ನಗರಾಭಿವೃದ್ಧಿ ಇಲಾಖೆಯಲ್ಲಿನ ಭ್ರಷ್ಟಾಚಾರ ತಡೆಗಟ್ಟಲು ಮುಖ್ಯಮಂತ್ರಿಗಳಿಗೆ ಪತ್ರ

ಬೆಂಗಳೂರು: ರಾಜ್ಯದಲ್ಲಿನ ಖಾಸಗಿ ಬಡಾವಣೆಗಳ ನಿರ್ಮಾಣಕ್ಕಾಗಿ ನಗರಾಭಿವೃದ್ಧಿ ಸಚಿವರ ಒಪ್ಪಿಗೆ ಪಡೆಯಬೇಕೆಂಬ ನೂತನ ಆದೇಶ ವ್ಯಾಪಕ ಭ್ರಷ್ಟಾಚಾರಕ್ಕೆ ನಾಂದಿ ಮಾಡಿಕೊಡುತ್ತದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆಯುವ ಮೂಲಕ ಎಚ್ಚರಿಸಿದ್ದಾರೆ.

ತಮ್ಮ ಪತ್ರದಲ್ಲಿ, ರಾ ಜ್ಯದ ಅನೇಕ ನಗರ, ಪಟ್ಟಣಗಳಲ್ಲಿ ಈಗಾಗಲೇ ಖಾಸಗಿ ಸಂಸ್ಥೆಗಳಿಂದ ಸುಸಜ್ಜಿತವಾದ ಬಡಾವಣೆಗಳು ನಿರ್ಮಾಣವಾಗಿ ಜನತೆಗೆ ಕೈಗೆಟುಕುವ ಬೆಲೆಯಲ್ಲಿ ಸೂರನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಇದುವರೆಗೂ1961 ರ ಆರ್.ಡಿ.ಪಿ.ಅರ್ ಕಾಯ್ದೆಯ ಪ್ರಕಾರ ನಗರಾಭಿವೃದ್ಧಿ ಪ್ರಾಧಿಕಾರಗಳು ಆಯಾ ಖಾಸಗಿ ನಿವೇಶನಗಳ ನೀಲಿ ನಕಾಶೆಯನ್ನು ತಯಾರಿಸಿ ಅನುಮತಿಯನ್ನು ನೀಡಿ ಖಾಸಗಿ ಬಡಾವಣೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿತ್ತು.

ಇದನ್ನು ಓದಿಕಲಬುರಗಿ| ಮೀಟರ್ ಬಡ್ಡಿ ಕಿರುಕುಳ: ಆಟೋ ಚಾಲಕ ಆತ್ಮಹತ್ಯೆ

ಆದರೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಮ್ಮ ಇತ್ತೀಚಿನ ಸಭೆಯಲ್ಲಿ ರಾಜ್ಯದಲ್ಲಿನ ಯಾವುದೇ ಖಾಸಗಿ ಬಡಾವಣೆಗಳ ನಿರ್ಮಾಣಕ್ಕಾಗಿ ಅಂತಿಮ ಅನುಮತಿಯನ್ನು ಸಚಿವಾಲಯದ ಮೂಲಕವೇ ಆಗಬೇಕೆಂದು ಕಾಯ್ದೆಗೆ ತಿದ್ದುಪಡಿ ತರಲು ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ಮಂತ್ರಿಗಳ ಈ ನಡೆ ಸಂಪೂರ್ಣವಾಗಿ ಅಧಿಕಾರ ವಿಕೇಂದ್ರೀಕರಣದ ಸಂವಿಧಾನದ ಮೂಲ ಆಶಯಕ್ಕೆ ಕೊಡಲಿ ಪೆಟ್ಟು ಬೀಳುವಂತಿದೆ. ನಗರಾಭಿವೃದ್ಧಿ ಸಚಿವಾಲಯದಿಂದ ನೇರವಾಗಿ ಭ್ರಷ್ಟಾಚಾರ ಮಾಡುವ ಉದ್ದೇಶದಿಂದಲೇ ಈ ರೀತಿಯ ತಿದ್ದುಪಡಿಯನ್ನು ಮಾಡಲು ಹೊರಟಿರುವುದು ಸ್ಪಷ್ಟವಾಗಿ ಮೇಲ್ನೋಟಕ್ಕೆ ಗೋಚರಿಸುತ್ತದೆ. ಈ ತಿದ್ದುಪಡಿಯು ನಗರ/ ಪಟ್ಟಣ ಯೋಜನಾ ಪ್ರಾಧಿಕಾರಗಳ ಸ್ವಾಯತ್ತತೆಗೆ ಧಕ್ಕೆ ತರುವಂತಿದೆ.

ಇದನ್ನು ಓದಿಐಪಿಎಲ್ 2025: ತಂಬಾಕು ಮತ್ತು ಮದ್ಯ ಜಾಹೀರಾತುಗಳ ಮೇಲೆ ಸಂಪೂರ್ಣ ನಿಷೇಧ – ಆರೋಗ್ಯ ಸಚಿವಾಲಯದ ಆದೇಶ

ಈ ಕೂಡಲೇ ತಾವು ಮಧ್ಯಪ್ರವೇಶ ಮಾಡಿ ನಿಮ್ಮ ನಗರಾಭಿವೃದ್ದಿ ಮಂತ್ರಿಯವರ ಕಾಯ್ದೆಯ ತಿದ್ದುಪಡಿಯ ಯೋಚನೆಯನ್ನು ತಕ್ಷಣವೇ ನಿಲ್ಲಿಸಬೇಕು . ಈ ಮೂಲಕ ಮುಂದಾಗಬಹುದಾದ ವ್ಯಾಪಕ ಭ್ರಷ್ಟಾಚಾರವನ್ನು ತಡೆಗಟ್ಟಬೇಕು ಮತ್ತು ವಿಕೇಂದ್ರೀಕರಣದ ಪರಿಕಲ್ಪನೆಯ ಮಹತ್ವವನ್ನು ಎತ್ತಿ ಹಿಡಿಯಬೇಕು ಎಂದು ಮುಖ್ಯಮಂತ್ರಿ ಚಂದ್ರು ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಕೆಲಸದ ಅವಧಿ ಹೆಚ್ಳಳದ ವಿರುದ್ಧ ಐಟಿ ನೌಕರರ ಪ್ರತಿಭಟನೆ | ಉತ್ತಮ ಉದ್ಯೋಗ ಸಮತೋಲನ ಆರೋಗ್ಯಕ್ಕೆ ಆಗ್ರಹ Janashakthi

 

Donate Janashakthi Media

Leave a Reply

Your email address will not be published. Required fields are marked *