂದಿ ನಿಧನರಾಗಿದ್ದಾರೆ.

ದೆಹಲಿಯಲ್ಲಿ ಕೊರೊನಾ ಸಾವಿನ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಈ ಪೈಕಿ ಕೆಲವರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗಳಲ್ಲಿನ ಆಮ್ಲಜನಕದ ಪೂರೈಕೆಯ ಅಭಾವದಿಂದ ನಿಧನರಾಗಿದ್ದಾರೆ.

ಇದನ್ನು ಓದಿ: ರಾಜ್ಯದ ಜನತೆಗೆ ಪಡಿತರ ಕಡಿತಕ್ಕೆ ಸಿಪಿಐ(ಎಂ) ತೀವ್ರ ವಿರೋಧ

ಕರ್ನಾಟಕ

ನೆನ್ನೆ ಒಂದೇ ಅತ್ಯಂತ ಗರಿಷ್ಠ ಮಟ್ಟದಲ್ಲಿ ಸೋಂಕಿತರು ದಾಖಲಾಗಿದ್ದು 26,962 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, 8,697 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 190 ಕೋವಿಡ್‌ ಸೋಂಕಿತರು ನಿಧನರಾಗಿದ್ದಾರೆ.

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ-12,74,959, ಗುಣಮುಖರಾದವರ ಸಂಖ್ಯೆ-10,46,554, ಸದ್ಯ ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ-2,14,311 ಮತ್ತು ಒಟ್ಟು ಸಾವಿನ ಸಂಖ್ಯೆ-14,075.

ದಿನದ ಅಂತ್ಯಕ್ಕೆ 1,128 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ನೆನ್ನೆ ಒಂದೇ ದಿನ ಬೆಂಗಳೂರಿನಲ್ಲಿ 16,662 ಹೊಸ ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರು 6,15,581 ಸಂಖ್ಯೆಯಾಗಿದೆ. ಇದುವರೆ ಬೆಂಗಳೂರಿನಲ್ಲಿ 5574 ಮಂದಿ ನಿಧನರಾಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *