ಚೀನಿ ಸಣ್ಣ ಕತೆಗಳ ಪಿತಾಮಹ ಎಂದೇ ಖ್ಯಾತರಾದ ಮತ್ತು ಚೀನಾದ ಊಳಿಗಮಾನ್ಯ ಶಕ್ತಿಗಳ ವಿರುದ್ದ ಯುದ್ದ ಸಾರಿದ ಲೇಖಕ ಹಾಗೂ ಕ್ರಾಂತಿಕಾರ ಲು ಶುನ್ ಅವರ ಕಥಾ ಸಂಕಲನವನ್ನು ‘ಸಂಗಾತ ಪುಸ್ತಕ’ ಇತ್ತೀಚೆಗೆ ಮರುಪ್ರಕಟಣೆ ಮಾಡಿದೆ. ಈತ ಬರೆದ ಮೊದಲ ಕತೆ ʻಹುಚ್ಚನ ದಿನಚರಿʼ ಯು ಆಧುನಿಕ ಚೀನಾ ನಿರ್ಮಾಣದಲ್ಲಿ ಇತಿಹಾಸವಾಗಿ ಉಳಿದುಬಿಟ್ಟಿದ್ದು, ಚೀನೀ ಸಾಹಿತ್ಯಕ್ಕೆ ಹೊಸ ತಿರುವನ್ನೂ ಕೊಟ್ಟಿದೆ ಎಂದು ಹೇಳಲಾಗಿದೆ. ಲೇಖಕ ಜಿ. ಪಿ. ಬಸವರಾಜು ಅವರು ಈ ಮಹತ್ವದ ಕಥಾ ಸಂಕಲನವನ್ನು ಸಂಪಾದಿಸಿದ್ದಾರೆ.
ಈ ಪುಸ್ತಕದ ಕುರಿತು ಕ್ರಿಯಾ ಮಾಧ್ಯಮ “ಪುಸ್ತಕಪ್ರೀತಿ ತಿಂಗಳ ಮಾತುಕತೆ”ಯನ್ನು ಇದೇ ಶನಿವಾರ (ಸೇ.10) ಸಂಜೆ 5ಕ್ಕೆ ಹಮ್ಮಿಕೊಂಡಿದೆ. ಖ್ಯಾತ ಕತೆಗಾರ ಕೇಶವ ಮಳಗಿ ಅವರು ಪುಸ್ತಕದ ಕುರಿತು ಮಾತನಾಡಿ ಸಂವಾದಕ್ಕೆ ಚಾಲನೆ ಕೊಡಲಿದ್ದಾರೆ. ಸಂವಾದದಲ್ಲಿ ಡಾ.ಕುಮಾರಸ್ವಾಮಿ ಬೆಜ್ಜಿಹಳ್ಳಿ ಅಲ್ಲದೆ, ಜಿ.ಪಿ.ಬಸವರಾಜು (ಸಂಪಾದಕರು), ವಿ.ಎನ್. ಲಕ್ಷ್ಮೀನಾರಾಯಣ, ಓ.ಎಲ್. ನಾಗಭೂಷಣಸ್ವಾಮಿ, ರಾಜೇಂದ್ರ ಚೆನ್ನಿ, ಬಿದರಹಳ್ಳಿ ನರಸಿಂಹಮೂರ್ತಿ, ಎಂ.ಬಿ.ನಟರಾಜ್, ಟಿ.ಎಸ್.ರಾಮಸ್ವಾಮಿ, ಶಾಂತಾ ಬಿ.ಎನ್. (ಅನುವಾದಕರು) ಟಿ.ಎಸ್.ಗೊರವರ (ಪ್ರಕಾಶಕರು) ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮವು ಭೌತಿಕ+ಆನ್-ಲೈನ್ ವಿಧಾನದಲ್ಲಿ ನಡೆಯಲಿದೆ. ಕಾರ್ಯಕ್ರಮವು ಬಸವನಗುಡಿಯಲ್ಲಿರುವ ಕ್ರಿಯಾ ಮಾಧ್ಯಮ ದ ಹೊಸ ಪುಸ್ತಕ ಮಳಿಗೆಯಲ್ಲಿ (#70, ಸುಬ್ಬರಾಮಚೆಟ್ಟಿ ರಸ್ತೆ, ನೆಟ್ಟಕಲ್ಲಪ್ಪ ಸರ್ಕಲ್, ಬಾಯರ್ಸ್ ಕೆಫೆ ಪಕ್ಕದ ಸಂಕೀರ್ಣದಲ್ಲಿ ಎರಡನೆಯ ಮಾಳಿಗೆ) ನಡೆಯಲಿದೆ. ಸಂವಾದದಲ್ಲಿ ಭಾಗವಹಿಸುವ ಹೆಚ್ಚಿನವರು ಪುಸ್ತಕ ಮಳಿಗೆಯಲ್ಲಿ ಭಾಗವಹಿಸುತ್ತಾರೆ.
