ಮಹಾರಾಷ್ಟ್ರ | ಅಡ್ವಾಣಿಗೆ ‘ಗಲಭೆಕೋರ’ ಎಂದ ಪತ್ರಕರ್ತನ ವಿರುದ್ಧ ಎಫ್‌ಐಆರ್

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕ ಎಲ್‌.ಕೆ. ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದನ್ನು ಟೀಕಿಸಿ “ಮಾನಹಾನಿಕರ” ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ ಎಂದು ಆರೋಪಿಸಿ ಪತ್ರಕರ್ತ ನಿಖಿಲ್ ವಾಗ್ಲೆ ವಿರುದ್ಧ ಪುಣೆ ಪೊಲೀಸರು ಶುಕ್ರವಾರ ಎಫ್‌ಐಆರ್ ದಾಖಲಿಸಿದ್ದಾರೆ. ಬಿಜೆಪಿ ಮುಖಂಡ ಸುನಿಲ್ ದೇವಧರ್ ಅವರ ದೂರಿನ ಮೇರೆಗೆ ವಿಶ್ರಂಬಾಗ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಪತ್ರಕರ್ತ ವಾಗ್ಲೆ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153A (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 500 (ಮಾನನಷ್ಟಕ್ಕಾಗಿ ಶಿಕ್ಷೆ) ಮತ್ತು 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಡ್ವಾಣಿ

ಇದನ್ನೂ ಓದಿ:ಮುಂಬೈ | ಕ್ಯಾಮೆರಾ ಮುಂದೆಯೆ ಶಿವಸೇನೆ (ಉದ್ಧವ್ ಬಣ) ನಾಯಕನ ಗುಂಡಿಕ್ಕಿ ಹತ್ಯೆ

ಪತ್ರಕರ್ತ ವಾಗ್ಲೆ ಅವರು ಫೆಬ್ರವರಿ 4 ರಂದು ಎಕ್ಸ್‌ನಲ್ಲಿ “ಮಾನಹಾನಿಕರ ಹೇಳಿಕೆ”ಯನ್ನು ಪೋಸ್ಟ್ ಮಾಡಿದ್ದಾರೆ ಎಂದು ಎಫ್‌ಐಆರ್‌ ಹೇಳಿದೆ. ಎಲ್‌.ಕೆ. ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವುದನ್ನು ಉಲ್ಲೇಖಿಸಿದ್ದ ವಾಗ್ಲೆ ಮರಾಠಿಯಲ್ಲಿ, “ಒಬ್ಬ ಗಲಭೆಕೋರರಿಂದ ಇನ್ನೊಬ್ಬರಿಗೆ ಪ್ರಶಸ್ತಿ” ಎಂದು ಟ್ವೀಟ್ ಮಾಡಿದ್ದರು.

ತಮ್ಮ ಟ್ವೀಟ್ ಬಗ್ಗೆ ಎರಡು ದಿನಗಳ ನಂತರ ಮತ್ತೆ ಟ್ವೀಟ್ ಮಾಡಿರುವ ವಾಗ್ಲೆ ಅವರು ತನ್ನ ಹಿಂದಿನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. “ನಾನು ಜೈಲು ಪಾಲಾದರೂ ಕೂಡಾ ನನ್ನ ಹೇಳಿಕೆಗೆ ಬದ್ದವಾಗಿದ್ದೇನೆ” ಎಂದು ಅವರು ಹೇಳಿದ್ದು, “ಇದು ಅಘೋಷಿತ ತುರ್ತು ಪರಿಸ್ಥಿತಿ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಬಾಬರಿ ಮಸೀದಿ ಧ್ವಂಸದ ವೇಳೆ ಪ್ರಧಾನಿಯಾಗಿದ್ದ ಕಾಂಗ್ರೆಸ್‌ನ ಪಿ. ವಿ. ನರಸಿಂಹ ರಾವ್‌ಗೆ ಭಾರತ ರತ್ನ ಘೋಷಣೆ

ಶುಕ್ರವಾರ ಸಂಜೆ ಪುಣೆಯಲ್ಲಿ ನಡೆಯುವ ‘ನಿರ್ಭಯ್ ಬಾನೊ’ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಲಿದ್ದು, ಬಿಜೆಪಿ ಪುಣೆ ಘಟಕವು ನಗರ ಪೊಲೀಸರಿಗೆ ಪತ್ರದಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಕೋರಿದೆ. ಒಂದು ವೇಳೆ ಕಾರ್ಯಕ್ರಮ ನಡೆದರೆ ಅದಕ್ಕೆ ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿದೆ.

ವಾರದ ಹಿಂದೆಯಷ್ಟೆ ದೇಶದಾದ್ಯಂತ ರಥುಯಾತ್ರೆ ನಡೆಸಿ ಕೋಮುಗಲಭೆಗೆ ಕಾರಣರಾಗಿದ್ದ ಮಾಜಿ ಉಪ ಪ್ರಧಾನಿ ಎಲ್‌.ಕೆ. ಅಡ್ವಾಣಿಗೆ ಭಾರತ ರತ್ನ ಘೋಷಣೆಯಾಗಿತ್ತು. ಇದೀಗ ಬಾಬರಿ ಮಸೀದಿ ಒಡೆಯುವ ವೇಳೆ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್ ಅವರಿಗೆ ಶುಕ್ರವಾರ ಭಾರತ ರತ್ನ ಘೋಷಿಸಲಾಗಿದೆ. ಅಡ್ವಾನಿ ಮುನ್ನಡೆಸಿದ್ದ ರಥಯಾತ್ರೆಯ ನಂತರ ದೇಶವ್ಯಾಪಿ ಕೋಮುಗಲಭೆ ನಡೆದು ಹಲವಾರು ಜನರು ಮೃತಪಟ್ಟಿದ್ದರು. ಈ ಕೋಮು ದ್ರುವೀಕರಣ ಬಾಬರಿ ಮಸೀದಿ ಒಡೆಯಲು ಕಾರಣವಾಗಿ, ದೇಶದಾದ್ಯಂತ ಕೋಮು ರಾಜಕಾರಣಕ್ಕೆ ಮುನ್ನುಡಿ ಬರೆಯುತು.

ವಿಡಿಯೊ ನೋಡಿ:ಕೇರಳಕ್ಕೆ ಅನ್ಯಾಯ :ಕೇಂದ್ರ ಸರ್ಕಾರದ ವಿರುದ್ಧ ಕೇರಳ ಸರ್ಕಾರದ ಪ್ರತಿಭಟನೆ

Donate Janashakthi Media

Leave a Reply

Your email address will not be published. Required fields are marked *