ಬೆಂಗಳೂರು: ನಗರದಲ್ಲಿ ಭಾರಿ ಮಳೆಯಿಂದ ಎಲ್ಲೆಡೆ ತತ್ತರಗೊಂಡಿದೆ. ಬಹುತೇಕ ಬಡಾವಣೆಗಳು, ತಗ್ಗು ಪ್ರದೇಶ ಸಂಪೂರ್ಣ ಜಲಾವೃತಗೊಂಡಿದ್ದು, ಕಳೆದ ಮೂರು ದಿನಗಳಿಂದ ಜನಜೀವನ ಸಂಪೂರ್ನ ಅಸ್ತವ್ಯಸ್ಥಗೊಂಡಿದೆ.
ಬೆಂಗಳೂರಿನ ಸಾಯಿ ಲೇಔಟ್ ನಲ್ಲಿ ಮಳೆಯ ಅಬ್ಬರಕ್ಕೆ ಪ್ರವಾಹ ಪರಿಸ್ಥಿತಿಯುಂಟಾಗಿದೆ. ಅಲ್ಲಿನ ಅಪಾರ್ಟ್ ಮೆಂಟ್, ಮನೆಗಳಿಗೆ ನೀರು ನುಗ್ಗಿದ್ದು, ಸಂಪೂರ್ಣ ಜಲಾವೃತಗೊಂಡಿದೆ. ಬೆಂಗಳೂರು
ರಾಜಕಾಲುವೆಯ ನೀರು ಸಾಯಿ ಲೇಔಟ್ ಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಈಗಾಗಲೇ ಅಲ್ಲಿನ ಪಾರ್ಟ್ ಮೆಂಟ್ ನ ಮೊದಲ ಹಾಗೂ ಎರಡನೇ ಮಹಡಿಯಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ್ ನಿಯಮ ಉಲ್ಲಂಘಿಸಿದ ತುಂಗಭದ್ರಾ ಅಣೆಕಟ್ಟಿನ ಕಾರ್ಯನಿರ್ವಾಹಕ ಇಂಜಿನಿಯರ್
ಉಳಿದವರ ಸ್ಥಿತಿ ಗಂಭೀರವಾಗಿದೆ. ಮನೆಯಿಂದ ಹೊರಬರಲೂ ಸಾಧ್ಯವಾಗದ ಮಟ್ಟಿಗೆ ಅಪಾರ್ಟ್ ಮೆಂತ್ ಬೇಸ್ ಮೆಂಟ್ ನಲ್ಲಿ ಎದೆಯಮಟ್ಟಕ್ಕೆ ನೀರು ನಿಂತಿದೆ.
ಒಂದೆಡೆ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಜಲಾವೃತಗೊಂಡಿರುವ ರಾಜಕಾಲುವೆ ನೀರಿನಿಂದಾಗಿ ನಿವಾಸಿಗಳು ಅನಾರೋಗ್ಯಕ್ಕೀಡಾಗಿದ್ದಾರೆ.
ಊಟ-ಆಹಾರವಿಲ್ಲದೇ ಪರದಾಟ ನಡೆಸಿದ್ದಾರೆ. ಇಂದು ಬೆಳಿಗ್ಗೆ ಅಪಾರ್ಟ್ ಮೆಂಟ್ ನ ಮೇಲ್ಭಾಗದಲ್ಲಿ ವಾಸವಾಗಿರುವ ನಿವಾಸಿಗಳಿಗೆ ಟ್ರ್ಯಾಕ್ಟರ್, ಜೆಸಿಬಿ ಮೂಲಕ ಆಹಾರ ಪೂರೈಕೆ ಮಾಡಲಾಗಿದೆ.
ಇದನ್ನೂ ನೋಡಿ: ಬಿಜೆಪಿ ಮುಸ್ಲಿಮರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ – ಕೆ.ಎನ್ ಉಮೇಶ್ Janashakthi Media