ಮಾಲೀಕನನ್ನು ರಕ್ಷಿಸಲು ಹುಲಿಯ ಜತೆ ಹೋರಾಡಿದ್ದ ಸಾಕು ನಾಯಿಯೊಂದು ಕೊನೆಯುಸಿರೆಳೆದಿದೆ. ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಫೆಬ್ರವರಿ 26ರಂದು ಬಾಂಧವಗಢ ಹುಲಿ ಅಭಯಾರಣ್ಯದ ಬಳಿ ಘಟನೆ ನಡೆದಿತ್ತು. ತನ್ನ ಮಾಲೀಕನನ್ನು ರಕ್ಷಿಸಲು ಹುಲಿಯ ವಿರುದ್ಧ ಹೋರಾಡಿ ಹುಲಿಯನ್ನು ಕಾಡಿನೊಳಗೆ ಓಡಿ ಹೋಗುವಂತೆ ಮಾಡಿದ್ದ ನಾಯಿ ಸಾವನ್ನಪ್ಪಿದೆ. ಶಿವಂ ಬಡ್ಗೈಯಾ ತನ್ನ ಸಾಕುಪ್ರಾಣಿ ಜರ್ಮನ್ ಶೆಫರ್ಡ್‌ನೊಂದಿಗೆ ಮನೆಯ ಹೊರಗೆ ಇದ್ದಾಗ, ಹತ್ತಿರದ ಕಾಡಿನಿಂದ ಹುಲಿಯೊಂದು ಹಳ್ಳಿಗೆ ದಾರಿ ತಪ್ಪಿ ಬಂದಿತ್ತು. ಹುಲಿ ಶಿವಂ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು, ಆದರೆ ಅವನ ನಾಯಿ ಹುಲಿಯನ್ನು ಎದುರಿಸಿ ಜೋರಾಗಿ ಬೊಗಳಲು ಪ್ರಾರಂಭಿಸಿತು.
ಇದನ್ನು ಓದಿ :-ಗ್ಯಾರಂಟಿ ಯೋಜನೆಗಳು ಜನರಿಗೆ ಅನುಕೂಲವಾಗಿದೆ: ಥಾವರ್ ಚಂದ್ ಗೆಹ್ಲೊಟ್