ತುಮಕೂರು: ಜಗತ್ತಿನ ಸರ್ವಾಧಿಕಾರಿ, ಸಾಮ್ರಾಜ್ಯಶಾಹಿಗಳು ಇತಿಹಾಸದಿಂದ ಪಾಠ ಕಲಿಯಬೇಕಾಗಿದೆ. ಅಮೇರಿಕಾ ದೇಶದ ಟ್ರಂಪ್‌ನ ನಡೆಗೆ ಕಡಿವಾಣ ಹಾಕಲು ಜಗತ್ತಿನ ಪ್ರಜಾಪ್ರಭುತ್ವದ ದೇಶಗಳು, ಯುದ್ಧ ವಿರೋದಿ ನೀತಿಯನ್ನು, ಶಾಂತಿಯನ್ನು ಬಯಸುವ ಮತ್ತು ಈ ಎಲ್ಲದರ ಮುಖ್ಯಸ್ಥನಾಗಿರುವ ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಬೇಕು ಎಂದು ಪ್ರಗತಿಪರ ಚಿಂತಕ ಕೆ. ದೊರೈರಾಜ್ ಆಗ್ರಹಿಸಿದರು. ಅಪಹರಣ
ಅವರು ಸಿಪಿಐ, ಸಿಪಿಐ(ಎಂ.) ಎಸ್.ಯು.ಸಿ.ಐ (ಸಿ) ಎಡಪಕ್ಷಗಳು ವೆನಿಜುವೆಲಾದ ಅಧ್ಯಕ್ಷರ ಅಪಹರಣವನ್ನು ಖಂಡಿಸಿ ನಗರದ ಸ್ವಾತಂತ್ರ್ಯ ಚೌಕದಲ್ಲಿ ಹಮ್ಮಿಕೊಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಮುಂದುವರೆದು ಮಾತನಡಿದ ಅವರು, ವೆನಿಜುಲಾದ ಅಧ್ಯಕ್ಷರ ಅಪಹರಣ ಮಾಡುವುದು ಅತ್ಯಂತ ಖಂಡನಿಯವಾದುದು ಹಾಗೂ ಗೂಂಡಾಗಿರಿಯ ಪ್ರವೃತ್ತಿಯಾಗಿದ್ದು ಯುದ್ದಕೋರ ಟ್ರಂಪ್‌ನ ನಡೆಯನ್ನು ಎಲ್ಲಾ ಶಾಂತಿಬಯಸುವ ದೇಶಗಳು ಖಂಡಿಸಬೇಕು ಎಂದರು.
ಇದನ್ನೂ ಓದಿ: ಬೆಂಗಳೂರು | ಮಹಿಳೆಯರಿಗೆ ಅಸಾಧ್ಯವಾದ ಕೆಲಸ ಯಾವುದು ಇಲ್ಲ – ಲಕ್ಷ್ಮೀ ಹೆಬ್ಬಾಳಕರ್
ಪರಿಸರವಾದಿ ಸಿ. ಯತಿರಾಜು ಮಾತನಾಡಿ, ಅಮೇರಿಕಾಕ್ಕೆ ವೆನಿಜುವೆಲಾದ ಮೇಲಿನ ತೈಲ ಪ್ರೀತಿಯಿಂದ ವೆನಿಜುವೆಲಾದ ಅಧ್ಯಕ್ಷರನ್ನು ಅಪಹರಣವನ್ನು ಮಾಡಿದ್ದಾರೆ ಎಂದರು ಮಧ್ಯಪ್ರವೇಶ ಮಾಡುವ ಹೆಸರಿನಲ್ಲಿ ವೆನಿಜುವೆಲಾದ ಅಧ್ಯಕ್ಷರನ್ನು ಅಪಹರಣ ಮಾಡಿದ್ದು ಈ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ. ಉಮೇಶ್ ಮಾತನಾಡಿ ವೆನೆಜುವೆಲಾದ ಮೇಲೆ ಆಕ್ರಮಣ ಕುರಿತಂತೆ ಬಿಜೆಪಿ ಸರ್ಕಾರದ ಅಂಜುಬುರುಕ ಮತ್ತು ಅಪಮಾನಕರ ನಿಲುವನ್ನು ಖಂಡಿಸಿದರು. ವೆನೆಜುಲ ವಿರುದ್ಧದ ದುರಾಕ್ರಮಣ ಮತ್ತು ಅಮೆರಿಕದ ಸಶಸ್ತ್ರ ಪಡೆಗಳು ಅದರ ಅಧ್ಯಕ್ಷರು ಮತ್ತು ಅವರ ಪತ್ನಿಯನ್ನು