ಲೋಕಸಭೆ | 5 ವರ್ಷಗಳಲ್ಲಿ ಒಂದೇ ಒಂದು ಶಬ್ಧ ಮಾತಾಡದ ರಾಜ್ಯದ ನಾಲ್ವರು ಬಿಜೆಪಿ ಸಂಸದರು

ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಲೋಕಸಭೆಯು 1,354 ಗಂಟೆಗಳ ಕಾಲ ನಡೆದಿದ್ದು, ಅದರಲ್ಲಿ ದೇಶದ ಒಂಬತ್ತು ಸಂಸದರು ಈ ಐದು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಮಾತುಗಳನ್ನು ಆಡಲಿಲ್ಲ ಅಥವಾ ಯಾವುದೇ ಚರ್ಚೆಯಲ್ಲಿ ಭಾಗವಹಿಸಿಲ್ಲ ಎಂದು ವರದಿಗಳು ಹೇಳಿವೆ. ವಿಶೇಷವೇನೆಂದರೆ 9 ಸಂಸದರಲ್ಲಿ ನಾಲ್ವರು ಕರ್ನಾಟಕದವರಾಗಿದ್ದಾರೆ.

ರಾಜ್ಯದ ಸಂಸದರುಗಳಾದ ಬಿಜೆಪಿಯ ಬಿ.ಎನ್. ಬಚ್ಚೇಗೌಡ, ಅನಂತ್ ಕುಮಾರ್ ಹೆಗಡೆ, ವಿ. ಶ್ರೀನಿವಾಸ್ ಪ್ರಸಾದ್ ಮತ್ತು ರಮೇಶ್ ಜಿಗಜಿಣಗಿ ಈ 9 ಸಂಸದರ ಪಟ್ಟಿಯಲ್ಲಿ ಇದ್ದಾರೆ. ಉಳಿದಂತೆ ಶತ್ರುಘ್ನ ಸಿನ್ಹಾ, ಸನ್ನಿ ಡಿಯೋಲ್, ಅತುಲ್ ರೈ, ಪ್ರದಾನ್ ಬರುವಾ ಮತ್ತು ದಿಬ್ಯೇಂದು ಅಧಿಕಾರಿ ಎಂದು ಲೋಕಸಭೆಯ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ‘ಸೇನೆಯ ಚಿತ್ರಹಿಂಸೆ ವರದಿ 24 ಗಂಟೆಯೊಳಗೆ ತೆಗೆದುಹಾಕಿ’ | ದಿ ಕಾರವಾನ್‌ಗೆ ಕೇಂದ್ರ ಸರ್ಕಾರ ಬೆದರಿಕೆ

ಒಟ್ಟು 9 ಮಂದಿಯಲ್ಲಿ ಮೂವರು ಒಂದೇ ಒಂದು ಪ್ರಶ್ನೆಯನ್ನಾಗಲಿ ಅಥವಾ ವಾದಗಳನ್ನಾಗಲಿ ಕೂಡಾ ಸಲ್ಲಿಸಲಿಲ್ಲ, ಉಳಿದ ಆರು ಸಂಸದರು ಸಂಸತ್ತಿನ ಕೆಲವು ಉಪಕರಣಗಳಲ್ಲಿ ಒಂದನ್ನಾದರೂ ಬಳಸಿದ್ದಾರೆ.

ಸಂಸದ ಜಿಗಜಿಣಗಿ ಅವರು ಸದನದಲ್ಲಿ ಯಾವ ಮಾತುಗಳನ್ನು ಆಡಿಲ್ಲ ಜೊತೆಗೆ ಪ್ರಶ್ನೆಗಳನ್ನೂ ಕೇಳಿಲ್ಲ, ಇಷ್ಟೆ ಅಲ್ಲದೆ, ಒಂದೇ ಒಂದು ವಾದವನ್ನೂ ಮಂಡಿಸಿಲ್ಲ ಎಂದು ಡೆಕ್ಕನ್ ಹೆರಾಲ್ಡ್ ವರದಿ ಹೇಳಿದೆ. ಅದಾಗ್ಯೂ, ರಾಜ್ಯದ ಇತರ ಮೂವರು ಸಂಸದರು ಚರ್ಚೆಯಲ್ಲಿ ನೇರವಾಗಿ ಭಾಗವಹಿಸದಿದ್ದರೂ ಕೆಲವು ರೂಪದಲ್ಲಿ ಭಾಗವಹಿಸಿದ್ದರು ಎಂದು ಮೂಲಗಳು ದಾಖಲೆಗಳನ್ನು ಉಲ್ಲೇಖಿಸಿ ಡಿಎಚ್ ವರದಿ ಹೇಳಿದೆ.

