ರಾಷ್ಟ್ರೀಯ ರಾಜಧಾನಿಯ ಮೇಲೆ ನಿರ್ಬಂಧಗಳ ಹೇರಿಕೆಯನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟಿನಲ್ಲಿ ಎಂಎ ಬೇಬಿ ಅರ್ಜಿ

ಕ್ರೊಕ್ರೋಚ್‌ ಜನತಾ ಪಾರ್ಟಿ  ,ಎಸ್‌ಎಫ್‌ಐ, ಎಐಎಸ್‌ಎಫ್‌, ಎಐಎಸ್‌ಎ ಮತ್ತಿತರ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಜತೆಗೂಡಿ ಕರೆ ನೀಡಿರುವ ಅಕ್ಟೋಬರ್‌ ೧೦ ರ ಎಸ್‌ಐಆರ್‌-ವಿರೋಧಿ   ಜಂತರ್‌ ಮಂತರ್‌ ಪ್ರತಿಭಟನೆಯನ್ನು ತಡೆಯಲು ಕೇಂದ್ರ ಸರಕಾರದ ಗೃಹ ಮಂತ್ರಾಲಯ ಶತ ಪ್ರಯತ್ನ ನಡೆಸುತ್ತಿರುವಂತೆ ಕಾಣುತ್ತಿದೆ. ಅನುಮತಿ ನಿರಾಕರಣೆ, ಮೆಟ್ರೋ ನಿಲ್ದಾಣಗಳ ಮುಚ್ಚಿಕೆ, ದಿಲ್ಲಿಗೆ ಬೇರೆ ರಾಜ್ಯಗಳಿಂದ ಬರುವ ರೈಲುಗಳ ರದ್ಧತಿ, ಇಂಟರ್ನೆಟ್‌ ಬಂದ್‌, ವಿದ್ಯಾರ್ಥಿ -ಯುವಜನ  ನಾಯಕರ ಬಂಧನ, ತಡೆಗೋಡೆಗಳ ನಿರ್ಮಾಣ ಮತ್ತು ಭಾರೀ ಸಂಖ್ಯೆಯಲ್ಲಿ ದಿಲ್ಲಿ ಪೊಲಿಸ್‌ನೊಂದಿಗೆ ಅರೆ ಸೈನಿಕ ಪಡೆಗಳ ನಿಯೋಜನೆ ಹೀಗೆ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ವರದಿಯಾಗಿದೆ. ರಾಷ್ಟ್ರೀಯ

ರಾಷ್ಟ್ರದ ರಾಜಧಾನಿಯ ಮೇಲೆ ನಿರ್ಬಂಧಗಳನ್ನು ಹೇರುವ  ಈ ಕ್ರಮಗಳನ್ನು ಪ್ರಶ್ನಿಸಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿ ಸುಪ್ರಿಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹಿರಿಯ ವಕೀಲ ಕಪಿಲ್‌ ಸಿಬಲ್‌ ಇದರ ವಕಾಲತು ವಹಿಸಿಕೊಂಡಿದ್ದಾರೆ. ಅವರು ಮತ್ತು ಇತರ ವಕೀಲರು ಈ ಅರ್ಜಿಯನ್ನು ಅಕ್ಟೋಬರ್‌ ೯ರಂದೇ ವಿಚಾರಣೆಗೆ ಎತ್ತಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಈಗಾಗಲೇ ಜುಲೈನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳಿಗೆ ಸಂಬಂಧಿಸಿದ ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್‌ ೯ರಂದು ನಡೆಸುವುದಾಗಿ ಹೇಳಲಾಗಿತ್ತು. ; ಇವುಗಳ ಪೈಕಿ ಒಂದು ಅರ್ಜಿಯು, ಅಕ್ಟೋಬರ್ 10 ರ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಕೋರಿದೆ ಎಂದು ತಿಳಿದು ಬಂದಿದೆ.

ಈ ನಡುವೆ, ರಾಷ್ಟ್ರಾಧ್ಯಕ್ಷೆ ದ್ರೌಪದಿ ಮುರ್ಮುರವರು ಇಂಡಿಯಾ ಬಣದ ನಿಯೋಗವನ್ನು ರಾತ್ರಿ ೮ಗಂಟೆಗೆ ಭೇಟಿಯಾಗಲು ಅವಕಾಶ ನೀಡಿರುವುದಾಗಿಯೂ ವರದಿಯಾಗಿದೆ. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿ, ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮತ್ತಿತರರು ಈ ನಿಯೋಗದಲ್ಲಿ ಇರುತ್ತಾರೆ ಎನ್ನಲಾಗಿದೆ. ರಾಷ್ಟ್ರೀಯ

ಪ್ರತಿಭಟನೆಗೆ ಅನುಮತಿ ನಿರಾಕರಣೆ:

ದಿಲ್ಲಿ ಪೊಲೀಸರು ಶುಕ್ರವಾರ (ಅಕ್ಟೋಬರ್ 9) ಬೆಳಿಗ್ಯೆ , ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಅಕ್ಟೋಬರ್ 1೦ ರಂದು  ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ‘ಕಾಕ್ರೋಚ್ ಜನತಾ ಪಾರ್ಟಿ’ಗೆ (CJP) ಅನುಮತಿಯನ್ನು ನಿರಾಕರಿಸಿರುವುದಾಗಿ ತಿಳಿಸಿದರು.

