ಕೋವಿಡ್‌-19: ನಾಗ್ಪುರದಲ್ಲಿ ಮಾರ್ಚ್‌ 15ರಿಂದ ಲಾಕ್‌ಡೌನ್‌ ಜಾರಿ

ಮುಂಬೈ: ನಾಗ್ಪುರ ನಗರ ಮತ್ತು ಕೆಲವು ಪ್ರದೇಶಗಳಲ್ಲಿ ಮಾರ್ಚ್‌ 15ರಿಂದ ಒಂದು ವಾರ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಳ ಕಂಡುಬಂದಿದೆ. ನಾಗ್ಪುರ ಪೊಲೀಸ್ ಆಯುಕ್ತರ ವ್ಯಾಪ್ತಿಗೆ ಒಳಪಡುವ ಎಲ್ಲಾ ಪ್ರದೇಶಗಳಲ್ಲಿ ಮಾರ್ಚ್ 15 ರಿಂದ 21 ರವರೆಗೆ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಲಾಗಿದೆ.

ಹಣಕಾಸು ವರ್ಷದ ಅನಿವಾರ್ಯ ಕೆಲಸಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಹೆಚ್ಚಿನ ಅವಕಾಶವನ್ನು ನೀಡಲಾಗಿದೆ. ಅನಿವಾರ್ಯ ತುರ್ತು ಕೆಲಸಗಳಿಗಾಗಿ ಮಾತ್ರ ಸರಕಾರಿ ಕಛೇರಿಗಳು ಮತ್ತು ಕೈಗಾರಿಕೆಗಳಲ್ಲಿನ 25ರಷ್ಟು ಸಿಬ್ಬಂದಿಗಳಿಗೆ ಹಾಜರಾಗಲು ಅವಕಾಶ ನೀಡಲಾಗಿದೆ. ಉಳಿದಂತೆ ಎಲ್ಲಾ ಪ್ರದೇಶಗಳನ್ನು ಲಾಕ್‌ಡೌನ್‌ ಮಾಡಲಾಗುತ್ತಿದೆ.  ದಿನಬಳಕೆ ಅವಶ್ಯ ವಸ್ತುಗಳಿಗಾಗಿ ಮಾತ್ರ ವಿನಾಯಿತಿ ನೀಡಲಾಗಿದೆ.

ಈ ಬಗ್ಗೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಹೇಳಿಕೆಯನ್ನು ಬಗ್ಗೆ ಜಿಲ್ಲಾ ವರಿಷ್ಠಾಧಿಕಾರಿ ನಿತಿನ್‌ ರೌತ್‌ ಎಂದು ವಿವರಿಸಿದರು.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ನಾಗ್ಪುರ ಮುನ್ಸಿಪ್‌ ಕಾರ್ಪೋರೇಷನ್‌ ಪ್ರದೇಶ ಸೇರಿದಂತೆ ನಾಗ್ಪುರ ಸಂಪರ್ಕಿಸುವ ಕಂಮ್ಟಿ, ಕೊರಡಿ, ಹಿಂಗ್ರಾ ಪ್ರದೇಶಗಳನ್ನು ಸಹ ಲಾಕ್‌ಡೌನ್‌ ವಿಧಿಸಲಾಗುತ್ತಿದೆ.  ಮುಂಬೈ ನಗರ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಚಟುವಟಿಕೆಗಳು ಆರಂಭಸಿರುವುದು ಮತ್ತು ರೈಲ್ವೇ ಸೇವೆಗಳಲ್ಲಿ ಸಾರ್ವಜನಿಕರ ಜನಸಂದಣಿ ಹೆಚ್ಚಾದ ಪರಿಣಾಮವಾಗಿ ಕೋವಿಡ್‌ ಪ್ರಕರಣ ಹೆಚ್ಚಾಗುತ್ತಿವೆ.  ಕೋವಿಡ್‌ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಹೆಚ್ಚಾಗುತ್ತಿದೆ. ಕೊರೊನಾ ಪ್ರಕರಣದ ಶೇಕಡಾ 60ರಷ್ಟು ರಾಜ್ಯದ ಪುಣೈ, ನಾಗ್ಪುರ, ಥಾಣೆ, ಮುಂಬೈ, ಅಮರಾವತಿ ಐದು ಜಿಲ್ಲೆಗಳಲ್ಲಿ ದಾಖಲಾಗುತ್ತಿವೆ. ನಾಗ್ಪುರ ಪ್ರದೇಶದಲ್ಲಿಯೂ ಪ್ರಕರಣಗಳು ಏರಿಕೆ ದಾಖಲಾಗುತ್ತಿವೆ.

ಇದನ್ನೂ ಓದಿ : ಲಾಕ್‌ಡೌನ್‌ ಮಾಡಿದವರೂ ನೀವೇ, ಈಗ ಪರಿಹಾರ ನೀವೇ ಕೊಡಬೇಕು: ಸುಪ್ರೀಂ

ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಪ್ರದೇಶಗಳಲ್ಲಿ ಲಾಕ್‌ಡೌನ್‌ ಮಾಡುವ ಬಗ್ಗೆ ಇನ್ನೆರಡು ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *