ನವದೆಹಲಿ: ದೆಹಲಿಯಲ್ಲಿ ಇಂದು ರಾತ್ರಿಯಿಂದ ಮುಂದಿನ ಸೋಮವಾರ ಬೆಳಿಗ್ಗೆವರೆಗೆ ಲಾಕ್ಡೌನ್ ಘೋಷಣೆ ಮಾಡಲಾಗಿದೆ.
ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈಗಾಗಲೇ ರಾತ್ರಿ ಕರ್ಫ್ಯೂವನ್ನು ಜಾರಿಗೊಳಿಸಿದ್ದ ದೆಹಲಿ ರಾಜ್ಯದಲ್ಲಿ ಈಗ ಸಂಪೂರ್ಣವಾಗಿ ಒಂದು ವಾರ ಲಾಕ್ಡೌನ್ ಮಾಡಲಾಗುತ್ತಿದೆ.
ಇದನ್ನು ಓದಿ: ರವಿವಾರವೂ ಕಡಿಮೆಯಾಗಿಲ್ಲ ಕೋವಿಡ್ ಪ್ರಕರಣ
ಇಂದು ರಾತ್ರಿ 10 ಗಂಟೆಗೆ ಪ್ರಾರಂಭವಾಗುವ ಲಾಕ್ಡೌನ್ ಸೋಮವಾರ ಅಂದರೆ ಏಪ್ರಿಲ್ 26ರ ಬೆಳಿಗ್ಗೆ 5.00 ಗಂಟೆಯವರೆಗೆ ಜಾರಿಯಲ್ಲಿರುತ್ತದೆ ದೆಹಲಿ ಸರಕಾರ ಅಧಿಕೃತವಾಗಿ ಹೇಳಿಕೆ ನೀಡಿದೆ.
ಈ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿಡಿಯೋ ಮೂಲಕ ಮಾತನಾಡಿದ ಅವರು ʻʻದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ಅತ್ಯಂತ ಕಠೋರವಾಗಿ ವಿಸ್ತರಿಸುತ್ತಿದೆ. ಹಾಗಾಗಿ ಒಂದು ವಾರ ಲಾಕ್ಡೌನ್ ಜಾರಿ ಮಾಡಲಾಗಿದೆ. ಲಾಕ್ಡೌನ್ನಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಇದು ಅಲ್ಪಾವಧಿಯಲ್ಲಿರುತ್ತದೆ. ಇದು ಕೇವಲ ಸೋಂಕಿನ್ನು ಹರಡುವಿಕೆಯನ್ನು ನಿಧಾನಗೊಳಿಸಲು ಸಾಧ್ಯವಿದೆ. ಲಾಕ್ಡೌನ್ ವಿಸ್ತರಿಸುವುದಿಲ್ಲ. ಮುಂದಿನ ಆರು ದಿನಗಳಲ್ಲಿ ಕೇಂದ್ರದ ಸಹಕಾರದೊಂದಿಗೆ ನಾವು ನಗರದಲ್ಲಿ ಮತ್ತಷ್ಟು ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಶೀಘ್ರವಾಗಿ ಕ್ರಮಕೈಗೊಳ್ಳುತ್ತೇವೆʼ ಎಂದು ಹೇಳಿದ್ದಾರೆ.
Hon'ble CM Shri @ArvindKejriwal has announced a week-long lockdown in Delhi from 10 pm tonight (April 19) to 6 am next Monday (April 26) following a sharp surge in the number of Coronavirus cases in the city. pic.twitter.com/vocwKchAFj
— CMO Delhi (@CMODelhi) April 19, 2021
ದೆಹಲಿಯಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿದೆ. ಆಸ್ಪತ್ರೆಗಳಲ್ಲಿ 100ಕ್ಕಿಂತ ಕಡಿಮೆ ಐಸಿಯು ಹಾಸಿಗೆಗಳು ಲಭ್ಯವಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಸರಕಾರಿ ಕಚೇರಿಗಳು ಹಾಗೂ ಅಗತ್ಯ ಸೇವೆಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಖಾಸಗಿ ಕಚೇರಿಗಳು ಮನೆಯಿಂದಲೇ ಕಾರ್ಯನಿರ್ವಹಿಸುತ್ತವೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿ: ಕರೋನಾ ವಾರಿಯರ್ಸ್ಗೆ ಹೊಸ ವಿಮೆ
ವಾರಾಂತ್ಯದ ಕರ್ಫ್ಯೂ ವ್ಯಾಪ್ತಿಯಿಂದ ಹೊರಗುಳಿದ ವೃತ್ತಿಪರರು ಮತ್ತು ವ್ಯಕ್ತಿಗಳ ವರ್ಗಗಳು ಈ ಸಮಯದಲ್ಲಿ ವಿನಾಯಿತಿ ನೀಡುವ ಸಾಧ್ಯತೆಯಿದೆ.
ಹಿಂದಿನ ಆದೇಶದಲ್ಲಿ ದೆಹಲಿಯಲ್ಲಿ ಎಲ್ಲಾ ಸಾಮಾಜಿಕ, ಧಾರ್ಮಿಕ ಅಥವಾ ರಾಜಕೀಯ ಸಮಾವೇಶಗಳನ್ನು ನಿಷೇಧಿಸಲಾಗಿತ್ತು. ಅಲ್ಲದೆ ಸಭಾಂಗಣಗಳು, ರೆಸ್ಟೋರೆಂಟ್ ಗಳು, ಮಾಲ್ ಗಳು, ಜಿಮ್ ಗಳು ಹಾಗೂ ಸ್ಪಾಗಳನ್ನು ಮುಚ್ಚಲಾಗಿತ್ತು.
ಕೋವಿಡ್ -19 ಪ್ರಕರಣ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ನಡುವೆ ಇಂದು ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.