ಸಂಯೋಜಕರಿಂದ ಈ ಕುರಿತ ಸೂಚನೆಯು ಕಾರ್ಯಕ್ರಮಕ್ಕೆ ಬಹಳ ಕಡಿಮೆ ಸಮಯವಿದ್ದಾಗ ಬಂದಿರುವುದು ಕಂಡುಬಂದಿದೆ, ಅಲ್ಲದೆ, ಹಿಂದೆ ಮತ್ತೊಂದು ಸಂದರ್ಭದಲ್ಲಿ CJP ನಡೆದುಕೊಂಡ ರೀತಿಯನ್ನು ಗಮನಿಸಿದಾಗ, ಈ ಹಿಂದೆ ನೀಡಲಾದ ಭರವಸೆಗಳು ಮತ್ತು ಕಾನೂನುಬದ್ಧ ನಿರ್ದೇಶನಗಳನ್ನು ಪಾಲಿಸಿರಲಿಲ್ಲ. ನಿಗದಿತ ಕಾರ್ಯವಿಧಾನಗಳನ್ನು ಪಾಲಿಸದಿರುವುದು, ಹಿಂದಿನ ಕಾನೂನು ನಿರ್ದೇಶನಗಳನ್ನು ಅನುಸರಿಸದಿರುವುದು ಹಾಗೂ ಸಾರ್ವಜನಿಕ ಸುರಕ್ಷತೆ, ಕಾನೂನು-ಸುವ್ಯವಸ್ಥೆ ಮತ್ತು ಸಂಚಾರ ನಿಯಂತ್ರಣದ ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ಜಂತರ್ ಮಂತರ್‌ನಲ್ಲಿ ಪ್ರಸ್ತಾಪಿಸಲಾದ ಪ್ರತಿಭಟನೆಗೆ ಅನುಮತಿಯನ್ನು ನಿರಾಕರಿಸಲಾಗಿದೆಎಂದು ಜಂಟಿ ಪೊಲೀಸ್ ಆಯುಕ್ತರಾದ ನೂಪುರ್ ಪ್ರಸಾದ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುವುದಾಗಿ  ವರದಿಯಾಗಿದೆ.

ಇದಕ್ಕೂ ಮುನ್ನ, ದೇಶದ  ರಾಜಧಾನಿಯ 57 ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಅಕ್ಟೋಬರ್ 9  ರ ರಾತ್ರಿ ೯ರಿಂದಲೇ ಮುಚ್ಚುವಂತೆ ದಿಲ್ಲಿ ಪೊಲಿಸ್‌ ಕ್ರಮ ಕೈಗೊಂಡಿದೆ ಎಂದೂ ವರದಿಯಾಗಿದೆ.

ರೈಲ್ವೆ ಇಲಾಖೆ ಅಕ್ಟೋಬರ್‌ ೯ರಂದು ೧೦ ಗಂಟೆಗಳ ಕಾಲ ನ್ಯೂಡೆಲ್ಲಿ ಮತ್ತು ಹಜ್ರತ್‌ ನಿಜಾಮುದ್ದೀನ್‌ ರೈಲ್ವೆ ನಿಲ್ದಾಣಗಳಿಗೆ ಬರುವ ಮತ್ತು ಅಲ್ಲಿಂದ ಹೊರಡುವ ಪ್ರಮುಖ  ರೈಲುಗಳ ಪ್ರಯಾಣಗಳನ್ನು ರದ್ದು ಮಾಡಿದೆ ಎಂದೂ ವರದಿಯಾಗಿದೆ.

ಅಲ್ಲದೆ, ಅಧಿಕಾರಿಗಳು ದೆಹಲಿಯಾದ್ಯಂತ ಹೋಟೆಲ್‌ಗಳು ಮತ್ತು ಅತಿಥಿ ಗೃಹಗಳನ್ನು ಪರಿಶೀಲಿಸಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸಲು ಬರುತ್ತಿರುವಂತೆ ತೋರುವ ಹೊಸ ಸಂದರ್ಶಕರನ್ನು ದಾಖಲಿಸಿಕೊಳ್ಳದಂತೆ ಅವುಗಳಿಗೆ ಸೂಚನೆ ನೀಡಿದ್ದಾರಂತೆ.

ಪಿಟಿಐ ವರದಿಯ ಪ್ರಕಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಗುರುವಾರ (ಅಕ್ಟೋಬರ್ 8) ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ಸಲಹಾ ಸೂಚನೆಯನ್ನು ಹೊರಡಿಸಿದೆ. ರಾಷ್ಟ್ರೀಯ

ಇದನ್ನೂ ಓದಿ : ಬೆಂಗಳೂರಿನ ರಸ್ತೆಗಳಿಗೆ ಎಐ ಸಮೀಕ್ಷೆ: 2,493 ಕಿ.ಮೀ. ರಸ್ತೆ ಪರಿಶೀಲನೆ, 14,393 ಗುಂಡಿಗಳು ಪತ್ತೆ

ವಿದ್ಯಾರ್ಥಿ-ಯುವಜನ ಮುಖಂಡರ ಬಂಧನ

ಅಕ್ಟೋಬರ್ 10ರಂದು ದೆಹಲಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ಯೋಜಿಸುತ್ತಿದ್ದ ಜನರನ್ನು ದೇಶದ ವಿವಿಧ ಭಾಗಗಳಲ್ಲಿ ವಶಕ್ಕೆ ಪಡೆಯಲಾಗುತ್ತಿದೆ ಎಂದು ‘ಕಾಕ್ರೋಚ್ ಜನತಾ ಪಾರ್ಟಿ’ (CJP), ‘ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ’ (SFI) ಮತ್ತು ಇತರ ಸಂಘಟನೆಗಳು ಗುರುವಾರ (ಅಕ್ಟೋಬರ್ 8) ಆರೋಪಿಸಿವೆ.

 ಪ್ರತಿಭಟನೆಗೆ ಕರೆ ನೀಡಿದ ಐದು ಎಡಪಂಥೀಯ ಸಂಘಟನೆಗಳಲ್ಲಿ ಒಂದಾದ SFI, ಕಾರ್ಯಕರ್ತರು ದೆಹಲಿಗೆ ಪ್ರಯಾಣಿಸುವುದನ್ನು ತಡೆಯಲು ಪೊಲೀಸರು ಅವರ ಮನೆಗಳಿಗೆ ತೆರಳಿ ಕುಟುಂಬದವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದೆ.

“‘ವೋಟ್ ಚೋರಿ’ (ಮತ ಕಳ್ಳತನ) ವಿರುದ್ಧ ಅಕ್ಟೋಬರ್ 10 ರಂದು ನಡೆಯಲಿರುವ ಪ್ರತಿಭಟನೆಗಾಗಿ ದೆಹಲಿಗೆ ಪ್ರಯಾಣಿಸುವುದನ್ನು ತಡೆಯುವ ಪ್ರಯತ್ನವಾಗಿ, ನಿನ್ನೆ ರಾತ್ರಿಯಿಂದ ಪೊಲೀಸರು ಎಸ್ಎಫ್‌ಐ ಮತ್ತು ಇತರ ಪ್ರಜಾಸತ್ತಾತ್ಮಕ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರುವ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ, ಅವರನ್ನು ವಶಕ್ಕೆ ಪಡೆಯುತ್ತಿದ್ದಾರೆ ಮತ್ತು ಅವರ ಕುಟುಂಬಗಳಿಗೆ ಬೆದರಿಕೆ ಹಾಕುತ್ತಿದ್ದಾರೆ,” ಎಂದು ಎಸ್ಎಫ್‌ಐ ಹೇಳಿಕೆಯಲ್ಲಿ ತಿಳಿಸಿದೆ. ಅದರ ಪ್ರಕಾರ, ಗೃಹಬಂಧನದಲ್ಲಿರುವವರು ಅಥವಾ ವಶಕ್ಕೆ ಪಡೆಯಲಾದವರಲ್ಲಿ ಎಸ್‌ಎಫ್‌ಐ ಸಹರಾನ್‌ಪುರ ಜಿಲ್ಲಾ ಸಂಚಾಲಕ ಆರಿಫ್, ಎಸ್‌ಎಫ್‌ಐ ಸುಲ್ತಾನ್‌ಪುರ ಜಿಲ್ಲಾ ಅಧ್ಯಕ್ಷ ಸಲೀಲ್, ಅಖಿಲ ಭಾರತ ಕಿಸಾನ್ ಸಭಾದ ನಾಯಕ ದಾವೂದ್ ರಾವ್ ಮತ್ತು ಎಸ್‌ಎಫ್‌ಐ ರಾಷ್ಟ್ರೀಯ ಉಪಾಧ್ಯಕ್ಷ ಸತ್ಯೇಶ ಲೇವಾ ಸೇರಿದ್ದಾರೆ.

