ರಾಜ್ಯದ ವಿವಿಧೆಡೆ 10 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ

ಬೆಂಗಳೂರು: ಆದಾಯ ಮೀರಿ ಆಸ್ತಿ ಸಂಪಾದನೆ ಮಾಡಿದ ಆರೋಪ ಸಂಬಂಧ ರಾಜ್ಯದ ವಿವಿಧೆಡೆ 10 ಅಧಿಕಾರಿಗಳಿಗೆ ಸಂಬಂಧಿಸಿದ ಮನೆ, ಸೇರಿ ಇತರೆ ಸ್ಥಳಗಳಲ್ಲಿ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಬರೋಬ್ಬರಿ 23.17 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ. ವಿವಿಧೆಡೆ

ಲೋಕಾಯುಕ್ತ ಡಿಜಿ ಪ್ರಶಾಂತ್‌ಕುಮಾರ್‌ ಮಾರ್ಗದರ್ಶನದಲ್ಲಿ200 ಪೊಲೀಸರನ್ನೊಳಗೊಂಡ 41 ಪ್ರತ್ಯೇಕ ತಂಡಗಳು ಬುಧವಾರ ಬೆಳ್ಳಂಬೆಳಗ್ಗೆ ಮಂಡ್ಯ, ತುಮಕೂರು, ಹಾಸನ ಸೇರಿ 10 ಅಧಿಕಾರಿಗಳಿಗೆ ಸಂಬಂಧಿಸಿದ 41 ಸ್ಥಳಗಳಲ್ಲಿದಾಳಿ ನಡೆಸಿದ್ದರು. ದಾಳಿ ವೇಳೆ ಅಧಿಕಾರಿಗಳು ಸಂಪಾದಿಸಿರುವ ಕೋಟ್ಯಂತರ ರೂ. ಮೌಲ್ಯದ ಆಸ್ತಿ ದಾಖಲೆಗಳು ಸಿಕ್ಕಿವೆ. ಜತೆಗೆ, ಲಕ್ಷಾಂತರ ರೂ.ನಗದು, ಕೆಜಿಗಟ್ಟಲೆ ಬಂಗಾರ, ವಾಹನಗಳು, ಐಷಾರಾಮಿ ಬಂಗಲೆಗಳನ್ನು ಕಂಡು ಲೋಕಾಯುಕ್ತ ಅಧಿಕಾರಿಗಳೇ ದಂಗಾಗಿದ್ದಾರೆ. ವಿವಿಧೆಡೆ

ರಾತ್ರಿಯವರೆಗೂ ದಾಳಿ ಮುಂದುವರಿಸಿದ್ದ ಲೋಕಾಯುಕ್ತ ಅಧಿಕಾರಿಗಳು ಅಂತಿಮವಾಗಿ ಆರೋಪಿತ ಅಧಿಕಾರಿಗಳಿಗೆ ಸಂಬಂಧಿಸಿದ ಹಣ, ಆಭರಣ ಸೇರಿ ಇನ್ನಿತರೆ ಚರಾಸ್ತಿ ಜಪ್ತಿ ಮಾಡಿದ್ದಾರೆ. ಅಧಿಕಾರಿಗಳ ಚರಾಸ್ತಿ-ಸ್ಥಿರಾಸ್ತಿ ಸೇರಿ 23.17 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. ಲೋಕಾಯುಕ್ತ

ಇದನ್ನು ಓದಿ : 16 ನೇ ಹಣಕಾಸು ಆಯೋಗಕ್ಕೆ 4 ಸದಸ್ಯರನ್ನು ನೇಮಿಸಿದ ಕೇಂದ್ರ ಸರ್ಕಾರ

1.ರೇಣುಕಮ್ಮ, ವಿಜಯನಗರ ವಲಯ ಅರಣ್ಯಾಧಿಕಾರಿ

​ಆದಾಯ ಮೀರಿದ ಆಸ್ತಿ ಮೌಲ್ಯ: ಸುಮಾರು 1.9 ಕೋಟಿ ರೂ. ವಿವಿಧೆಡೆ

​-150 ಗ್ರಾಂ ಚಿನ್ನ, ಸ್ಕಾರ್ಪಿಯೊ ಜೀಪ್‌, 1 ಕಾರು, 2 ದ್ವಿಚಕ್ರ ವಾಹನ, ಅಪಾರ ನಗದು, ಫಾಮ್‌ರ್‍ ಹೌಸ್‌, 45 ಲಕ್ಷ ರೂ. ಮೌಲ್ಯದ ನಿವೇಶನ, 2 ಮನೆ ಮತ್ತು 6 ಎಕರೆ ಜಮೀನು
2. ಎಂ.ಎನ್‌.ಯಧಿಜ್ಞೇಂದ್ರ, ಮೈಸೂರಿನ ಮುಡಾ, ಸಹಾಯಕ ನಿದೇಶಕ

​ಆಸ್ತಿ ಮೌಲ್ಯ: ಸುಮಾರು 1.28 ಕೋಟಿ ರೂ.  ವಿವಿಧೆಡೆ

​-1 ಪ್ಲಾಟ್‌, 4 ನಿವೇಶನ, 1 ಮನೆ, 2 ಎಕರೆ ಕೃಷಿ ಜಮೀನು, 41 ಲಕ್ಷ ರೂ. ಗೃಹೋಪಯೋಗಿ ವಸ್ತು, 761 ಗ್ರಾಂ ಚಿನ್ನಾಭರಣ, 86 ಸಾವಿರ ರೂ. ನಗದು, 3.25 ಕೆಜಿ ಬೆಳ್ಳಿ, ಟೆಕ್ಸಾನ್‌ ಕಾರು.

