ನವದೆಹಲಿ: ನೂತನ ಸಂಸತ್ತು ಕಟ್ಟಡದ ಕೆಳಮನೆಯ ಲೋಕಸಭೆಯಲ್ಲಿ 454 ಮತಗಳ ಬಹುಮತದಿಂದ ಮಹಿಳಾ ಮೀಸಲಾತಿ ಮಸೂದೆಗೆ ಗುರುವಾರ ಅಂಗೀಕಾರ ಸಿಕ್ಕಿದೆ. ಮಹಿಳಾ ಮೀಸಲಾತಿ
ಸಂಸತ್ತಿನಲ್ಲಿ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಮಸೂದೆಯ ವಿರುದ್ಧ ಕೇವಲ ಇಬ್ಬರು ಸಂಸದರು ಮತ ಚಲಾಯಿಸಿದ್ದಾರೆ.
ಈ ಮಸೂದೆಗೆ “ನಾರಿ ಶಕ್ತಿ ವಂದನಾ ಅಧಿನಿಯಮ” ಎಂದು ಹೆಸರಿಡಲಾಗಿದ್ದು ಈ ಮಸೂದೆಯು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನೀತಿ ನಿರೂಪಣೆಯಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.
ಸದನದಲ್ಲಿ ಹಾಜರಿದ್ದ ಮೂರನೇ ಎರಡರಷ್ಟು ಬಹುಮತದ ಸದಸ್ಯರೊಂದಿಗೆ ಪ್ರಸ್ತಾವನೆಯನ್ನು ಅಂಗೀಕರಿಸಲಾಗಿದೆ ಎಂದು ಮತದಾನದ ನಂತರ ಸ್ಪೀಕರ್ ಓಂ ಬಿರ್ಲಾ ಘೋಷಿಸಿದರು. ಈಗ ಮಸೂದೆ ರಾಜ್ಯಸಭೆಗೆ ಹೋಗಲಿದೆ. ಅಲ್ಲದೆ, ಕಾನೂನಾಗಲು ಕನಿಷ್ಠ ಅರ್ಧದಷ್ಟು ರಾಜ್ಯ ಅಸೆಂಬ್ಲಿಗಳು ಅದನ್ನು ಅಂಗೀಕರಿಸಬೇಕು.
ಪಂಚಾಯತ್‌ರಾಜ್ ಸಂಸ್ಥೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಗಣನೀಯವಾಗಿದೆ. ಆದರೆ ರಾಜ್ಯ ಶಾಸನಸಭೆಗಳಲ್ಲಿ ಹಾಗೂ ಸಂಸತ್ತಿನಲ್ಲಿ ಅವರ ಪ್ರಾತಿನಿಧ್ಯ ಬಹಳ ಕಡಿಮೆ ಇದೆ.ಇದನ್ನು ಹೆಚ್ಚಿಸುವುದು ಮುಖ್ಯ ಉದ್ದೇಶ.
ವಿಡಿಯೋ ನೋಡಿ:ಬಹುಮನಿ ಸುಲ್ತಾನರ ಕಾಲದ ಸುರಂಗ ಬಾವಿ (ವಾಟರ್ ಕರೇಜ್) ಬೀದರ್ನಲ್ಲಿದೆ ಅಚ್ಚರಿಯ ಇತಿಹಾಸ Janashakthi Media