ಸಂಸದ ಜಿಗಜಿಣಗಿಯಂತೆ, ಚಲನಚಿತ್ರಗಳಲ್ಲಿ ಡೈಲಾಗ್‌ಗಳಿಗೆ ಹೆಸರುವಾಸಿಯಾದ ಸಿನ್ಹಾ ಮತ್ತು ರೈ ಕೂಡ ಯಾವುದೇ ರೂಪದಲ್ಲಿ ಭಾಗವಹಿಸಲಿಲ್ಲ ಎಂದು ಮೂಲಗಳು ತಿಳಿಸಿವೆ. 2022ರ ಏಪ್ರಿಲ್‌ನಲ್ಲಿ ನಡೆದ ಉಪಚುನಾವಣೆ ಮೂಲಕ ಸಿನ್ಹಾ ಲೋಕಸಭೆಗೆ ಪ್ರವೇಶಿಸಿದಾಗ ರೈ ತಮ್ಮ ಅಧಿಕಾರಾವಧಿಯುದ್ದಕ್ಕೂ ಜೈಲಿನಲ್ಲಿದ್ದರು.

ಇದನ್ನೂ ಓದಿ: ರೈತ ಪ್ರತಿಭಟನೆಗೆ ಬೆದರಿದ ದೆಹಲಿ ಪ್ರಭುತ್ವ; ಒಂದು ತಿಂಗಳು 144 ಸೆಕ್ಷನ್ ಜಾರಿ | ಹರಿಯಾಣದಲ್ಲಿ ಇಂಟರ್‌ನೆಟ್ ಸ್ಥಗಿತ!

ಒಂಬತ್ತು ಸಂಸದರ ಪೈಕಿ ಆರು ಸಂಸದರು ಆಡಳಿತಾರೂಢ ಬಿಜೆಪಿಯವರಾಗಿದ್ದರೆ, ಸಿನ್ಹಾ ಮತ್ತು ದಿಬ್ಯೇಂದು ಅಧಿಕಾರಿ  ತೃಣಮೂಲ ಕಾಂಗ್ರೆಸ್‌ನವರಾಗಿದ್ದಾರೆ. ಅತುಲ್ ರೈ ಅವರು ಬಿಎಸ್‌ಪಿಯ ಸಂಸದರಾಗಿದ್ದಾರೆ. ಅದಾಗ್ಯೂ, ತೃಣಮೂಲ ಕಾಂಗ್ರೆಸ್‌ನ ಸಂಸದ ದಿಬ್ಯೇಂದು ಅಧಿಕಾರಿ ತಮ್ಮ ತಂದೆ, ಸಂಸದ ಸಿಸಿರ್ ಅಧಿಕಾರಿ ಮೂಲಕ ಬಿಜೆಪಿ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ದಿಬ್ಯೇಂದು ಅಧಿಕಾರಿ,   ಬಿ.ಎನ್. ಬಚ್ಚೇಗೌಡ, ಅನಂತ್ ಕುಮಾರ್ ಹೆಗಡೆ, ವಿ. ಶ್ರೀನಿವಾಸ್ ಪ್ರಸಾದ್, ಪ್ರದಾನ್ ಬರುವಾ ಮತ್ತು ಸನ್ನಿ ಡಿಯೋಲ್ ಸದನದಲ್ಲಿ ಮಾತನಾಡದೆ ಇದ್ದರೂ ಪ್ರಶ್ನೆಗಳನ್ನು ಕೇಳಿದ್ದು, ವಾದಗಳನ್ನು ಮಂಡಿಸಿದ್ದಾರೆ. ಅದರಲ್ಲೂ ಸನ್ನಿ ಡಿಯೋಲ್ ಅವರು ಮಾತನಾಡದಿದ್ದರೂ, ಚರ್ಚೆಗಳಲ್ಲಿ ಲಿಖಿತ ವಾದಗಳನ್ನು ಮಂಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲೋಕಸಭೆಯ ಅಂಕಿಅಂಶಗಳ ಪ್ರಕಾರ, 17 ನೇ ಲೋಕಸಭೆಯು 222 ಮಸೂದೆಗಳನ್ನು ಅಂಗೀಕರಿಸಿದ್ದು ಈ ವೇಳೆ ಸಚಿವರು 1,116 ಪ್ರಶ್ನೆಗಳಿಗೆ ಮೌಖಿಕವಾಗಿ ಉತ್ತರಿಸಿದ್ದಾರೆ. ಶೂನ್ಯ ವೇಳೆಯಲ್ಲಿ 5,568 ಸಮಸ್ಯೆಗಳ ಬಗ್ಗೆ ಕೇಳಲಾಗಿದೆ ಎಂದೂ ಮೂಲಗಳು ತಿಳಿಸಿವೆ.

ವಿಡಿಯೊ ನೋಡಿ: ಹಿಟ್ ಅಂಡ್ ರನ್ ತಿದ್ದುಪಡಿ : ಕೇಂದ್ರದ ವಿರುದ್ಧ ಸಿಡಿದೆದ್ದ ಚಾಲಕರು Janashakthi Media

Donate Janashakthi Media

Leave a Reply

Your email address will not be published. Required fields are marked *