ಕಾರ್ಯಕರ್ತರಿಂದ ಅವರ ವಿಳಾಸಗಳು ಮತ್ತು ಇತರ ವೈಯಕ್ತಿಕ ಮಾಹಿತಿಯಂತಹ ವಿವರಗಳನ್ನು ನೀಡುವಂತೆ ಕೇಳಲಾಗುತ್ತಿದೆ ಎಂದೂ ಅದು ಆರೋಪಿಸಿದೆ.

ಅಕ್ಟೋಬರ್ 10 ರ ಪ್ರತಿಭಟನೆ ನಡೆಸಲು ‘ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್’ (AISA) ಕರೆ ನೀಡಿರುವ ಹಿನ್ನೆಲೆಯಲ್ಲಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್) ಲಿಬರೇಶನ್‌ ನ  ಲಕ್ನೋ ಘಟಕದ ಜಿಲ್ಲಾ ಕಾರ್ಯದರ್ಶಿ ರಮೇಶ್ ಸೆಂಗಾರ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ. ರಾಷ್ಟ್ರೀಯ

“ತುರ್ತು ಪರಿಸ್ಥಿತಿಯನ್ನು ಅಧಿಕೃತಗೊಳಿಸಿದ್ದಾರೆ”

“ಈ ಸರ್ಕಾರ ಈಗ ಎಲ್ಲಾ ಮಿತಿಗಳನ್ನು ಮೀರಿದೆ. ಪುಣೆಯ ವಿದ್ಯಾರ್ಥಿಗಳ ಗುಂಪೊಂದು ಅಕ್ಟೋಬರ್ 10ರ ಪ್ರತಿಭಟನೆಯಲ್ಲಿ ಭಾಗವಹಿಸಲು ದೆಹಲಿಗೆ ಹೊರಟಿತ್ತು. ಅವರನ್ನು ದಾರಿಯಲ್ಲೇ ತಡೆದು ವಶಕ್ಕೆ ಪಡೆಯಲಾಗಿದೆ ಮತ್ತು ಈಗ ಬಸ್‌ನಲ್ಲಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗುತ್ತಿದೆ. ಅವರನ್ನು ಎಲ್ಲಿಗೆ ಕರೆದೊಯ್ಯಲಾಗುತ್ತಿದೆ? ಇದಕ್ಕೆ ಆದೇಶ ನೀಡಿದವರು ಯಾರು?” ಎಂದು ಸಿಜೆಪಿ ಹೇಳಿದೆ.

“ಇನ್ನೂ ಪ್ರಾರಂಭವಾಗದ ಪ್ರತಿಭಟನೆಗಾಗಿ ಜನರನ್ನು ವಶಕ್ಕೆ ಪಡೆಯುವುದು, ಬಂಧಿಸುವುದು ಮತ್ತು ಥಳಿಸುವುದೇ? ಈ ಸರ್ಕಾರ ಸೃಷ್ಟಿಸಿರುವ ಅವ್ಯವಸ್ಥೆಯು, ಅವರು ಕುಳಿತಿರುವ ಅಧಿಕಾರದ ಗದ್ದುಗೆಯನ್ನೇ ಅಲ್ಲಾಡಿಸಲಿದೆ; ಅದು ಅವರು ಅಂದುಕೊಂಡಿರುವುದಕ್ಕಿಂತ ಬೇಗನೆ ಸಂಭವಿಸಲಿದೆ,” ಎಂದು ಅದು  ಹೇಳಿದೆ.

“ ನರೇಂದ್ರ ಮೋದಿ ತುರ್ತು ಪರಿಸ್ಥಿತಿಯನ್ನು ಅಧಿಕೃತಗೊಳಿಸಿದ್ದಾರೆ. ಆದರೂ ಯುವಜನರು ಶನಿವಾರ ದಿಲ್ಲಿಯಲ್ಲಿರುತ್ತಾರೆ. ನಾಳೆ ನೋಡೋಣ” ಎಂದು ಸಿಜೆಪಿ ಮುಖಂಡತ್ವ ದಕ್ಕೆ ಪ್ರತಿಕ್ರಿಯಿಸುತ್ತ ಹೇಳಿದೆ. ರಾಷ್ಟ್ರೀಯ

ಇದನ್ನೂ ನೋಡಿ : ಎಸ್‌ಐಆರ್‌ ತೀರ್ಪು ಹಿಂಪಡೆಯಿರಿ: ಸುಪ್ರೀಂ ಕೋರ್ಟ್‌ಗೆ ಚುನಾವಣಾ ಆಯೋಗ ವಂಚನೆ ಎಸಗಿದೆ – ಜಸ್ಟೀಸ್‌ ಗೋಪಾಲಗೌಡ

Donate Janashakthi Media

Leave a Reply

Your email address will not be published. Required fields are marked *