– ಭಾವನ ಟಿ.
ನನ್ನೀ ಸೊಗಸಾದ
ಮೌನವನ್ನೇ
ಅರಿಯಲಾರದ ನೀನು…
ಗುಡುಗು – ಮಿಂಚಿನಂತಿರುವ
ನನ್ನ ಮಾತುಗಳನ್ನು
ಹೇಗೇ ತಾನೇ
ಅರ್ಥೈಸಿಕೊಳ್ಳಬಲ್ಲೆ ಹೇಳೋ…!!?
****
ನಾನು ನಿನ್ನೆಲ್ಲಾ ನ್ಯೂನತೆಗಳನ್ನು ಪ್ರೀತಿಸುತ್ತೇನೆ…
ನಿನ್ನೆಲ್ಲಾ ಸಣ್ಣ – ದೊಡ್ಡ ಅಪರಿಪೂರ್ಣತೆಗಳೊಂದಿಗೆ ನಿನ್ನನ್ನು ಅಪ್ಪಿಕೊಳ್ಳುತ್ತೇನೆ…
ಅವುಗಳಿಲ್ಲದೇ,
ನನ್ನೊಂದಿಗಿನ ನೀನು ಸಂಪೂರ್ಣವಾಗುವುದಿಲ್ಲ…
****
ಬಾ ಒಮ್ಮೆ
ಇಬ್ಬರೂ ಮನಗಳ ಬೆತ್ತಲಾಗಿಸಿ ಜೊತೆಯಾಗಿ ಕುರೋಣ…
ನನ್ನೆಲ್ಲಾ ಕಣ್ಣೀರು ನಿನ್ನೆದೆಯೊಳಗೆ ಇಳಿಯುವವರೆಗೂ ತಬ್ಬಿಕೊಳ್ಳೋಣ…
****
ಇದನ್ನೂ ಓದಿ:ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ : ಮರೆಮಾಚಿದ ಸತ್ಯಗಳು
ಮದಿರೆಯ ರುಚಿಗೆ
ತುಟಿಯೊಡ್ಡಬೇಡವೋ…
ಒಮ್ಮೆ
ನನ್ನೀ ತುಟಿಗೆ ತುಟಿ ತಾಕಿಸಿ ನೋಡೋ
ಮದಿರೆಯ ನಶೆಯ ಮೀರಿಸಿ
ಸದಾ ನಿನ್ನನ್ನು ಎಚ್ಚರವಾಗಿಡುವ ಅಮಲಿದೆ…
ವಿಡಿಯೋ ನೋಡಿ:ಪಿಚ್ಚರ್ ಪಯಣ – 137, ಸಿನೆಮಾ : ಏಕ್ ದಿನ ಅಚಾನಕ್, ವಿಶ್ಲೇಷಣೆ : ಮೀನಾಕ್ಷಿ ಬಾಳಿ Janashakthi Media