3.ಎಚ್‌.ಆರ್‌.ಹರ್ಷ , ಮಂಡ್ಯದ ಲೋಕೋಪಯೋಗಿ ಇಲಾಖೆ ಇಇ

​-ಆಸ್ತಿ ಮೌಲ್ಯ: ಸುಮಾರು 1.68 ಕೋಟಿ ರೂ.

4.ಪಿ.ರವಿಕುಧಿಮಾರ್‌, ಎಇಇ, ಲೋಕೋಪಯೋಗಿ ಇಲಾಖೆ, ಹುಣಸೂರು

​ಆಸ್ತಿ ಮೌಲ್ಯ: ಸುಮಾರು 1.7 ಕೋಟಿ ರೂ.

​-1 ಸೈಟ್‌, 1 ಮನೆ, ವಾಣಿಜ್ಯ ಕಟ್ಟಡ , 4 ಎಕರೆ ಕೃಷಿ ಜಮೀನು, 5.9 ಎಕರೆ ಕೃಷಿ ಜಮೀನು ಅಡಮಾನ ಪತ್ರ, 13 ಲಕ್ಷ ರೂ. ಚಿನ್ನಾಭರಣ, 1 ಸ್ವಿಫ್ಟ್‌ ಕಾರು, 11 ಲಕ್ಷ ರೂ. ಗೃಹೋಪಯೋಗಿ ವಸ್ತು.

5.ಜಗನ್ನಾಥ್‌, ಹಾಸನದ ಆಹಾರ ನಿರೀಕ್ಷಕ

​ಆಸ್ತಿ ಮೌಲ್ಯ: ಸುಮಾರು 2 ಕೋಟಿ ರೂ.

​-ಅಕ್ರಮವಾಗಿ ಗಳಿಸಿರುವ ಹಣವನ್ನು ಸಹೋದರನ ಮೂಲಕ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ತೊಡಗಿಸಿದ್ದಾರೆ ಎನ್ನುವ ಶಂಕೆ.

6.ಪ್ರೊ.ಬಿ.ರವಿ, ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ವ್ಯಾಪ್ತಿಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ

​ಆಸ್ತಿ ಮೌಲ್ಯ: 1.57 ಕೋಟಿ ರೂ.

​-1.57 ಕೋಟಿ ರೂ. ಮೌಲ್ಯದ 7 ನಿವೇಶನ, 2 ಮನೆ, 59,800 ರೂ. ನಗದು, 9,12,600 ರೂ. ಮೌಲ್ಯದ ಚಿನ್ನಾಭರಣ.

7.ಶಾಂತಕುಮಾರ್‌, ಮೆಸ್ಕಾಂ ಎಂಜಿನಿಯರ್‌

​ಆಸ್ತಿ ಮೌಲ್ಯ: ಸುಮರು 1.3 ಕೋಟಿ ರೂ.

​-ಮಂಗಳೂರಿನಲ್ಲಿ4 ಸೈಟು, 2 ಮನೆ, 1 ಕೋಟಿ ರೂ. ಬ್ಯಾಂಕ್‌ ಬ್ಯಾಲೆನ್ಸ್‌, 35 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ವಾಹನಗಳು, ಅಕ್ರಮ ಆಸ್ತಿ ಪತ್ರ

8.ಆರ್‌.ಆರ್‌. ಭಾಸ್ಕರ್‌, ಹಗರಿಬೊಮ್ಮನಹಳ್ಳಿ ಜೆಸ್ಕಾಂ ಎಇಇ

​ಆಸ್ತಿ ಮೌಲ್ಯ: ಸುಮಾರು 1.4 ಕೋಟಿ ರೂ.

​-ಹೊಸಪೇಟೆ ನಗರದಲ್ಲಿ3 ಮನೆ, ಕೃಷಿ ಜಮೀನು ಮತ್ತು ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆ

9.ಕೆ.ಆರ್‌.ನೇತ್ರಾವತಿ, ತರೀಕೆರೆ ವಾಣಿಜ್ಯ ತೆರಿಗೆ ಅಧಿಕಾರಿ

​ಆಸ್ತಿ ಮೌಲ್ಯ: 1.2 ಕೋಟಿ ರೂ.

​-ವಾಣಿಜ್ಯ ಸಂಕೀರ್ಣ, ಚಿಕ್ಕಮಗಳೂರಿನಲ್ಲಿನಿವಾಸ, ನಿವೇಶನ, ಕೃಷಿ ಭೂಮಿ, ಚಿನ್ನಾಭರಣ ಪತ್ತೆ

10.ಎ. ಹನುಮಂತರಾಯಪ್ಪ, ಜೂನಿಯರ್‌ ಇಂಜಿನಿಯರ್‌, ಕೆಆರ್‌ಐಡಿಎಲ್‌ ಉಪ ವಿಭಾಗ, ಮಧುಗಿರಿ

​ಆಸ್ತಿ ಮೌಲ್ಯ: 2.3 ಕೋಟಿ ರೂ.

ಇದನ್ನು  ನೋಡಿ : ಸೌಹಾರ್ದ ಮಾನವ ಸರಪಳಿ : ಮಾನವೀಯತೆ ಉಳಿಸಲು ಕೋಮುವಾದವನ್ನು ಸೋಲಿಸಬೇಕಿದೆ Janashakthi Media

Donate Janashakthi Media

Leave a Reply

Your email address will not be published. Required fields are marked *