ಪ್ರೀತಿಪದಗಳ ಸಹಯಾನಿ ಡಾ. ವಿಠ್ಠಲ ಭಂಡಾರಿ ನೆನಪಿನ ಕಾರ್ಯಕ್ರಮ

ಪ್ರೀತಿಪದಗಳ ಸಹಯಾನಿ ಡಾ. ವಿಠ್ಠಲ ಭಂಡಾರಿಯವರ ನಾಲ್ಕನೇ ವರ್ಷದ ನೆನಪಿನಲ್ಲಿ ವಿಶೇಷ ಉಪನ್ಯಾಸ, ಸಂವಾದ ಹಾಗೂ ನೃತ್ಯ, ಯಕ್ಷ ಹೆಜ್ಜೆಗಳು ಮುಂತಾದ ಕಾರ್ಯಕ್ರಮಗಳು 4 ಮೇ 2025 ಬೆಳಿಗ್ಗೆ 10.30 ಗಂಟೆಯಿಂದ ಸಹಯಾನದ ಅಂಗಳ, ಕೆರೆಕೋಣ, ಹೊನ್ನಾವರ ದಲ್ಲಿ ನಡೆಯಲಿದೆ. ಪ್ರೀತಿಪದ

ಕಾರ್ಯಕ್ರಮದ ಉದ್ಘಾಟನೆಗೆ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಸಂಸ್ಕೃತಿ ಚಿಂತಕ ಮತ್ತು ಹಿರಿಯ ಸಾಹಿತಿಗಳಾದ ಎಸ್.ಜಿ. ಸಿದ್ಧರಾಮಯ್ಯನವರು ನಾಡಿನ ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಪ್ರಾಂಶುಪಾಲರಾಗಿ ಕೆಲಸ ನಿರ್ವಹಿಸುತ್ತಲೇ ದುಃಸ್ಥಿತಿಯಲ್ಲಿದ್ದ ಕಾಲೇಜುಗಳಿಗೆ ವಿವಿಧ ಸಂಸ್ಥೆಗಳಿಗೆ ಶೈಕ್ಷಣಿಕ ಪುನಶ್ಚೇತನ ಕಲ್ಪಿಸಿದವರು. ವಿದ್ಯಾರ್ಥಿಗಳಲ್ಲಿ ವಾಚನಾಭಿವೃದ್ಧಿಗಾಗಿ ಕಮ್ಮಟಗಳನ್ನು ನಡೆಸಿ ಯುವಜನರನ್ನು ಮುನ್ನೆಲೆಗೆ ತರುವಲ್ಲಿ ಶ್ರಮಿಸಿದವರು. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಪ್ರೀತಿಪದ

ಇದನ್ನು ಓದಿ:ಮೇ 3 ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ-ಮುತ್ತ ವಾಹನ ಸಂಚಾರ ನಿರ್ಬಂಧ

ಚಿಕ್ಕಂದಿನಲ್ಲೇ ಸಾಹಿತ್ಯದಲ್ಲಿ ಆಸಕ್ತರಾಗಿದ್ದ ಇವರು ಕವಿ, ವಿಮರ್ಶಕರು, ನಾಟಕ ರಚನಾಕಾರರು, ವೈಚಾರಿಕ ಪ್ರಜ್ಞೆ ಹೊಂದಿದ ಪ್ರಸಿದ್ಧ ಚಿಂತಕರಾಗಿ ನಮ್ಮೊಡನೆ ಇದ್ದಾರೆ. ಹಲವು ಕೃತಿಗಳನ್ನು ಸಂಪಾದಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಅನೇಕ ಪ್ರಶಸ್ತಿಗಳು ಲಭಿಸಿವೆ. ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಡಾ. ಆರ್.ವಿ. ಭಂಡಾರಿಯವರ ಸ್ನೇಹಿತರೂ ಡಾ. ವಿಠ್ಠಲ ಭಂಡಾರಿಯವರ ಕೆಲಸ ಕಾರ್ಯಗಳೊಡನೆ ಸಂವಹನ ಸಂಬಂಧ ಇಟ್ಟುಕೊಂಡವರೂ ಆಗಿದ್ದಾರೆ. ಪ್ರೀತಿಪದ

ಲೇಖಕಿ, ಕವಿವಿ ಧಾರವಾಡದ ಸಹಾಯಕ ಪ್ರಾಧ್ಯಾಪಕರಾದ ಡಾ. ಅನಸೂಯಾ ಕಾಂಬಳೆ, ಇವರು ‘ಜನಜೀವನ: ಮತಧರ್ಮ ನಿರಪೇಕ್ಷತೆ’ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗದವರಾದ ಡಾ. ಅನಸೂಯಾ ಕಾಂಬ್ಳೆ ಇವರು ದಲಿತ ಮಹಿಳಾ ಸಂವೇದನೆಯ ಕನ್ನಡದ ಮುಖ್ಯ ಬರಹಗಾರ್ತಿಯರಲ್ಲಿ ಒಬ್ಬರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದ ಮೇಲೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ’ಬರಗೂರರ ಕಾದಂಬರಿಗಳು : ಒಂದು ಅಧ್ಯಯ’ ಎಂಬ ಪ್ರಬಂಧ ಸಲ್ಲಿಸಿ ಎಂ.ಫಿಲ್ ಪದವಿ ಮತ್ತು ’ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅಂಬೇಡ್ಕರ್ ಪ್ರಭಾವ’ ಎಂಬ ಕಾವ್ಯವನ್ನು ಅನುಲಕ್ಷಿಸಿ ಸಲ್ಲಿಸಿದ ಪ್ರಬಂಧಕ್ಕೆ ಪಿಎಚ್. ಡಿ. ಪದವಿ ಪಡೆದಿದ್ದಾರೆ, ಕವನ ಸಂಕಲನಗಳನ್ನು, ವಿಚಾರ ಸಾಹಿತ್ಯ ಮತ್ತು ಸಂಪಾದನೆ, ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅಂಬೇಡ್ಕರ ಪ್ರಭಾವ ಕುರಿತು ಹಲವಾರು ಲೇಖನಗಳನ್ನು, ಭಾಷಣಗಳನ್ನು ನೀಡಿದ್ದಾರೆ. ಪೋಲಿಸ್ ವರಿಷ್ಠಾಧಿಕಾರಿಗಳು, ಉಕ ಎಂ. ನಾರಾಯಣ, ಐಪಿಎಸ್, ಇವರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಾಹಿತಿಗಳು, ನಿವೃತ್ತ ಅಧೀಕ್ಷಕರು, ಜಿಪಂ, ಉಕ.ಕೃಷ್ಣ ನಾಯಕ, ಹಿಚ್ಕಡ, ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಉಪಸ್ಥಿತಿ: ಶಾಂತಾರಾಮ ನಾಯಕ, ಹಿಚ್ಕಡ, ಗೌರವಾಧ್ಯಕ್ಷರು, ಸಹಯಾನ. ಕಾವ್ಯ ಓದಿನಲ್ಲಿ ಕವಿಗಳಾದ ಸಂಧ್ಯಾ ನಾಯ್ಕ, ಸುನೈಫ್ ವಿಟ್ಲ, ವಿಲ್ಸನ್ ಕಟೀಲ ಪಾಲ್ಗೊಳ್ಳಲಿದ್ದಾರೆ. ಆರಂಭದಲ್ಲಿ ಅಗಲಿದವರಿಗೆ ನಮನ ಹಾಗೂ ಮಂಡ್ಯದ ಸ್ವಾಮಿ ಗಾಮನಹಳ್ಳಿಯವರಿಂದ ಭಾವೈಕ್ಯ ಹಾಡುಗಳ ಕಾರ್ಯಕ್ರಮಗಳಿವೆ.

ಅನ್ವೇಷಣೆ ಪತ್ರಿಕೆಯ ಸಂಪಾದಕರು ಹಿರಿಯ ಬಂಡಾಯ ಸಾಹಿತಿಗಳೂ ಆದ ಆರ್.ಜಿ. ಹಳ್ಳಿ ನಾಗರಾಜ್ ಅಧ್ಯಕ್ಷತೆಯಲ್ಲಿ ಸಮಕಾಲೀನ ಸಂವಾದ ನಡೆಯಲಿದ್ದು ಇದರಲ್ಲಿ ಉಚ್ಚನ್ಯಾಯಾಲಯದ ನ್ಯಾಯವಾದಿಗಳಾದ ಪ್ರಕಾಶ ಉಡಿಕೇರಿ, ಸಮಾಜಮುಖಿ ಚಿಂತಕಿ ಸುರಭಿ ರೇಣುಕಾಂಬಿಕೆ ಹಾಗೂ ಕಸಾಪ ಕಾರವಾರ ತಾಲೂಕು ಅಧ್ಯಕ್ಷರಾದ ರಾಮಾ ನಾಯ್ಕ ಪಾಲ್ಗೊಳ್ಳಲಿದ್ದು ಚಿನ್ಮಯ ಹೆಗಡೆ, ಹೆಬಸೂರ ರಂಜಾನ್ ಕಾವ್ಯ ಓದು ನಡೆಸಲಿದ್ದಾರೆ.

ಇದನ್ನು ಓದಿ:ಯುದ್ಧ ಬೇಡ, ಅದರಿಂದ ನಮ್ಮ ಸೈನಿಕರೇ ಸಾಯೋದು: ನಟಿ ರಮ್ಯಾ ಪ್ರೀತಿಪದ

ಮಕ್ಕಳ ಸಹಯಾನದಲ್ಲಿ ಯಕ್ಷಕಿರೀಟದ ವಿದ್ಯಾರ್ಥಿಗಳಾದ ಅದಿತಿ, ಅಭಯ್ ಮತ್ತು ರೋಹನ್ ನೃತ್ಯ ಹಾಗೂ ಯಕ್ಷಗಾನದ ಹೆಜ್ಜೆಗಳನ್ನು ಹಾಕಲಿದ್ದಾರೆ. ದಿನವಿಡೀ ನಡೆಯುವ ಈ ಎಲ್ಲಾ ಕಾರ್ಯಕ್ರಮಗಳಿಗೆ ಪ್ರೀತಿಪದ (ಡಾ. ವಿಠ್ಠಲ ಭಂಡಾರಿ ನೆನಪಿನ ಸಮಾಜ ವಿಜ್ಞಾನ ಅಧ್ಯಯನ ಕೇಂದ್ರ) ಚಿಂತನ ಉತ್ತರ ಕನ್ನಡ, ಸಮುದಾಯ ಕರ್ನಾಟಕ, ಚಿಂತನ ರಂಗ ಅಧ್ಯಯನ ಕೇಂದ್ರ, ಯಕ್ಷಕಿರೀಟ, ಚಿಗುರುಗಳು ಸಹಕಾರ ನೀಡಿವೆ ಎಂದು ಸಂಘಟಕರ ಪರವಾಗಿ, ಇಂದಿರಾ ಭಂಡಾರಿ, ಮಾಧವಿ ಭಂಡಾರಿ, ಯಮುನಾ ಗಾಂವ್ಕರ್ ಮನವಿ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *