ಒಂದೊತ್ತಿನ ಊಟ ತಿಂಡಿಗೂ ಪರದಾಡುತ್ತಿರುವ ಕೊಡಗಿನ ಹಾಡಿ ಜನ

ಕೊಡಗು : ಕೊವಿಡ್ ಸೋಂಕು ನಿಯಂತ್ರಣಕ್ಕಾಗಿ  ಸರ್ಕಾರವೇನೋ ಲಾಕ್ ಡೌನ್ ಹೇರಿದೆ. ಆದರೆ ಕೊಡಗಿನ ಹಲವು ಹಾಡಿಗಳ ಜನರು ಊಟಕ್ಕೂ ವ್ಯವಸ್ಥೆಯಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ, ತಟ್ಟಳ್ಳಿ ಸೇರಿದಂತೆ ಹಲವು ಗಿರಿಜನ ಹಾಡಿಗಳ ಜನರು ತೀವ್ರ ತೊಂದರೆಯಲ್ಲಿದ್ದಾರೆ. ಅಂದು ದುಡಿದು ಒಂದೊತ್ತಿನ ಊಟದ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದ ಗಿರಿಜನರು ಲಾಕ್ ಡೌನ್ ನಿಂದಾಗಿ ಪರದಾಡುವಂತಾಗಿದೆ.

ಕೂಲಿಗೆ ಹೋಗೋಣ ಎಂದರೆ ಜೀಪುಗಳಲ್ಲಿ ಅಷ್ಟೊಂದು ಮಹಿಳೆಯರು ಒಟ್ಟಿಗೆ ಕುಳಿತು ಹೋಗಲು ಪೊಲೀಸನವರು ಬಿಡುವುದಿಲ್ಲ. ಇತ್ತ ನಮ್ಮ ಚಿಕ್ಕಪುಟ್ಟ ಖರ್ಚುಗಳಿಗೂ ಹಣವಿಲ್ಲದಂತೆ ಆಗಿದೆ. ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳಿದ್ದು, ಅವರಿಗೆ ಸರಿಯಾದ ಊಟ ತಿಂಡಿ ಕೊಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಕಣ್ಣೀರು ಇಟ್ಟಿದ್ದಾರೆ. ಸರಕಾರ ಕೇವಲ ಅಕ್ಕಿ ಕೊಟ್ಟು ಕೈ ತೊಳೆದುಕೊಂಡಿದೆ. ಕೇವಲ ಅಕ್ಕಿ ತಿಂದು ಬದುಕಲು ಸಾಧ್ಯವೆ?  ನಮ್ಮ ಸ್ಥಿತಿ ಯಾರಿಗೂ ಬರಬಾರದು ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ  :ಕೋವಿಡ್‌ ಎರಡನೇ ಪ್ಯಾಕೇಜ್‌ ಘೋಷಣೆ : ಯಾರಿಗೆ ಎಷ್ಟೆಷ್ಟು ನೆರವು, ಇಲ್ಲಿದೆ ಸಂಪೂರ್ಣ ಮಾಹಿತಿ

ಹಾಡಿಯ ಮಹಿಳೆಯರ ಈ ನೋವಿನ ಸ್ಥಿತಿಯನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದು, ಎಲ್ಲಡೆ ವೈರಲ್ ಮಾಡಿದ್ದಾರೆ. ಈ ವಿಡಿಯೋವನ್ನು ಗಮನಿಸಿದ ಕೊಡಗು ಸೇವ್ ತಂಡದ ಸದಸ್ಯರು ಬೆಂಗಳೂರಿನ ಬಸವಾಸಿ ಕನ್ನಡಿಗರ ಸಂಘವನ್ನು ಸಂಪರ್ಕಿಸಿದ್ದಾರೆ. ಆ ಮೂಲಕ ಕೊಡಗು ಸೇವ್ ತಂಡ ಮತ್ತು ಬನವಾಸಿ ಕನ್ನಡಿಗರ ಸಂಘದ ಸದಸ್ಯರು ಸೇರಿ ನಾಲ್ಕೈದು ಹಾಡಿಗಳ ನೂರಾರು ಕುಟುಂಬಗಳಿಗೆ ಒಂದು ವಾರಕ್ಕೆ ಆಗುವಷ್ಟು ಆಹಾರದ ಪದಾರ್ಥಗಳನ್ನು ಪ್ರತೀ ಹಾಡಿಗಳಿಗೆ ತೆರಳಿ ವಿತರಣೆ ಮಾಡಿದ್ದಾರೆ. ಸದ್ಯ ಒಂದು ವಾರಕ್ಕೆ ತಮ್ಮ ಹಸಿವು ನೀಗಿಸಿರುವುದಕ್ಕೆ ಹಾಡಿಯ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಕೊವಿಡ್ ನಿಯಂತ್ರಣಕ್ಕೆ ಬಾರದೆ, ಜೂನ್ ಏಳರ ನಂತರವೂ ಸರ್ಕಾರ ಲಾಕ್ ಡೌನ್ ಮುಂದುವರಿಸಿದ್ದು ಹಾಡಿಯ ಜನರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ.

ವರದಿ : R s ಹಾಸನ್

Donate Janashakthi Media

Leave a Reply

Your email address will not be published. Required fields are marked *