ಅಪಹರಿಸಿದ್ದಕ್ಕೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅಂಜುಬುರುಕತನದ ಪ್ರತಿಕ್ರಿಯೆ ಭಾರತವು ಇತರ ರಾಷ್ಟ್ರಗಳ ಸ್ವಾತಂತ್ರ‍್ಯ ಮತ್ತು ಸಾರ್ವಭೌಮತ್ವದ ರಕ್ಷಣೆಯ ಬಗ್ಗೆ ದೀರ್ಘಕಾಲದಿಂದ ತೆಗೆದುಕೊಂಡು ಬಂದಿರುವ ನಿಲುವಿಗೆ ತಕ್ಕುದಾಗಿಲ್ಲ ಎಂದು ಅಬಿಪ್ರಾಯಪಟ್ಟರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಮಾತನಾಡಿ ಅಮೇರಿಕಾ ದೇಶದ ಯುದ್ದಕೋರ ನೀತಿಯನ್ನು ಬಲವಾಗಿ ಖಂಡಿಸಿ, ಅಲಿಪ್ತ ನೀತಿಗಳು ಜಾರಿಯಾಗಬೇಕು ಎಂದರು ಎಸ್.ಯುಸಿಐನ ಕಲ್ಯಾಣಿ ಮಾತನಾಡಿ ಅಮೇರಿಕಾಕ್ಕೆ ಯುದ್ದಬೇಕಾಗಿದ್ದು ದೊಡ್ಡಣ್ಣನಾಗಿಮೆರೆಯಬೇಕಾಗಿದೆ ಹಾಗಾಗಿ ಟ್ರಂಪ್‌ರವರ ನಡೆಯನ್ನು ಎಲ್ಲರೂ ವಿರೋಧಿಸಬೇಕಾಗಿದೆ ಎಂದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿ ಭಾರತದ ಸಾರ್ವಭೌಮತ್ವವನ್ನು ಉಳಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು, ಅಮೇರಿಕ ತೈಲಗಳನ್ನು ಯಾರಿಂದ ಪಡೆಯಬೇಕು ಎನ್ನುವ ಅಂಶವನ್ನು ಮುಂದೆ ಮಾಡುತ್ತಿದೆ. ಭಾರತವು ತನ್ನ ಸ್ಪಷ್ಟ ನೀಲುವನ್ನು ತಾಳಬೇಕು ವೆನಿಜುವೆಲಾ ಅಧ್ಯಕ್ಷ ಮತ್ತು ಅವರ ಪತ್ನಿಯನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಿಪಿಐನ ಕಂಬೇಗೌಡ, ಎಸ್.ಯುಸಿಐನ ಮಂಜುಳ ಮಾತನಾಡಿದರು.
ಪ್ರತಿಭಟನೆಯಲ್ಲಿ ಸಿಪಿಐ(ಎಂ)ನ ನಗರ ಕಾರ್ಯದರ್ಶಿ ಎ.ಲೋಕೇಶ್, ಖಲೀಲ್, ಮಧು, ರಂಗಧಾAಯ್ಯ, ಇಂತು, ಪಾಂಡು,ರಾಮಕೃಷ್ಣ, ಜನವಾದಿ ಮಹಿಳಾ ಸಂಘಟನೆಯ ಕಲ್ಪನಾ ಸಿಪಿಐ ನ ಗೋವಿಂದರಾಜು, ರಮೇಶ್, ರವಿಶಂಕರ್ ಅರುಣ್‌ಕುಮಾರ್,ರಸೂಲ್ ಸಾಬ್, ಎಸ್,ಯುಸಿಐನ ರತ್ನಮ್ಮ, ಲಕ್ಕಪ್ಪ, ಅಶ್ವಿನಿ, ಭರತ್, ಅನೂಸೂಯ ಮುಂತಾದವರು ಭಾಗವಹಿಸಿದ್ದರು.
ಇದನ್ನೂ ನೋಡಿ: ವೆನೆಜುವೇಲಾದ ಮೇಲೆ ಯುದ್ದ ಹೂಡಿದರೆ ,ಯು.ಎಸ್ ಗೆ ಅದು ಇನ್ನೊಂದು ವಿಯೇಟ್ನಾಂ ಆಗುತ್ತದೆ! ಇರಾಕ್, ಲಿಬ್ಯ ಅಲ್ಲ !