ರಾಜ್ಯದ (ಯಾಕೆ ಜಗತ್ತಿನ) ಯಾವುದೇ ಮೂಲೆಯಿಂದ Zoom ಮೂಲಕವೂ ಭಾಗವಹಿಸಬಹುದು . ಸಂವಾದವನ್ನೂ ನಡೆಸಬಹುದು.
Zoom ಲಿಂಕ್ ವಿವರಗಳು ಈ ಕೆಳಗಿನಂತಿವೆ.
Meeting ID : 83381253910 Password : 537316
https://us02web.zoom.us/j/83381253910?pwd=bnV1ZVUxWUJsQnE0ek5vbzEyTDF2Zz09
ಸಾಮ್ರಾಜ್ಯಶಾಹಿ ಮತ್ತು ಊಳಿಗಮಾನ್ಯ ಪ್ರಭುಗಳು ಹೊಸ ರೂಪದಲ್ಲಿ ಎದುರಾಗುತ್ತಿರುವ ಈಗಿನ ಸಂದರ್ಭದಲ್ಲಿ, ಸುಮಾರು ನೂರು ವರ್ಷಗಳ ಹಿಂದೆ ಬರೆದ ಲು ಶುನ್ ಕತೆಗಳ ಮರುಓದು, ವಿಶ್ಲೇಷಣೆಗಳು ವಿಶೇಷ ಮಹತ್ವ ಹೊಂದಿವೆ. ಚೀನಾವು ಸಾಮ್ರಾಜ್ಯಶಾಹಿಗಳ ಮುಷ್ಠಿಯಲ್ಲಿದ್ದಾಗ ಅಲ್ಲಿನ ಜನರ ಬದುಕು, ಸ್ವಾತಂತ್ರ್ಯ, ಆಸೆಗಳೆಲ್ಲವು ಛಿದ್ರವಾಗಿತ್ತು. ಇದನ್ನು ಕಣ್ಣೆದುರೇ ನೋಡಿದ ಹಾಗೂ ಅನುಭವಿಸಿದ ಲು ಷುನ್ ದಿಗ್ಭ್ರಮೆಗೊಂಡಿದ್ದ. ಬಳಿಕ ತುಳಿತದ ವಿವಿಧ ಸ್ವರೂಪಗಳನ್ನು ಅರ್ಥ ಮಾಡಿಕೊಂಡು, ಅದರ ವಿರೋಧಾಭಾಸಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅವನತಿಯ ಕಾರಣಗಳನ್ನು ವಿವೇಚಿಸಿ ತನ್ನ ಮೊನಚಾದ ಬರವಣಿಗೆಯಿಂದ ವ್ಯಂಗ್ಯಮಾಡುತ್ತಾ ಊಳಿಗಮಾನ್ಯ ಪ್ರಭುಗಳನ್ನು ಬೆಚ್ಚಿಬೀಳಿಸಿದ. ಲು ಷುನ್ ಬಳಸುತ್ತಿದ್ದ ಹಾಸ್ಯ, ವ್ಯಂಗ್ಯ ಗೇಲಿ, ಎಲ್ಲವೂ ಕಥನ ಶೈಲಿಯ ಭಾಗವಾಗಿ ಮುಂದೆ ಚೀನೀ ಸಾಹಿತ್ಯಲೋಕದಲ್ಲೂ ಪರಿಣಾಮಕಾರಿಯಾಗಿ ಪ್ರತಿಬಿಂಬಿಸತೊಡಗಿತು.
Janashakthi Media ದ Facebook ಮತ್ತು Youtube ಗಳಲ್ಲೂ ಕಾರ್ಯಕ್ರಮದ ಲೈವ್ ಪ್ರಸಾರವಿದ್ದು. ಅಲ್ಲೂ ಕಾರ್ಯಕ್ರಮ ವೀಕ್ಷಿಸಬಹುದು. ಕಮೆಂಟ್ಸ್ ಮೂಲಕ ಪ್ರಶ್ನೆ ಕೇಳಬಹುದು, ಅಭಿಪ್ರಾಯ ತಿಳಿಸಬಹುದು