ಕೋಲ್ಕತ್ತಾ : ಪಶ್ಚಿಮ ಬಂಗಳಾದ ವಿಧಾನಸಭಾ ಚುನಾವಣೆಗೆ ಘೋಷಣೆ ಯಾದ ಎಂಟು ಹಂತದ ಮತದಾನ ಪ್ರಕ್ರಿಯೆಯಲ್ಲಿ ಮೂರು ಹಂತದಲ್ಲಿ ಪೂರ್ಣಗೊಂಡಿದೆ. ಉಳಿದ ಐದು ಹಂತದ ಮತದಾನಕ್ಕಾಗಿ ರಾಜ್ಯದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)-ಸಿಪಿಐ(ಎಂ) ಪಕ್ಷದ ರಾಷ್ಟ್ರೀಯ ನಾಯಕರು ರೋಡ್ ಷೋಗಳಲ್ಲಿ ಭಾಗವಹಿಸುತ್ತಿದ್ದಾರೆ.
ಇದನ್ನು ಓದಿ : 14 ವರ್ಷಗಳ ನಂತರ ನಂದಿಗ್ರಾಮ ‘ಗೋಲೀಬಾರ್’ನ ಪಿತೂರಿ ಬಯಲು?
ಜಾದವ್‌ಪುರ ರೋಡ್ ಶೋ ಸಂದರ್ಭದಲ್ಲಿ ಎಡಪಕ್ಷದ ನಾಯಕರು ಭಾಗವಹಿಸಿದ್ದರು. ಸಿಪಿಐ(ಎಂ) ನಾಯಕರಾದ ಬಿಮನ್ ಬೋಸ್, ಸೂರ್ಯಕಾಂತ ಮಿಶ್ರಾ, ಬೃಂದಾ ಕಾರಟ್ ಮತ್ತು ತ್ರಿಪುರ ರಾಜ್ಯದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಸೇರಿದಂತೆ ಹಲವು ನಾಯಕರು ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದಾರೆ.
ಅಲ್ಲದೆ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷದ ನಾಯಕರೂ ಸಹ ಎಡಪಕ್ಷಗಳ ಅಭ್ಯರ್ಥಿಗಳ ಗೆಲುವಿಗಾಗಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಿದರು. ಕಾಂಗ್ರೆಸ್ ಪಕ್ಷದ ಪಕ್ಷದ ಅಧೀರ್ ರಂಜನ್ ಚೌದರಿ ಅವರು ಎಡರಂಗದ ಅಧ್ಯಕ್ಷರಾದ ಬಿಮನ್ ಬಸು ಅವರೊಂದಿಗೆ ಕೋಲ್ಕತ್ತಾದ ಕೆಲವು ಪ್ರದೇಶಗಳಲ್ಲಿ ಅಭ್ಯರ್ಥಿಗಳ ಪ್ರಚಾರದಲ್ಲಿ ಭಾಗವಹಿಸಿದರು.
ಇದನ್ನು ಓದಿ : ಪಶ್ಚಿಮ ಬಂಗಾಳ : ಬಿರುಸಿನಿಂದ ಸಾಗಿದೆ ಚುನಾವಣಾ ಪ್ರಚಾರ
ಚುನಾವಣಾ ಪ್ರಚಾರದ ಭಾಗವಾಗಿ ಧಾಕುರಿಯಾ ದಿಂದ ಜಾಧವ್ ಪುರದವರೆಗೆ ಬೃಹತ್ ರೋಡ್ ಶೋ ನಡೆಸಲಾತು. ಸಂಯುಕ್ತ ಮೋರ್ಚಾ ರಂಗ ನಾಲ್ವರು ಅಭ್ಯರ್ಥಿಗಳಾದ ಜಾಧವ್ ಪುರ ವಿಧಾನಸಭಾ ಕ್ಷೇತ್ರ ಸುಜನ್ ಚಕ್ರವರ್ತಿ, ಕಾಸ್ಬಾ ಕ್ಷೇತ್ರದ ಶತರೂಪ್ ಘೋಷ್, ಟೊಲಿಗೂಂಗೆ ಕ್ಷೇತ್ರದ ದೇಬದತ್ ಘೋಷ್ ಮತ್ತು ರಾಶ್‌ಬೆಹರಿ ಕ್ಷೇತ್ರದ ಅಶುತೋಷ್ ಚಟರ್ಜಿ ಪರವಾಗಿ ಸಂಯುಕ್ತ ಮೋರ್ಚಾ ರಂಗ ರಾಜ್ಯ ನಾಯಕರು ಭಾಗವಹಿಸಿದರು.
ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳೊಂದಿಗೆ ಮೈತ್ರಿಯ ಭಾಗವಾಗಿರುವ ಕಾಂಗ್ರೆಸ್ ಪಕ್ಷದ ಬಹಳಷ್ಟು ನಾಯಕರು ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿಗಳ ಪ್ರಚಾರದಲ್ಲಿ ಸರಿಯಾಗಿ ಭಾಗವಹಿಸುತ್ತಿರಲಿಲ್ಲ. ಆದರೆ, ಎಡಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರುಗಳು ಸಂಯುಕ್ತ ಮೋರ್ಚಾದ ಎಲ್ಲಾ ಆಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುತ್ತಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿಯೂ ಎಡಪಕ್ಷದ ನಾಯಕರು ಭಾಗವಹಿಸಿದ್ದರು.
ಚುನಾವಣಾ ಕಣದಲ್ಲಿ ಎಡಪಕ್ಷಗಳ ಕಾಳಜಿಯನ್ನು ತಿಳಿದ ಕಾಂಗ್ರೆಸ್ ಪಕ್ಷದ ನಾಯಕರುಗಳು ಅದರಲ್ಲೂ ರಾಜ್ಯ ನಾಯಕರು ಈಗ ಪ್ರಚಾರದಲ್ಲಿ ಬಿರುಸಿನಿಂದ ಎಲ್ಲಾ ಕ್ಷೇತ್ರಗಳಲ್ಲಿ ಸಂಚರಿಸುತ್ತಿದ್ದಾರೆ ಮತ್ತು ಎಡಪಕ್ಷಗಳ ನಾಯಕರೊಂದಿಗೂ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ.
ಬಂಗಾಳದಲ್ಲಿ ಸಿಪಿಐ(ಎಂ), ಸಿಪಿಐ, ಆರ್‌ಎಸ್‌ಪಿ ಫಾರ್ವಡ್ ಬ್ಲಾಕ್ ಮತ್ತು ಕಾಂಗ್ರೆಸ್ ಮತ್ತು ಐಎಸ್‌ಎಫ್ ಮೈತ್ರಿ ಪಕ್ಷಗಳು ಇನ್ನು ಬಾಕಿ ಇರುವ ಐದು ಹಂತದ ಚುನಾವಣಾ ಪ್ರಚಾರದಲ್ಲಿ ಸಕ್ರಿವಾಗಿ ಭಾಗವಹಿಸುತ್ತಿದ್ದಾರೆ. ದಬ್ಬಾಳಿಕೆ ಮತ್ತು ಗೂಂಡಾಗಿರಿ ಸಂಸ್ಕೃತಿ ಟಿಎಂಸಿ ಹಾಗೂ ದೇಶದ ಸಂಪತ್ತನ್ನು ನಾಶ ಮಾಡುತ್ತಿರುವ ಮತ್ತು ನಿರುದ್ಯೋಗ ಹೆಚ್ಚಳಕ್ಕೆ ಕಾರಣವಾಗುತ್ತಿರುವ ಬಿಜೆಪಿ ಪಕ್ಷವನ್ನು ಸೋಲಿಸಲೇ ಬೇಕಾದ ಅನಿವಾರ್ಯದಲ್ಲಿ ಸಂಯುಕ್ತ ಮೋರ್ಚಾದ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಬಂಗಾಳದ ಮತದಾರರನ್ನು ತಲುಪಿ ಬಿಜೆಪಿ-ಟಿಎಂಸಿ ಪಕ್ಷಗಳ ಜನವಿರೋಧ ನೀತಿಗಳನ್ನು ಬಯಲುಗೊಳಿಸುತ್ತಿದ್ದಾರೆ.