ಆನೇಕಲ್ | ಸಾಬೀಕ ರಿಸರ್ಚ್ ಟೆಕ್ನಾಲಜಿ ಕಂಪನಿಯು ಕಾರ್ಮಿಕರ ಏಕಾಏಕಿ ಕೆಲಸದಿಂದ ವಜಾ ಕಾರ್ಮಿಕರ ಪ್ರತಿಭಟನೆ

ಆನೇಕಲ್: ಸಾಬೀಕ ರಿಸರ್ಚ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಕಂಪನಿಯು ಏಕಾಏಕಿ ಕೆಲಸದಿಂದ ತಮ್ಮನ್ನು ವಜಾಗೊಳಿಸದೆ ಎಂದು ಆರೋಪಿಸಿ, ಕಾರ್ಮಿಕರು  ತಾಲ್ಲೂಕಿನ ಸರ್ಜಾಪುರ ಸಮೀಪದ ಬಿಕ್ಕನಹಳ್ಳಿಯಲ್ಲಿ ಕಂಪನಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ : ಸರ್ಕಾರಿ ಶಾಲಾ ಕಾಲೇಜುಗಳನ್ನು ವಿಲೀನಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ ಎಸ್ಎಫ್ಐ ಮನವಿ

ನಾವೆಲ್ಲಾ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದೇವೆ. ಕಂಪನಿಯು ಯಾವುದೇ ಮಾಹಿತಿ ನೀಡದೆ ಏಕಾಏಕಿ 25 ಮಂದಿಯನ್ನು ಕೆಲಸದಿಂದ ತೆಗೆದಿರುವುದ ಅನ್ಯಾಯ. ಇದು ಕಾನೂನಿಗೆ ವಿರುದ್ಧವಾಗಿದೆ. ಕಳೆದ ಮೂರು ದಿನಗಳಿಂದಲೂ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂದು ಕಾರ್ಮಿಕ ಅಜಯ್ ತಿಳಿಸಿದರು.

‘ಕೆಲಸದಿಂದ ತೆಗೆದು ಹಾಕಿರುವ ಎಲ್ಲಾ 25 ಕಾರ್ಮಿಕರು ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಕಂಪನಿಯ ಆಡಳಿತ ಮಂಡಳಿಯು ನಮ್ಮ ಸಮಸ್ಯೆಯನ್ನು ಆಲಿಸಬೇಕು ಮತ್ತು ಈ ಕೆಲಸವನ್ನೇ ನಂಬಿ ಜೀವನ ಸಾಗಿಸುತ್ತಿದ್ದೇವೆ. ನಮ್ಮನ್ನು ಮರು ನೇಮಕ ಮಾಡಿಕೊಳ್ಳಬೇಕೆಂದು’ ಕಾವ್ಯ ಆಗ್ರಹಿಸಿದರು.

ಇದನ್ನೂ ನೋಡಿ : ಧರ್ಮಸ್ಥಳದ ನಿಗೂಢಗಳು | ದೊಡ್ಡವರು ಬಚಾವ್‌! ಅಣತಿಯಂತೆ ನಡೆದವರು?Janashakthi Media

Donate Janashakthi Media

Leave a Reply

Your email address will not be published. Required fields are marked *