ʻಭಾರತ ಬಂದ್‍’ಗೆ ಬೆಂಬಲ ನೀಡಿ-ಜನತೆಗೆ ಎಡಪಕ್ಷಗಳ ಕರೆ

ನವದೆಹಲಿ: ಸಂಯುಕ್ತ ಕಿಸಾನ್‍ ಮೋರ್ಚಾ ನೀಡಿರುವ ‘ಭಾರತ ಬಂದ್’ ಕರೆಗೆ ಐದು ಎಡಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಭಾರತ ಕಮ್ಯುನಿಸ್ಟ್ ಪಕ್ಷ-ಸಿಪಿಐ, ಅಖಿಲ ಭಾರತ ಫಾರ್ವರ್ಡ್ ಬ್ಲಾಕ್-ಎಐಎಫ್‌ಬಿ, ರಿವೊಲ್ಯುಷನರಿ ಸೋಶಲಿಸ್ಟ್ ಪಾರ್ಟಿ-ಆರ್‌ಎಸ್‌ಪಿ ಮತ್ತು ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ-ಲೆನಿನ್‍ ವಾದಿ)-ಸಿಪಿಐ(ಎಂಎಲ್‌) ಜಂಟಿಯಾಗಿ ಒಂದು ಹೇಳಿಕೆ ನೀಡಿ ರೈತರ ಈ ಭಾರತ ಬಂದ್‍ ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿವೆ.

ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು ಮತ್ತು ಕನಿಷ್ಟ ಬೆಂಬಲ ಬೆಲೆಗೆ ಕಾನೂನಾತ್ಮಕ ಖಾತ್ರಿ ಒದಗಿಸಬೇಕು ಎಂದು ಆಗ್ರಹಿಸಿ ರೈತರು ನಡೆಸುತ್ತಿರುವ ಐತಿಹಾಸಿಕ ಹೋರಾಟ 10ನೇ ತಿಂಗಳಲ್ಲೂ ಮುಂದುವರೆಯುತ್ತಿದೆ.

ಇದನ್ನು ಓದಿ: ಕೃಷಿ ಕಾಯ್ದೆ ರದ್ದತಿಗೆ ಆಗ್ರಹಿಸಿ ಸೆಪ್ಟೆಂಬರ್ 27 ಕ್ಕೆ ಕರ್ನಾಟಕ ಬಂದ್

ಮೋದಿ ಸರಕಾರ ಇನ್ನೂ ಹಟಮಾರಿ ನಿಲುವು ತಳೆದಿದೆ, ಹೋರಾಟ ನಿರತ ರೈತರೊಂದಿಗೆ ಮಾತುಕತೆಗಳಲ್ಲಿ ತೊಡಗಲು ನಿರಾಕರಿಸುತ್ತಿದೆ.

ಎಡಪಕ್ಷಗಳು, ಮೋದಿ ಸರಕಾರದ ಈ ಹಟಮಾರಿತನವನ್ನು ಖಂಡಿಸುತ್ತಲೇ, ಈ ಕೃಷಿ ಕಾಯ್ದೆಗಳನ್ನು ತಕ್ಷಣವೇ ರದ್ದು ಮಾಡಬೇಕು, ಕನಿಷ್ಟ ಬೆಂಬಲ ಬೆಲೆಯ ಖಾತ್ರಿಯನ್ನು ಜಾರಿಗೊಳಿಸಬೇಕು, ರಾಷ್ಟ್ರೀಯ ನಗದೀಕರಣ ಕ್ರಮಸರಣಿಯನ್ನು ರದ್ದು ಮಾಡಬೇಕು ಮತ್ತು ಕಾರ್ಮಿಕ ಸಂಹಿತೆಗಳನ್ನು ರದ್ದುಮಾಡಬೇಕು ಎಂದು ಮತ್ತೊಮ್ಮೆ ಆಗ್ರಹಿಸಿವೆ.

ಭಾರತ ಬಂದ್‍ನ ಯಶಸ್ಸಿಗೆ ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಈ ಐದು ಎಡಪಕ್ಷಗಳು ತಮ್ಮ ಎಲ್ಲ ಘಟಕಗಳಿಗೆ ಕರೆ ನೀಡಿವೆ.

ಈ ಪಕ್ಷಗಳ ಪ್ರಧಾನ ಕಾರ್ಯದರ್ಶಿಗಳಾದ ಸೀತಾರಾಂ ಯೆಚುರಿ, ಡಿ.ರಾಜ, ದೇಬಬ್ರತ ಬಿಸ್ವಾಸ್, ಮನೋಜ್‍ ಭಟ್ಟಾಚಾರ್ಯ ಮತ್ತು ದೀಪಂಕರ್ ಭಟ್ಟಾಚಾರ್ಯ ಈ ಹೇಳಿಕೆಗೆ ಸಹಿ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *