ಭಾರತಕ್ಕೆ ಏನು ಬೇಕೋ ಅದನ್ನು ಪೂರೈಸಲು ನಾವು ಸಿದ್ಧರಿದ್ದೇವೆ: ರಷ್ಯಾ ವಿದೇಶಾಂಗ ಸಚಿವ ಘೋಷಣೆ

ನವದೆಹಲಿ: ಭಾರತ ನಮ್ಮಿಂದ ಖರೀದಿಸಲು ಬಯಸುವ ಯಾವುದೇ ಸರಕು ಪೂರೈಸಲು ನಾವು ಸಿದ್ಧರಿದ್ದೇವೆ ಭಾರತ ಪ್ರವಾಸದಲ್ಲಿರುವ ರಷ್ಯಾ ವಿದೇಶಾಂಗ ಸಚಿವ ಸರ್ಗೆ ಲಾವ್ರೊವ್ ಹೇಳಿದರು.

ರಷ್ಯಾ ವಿದೇಶಾಂಗ ಸಚಿವ ಸರ್ಗೆ ಲಾವ್ರೊವ್ ಅವರು ಇಂದು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಹಲವು ದಶಕಗಳಿಂದ ಭಾರತದೊಂದಿಗೆ ನಾವು ಬೆಳೆಸಿಕೊಂಡಿರುವ ಸಂಬಂಧವನ್ನು ಸಂಭಾಷಣೆಯು ನಿರೂಪಿಸುತ್ತದೆ ಎಂದು ಲಾವ್ರೊವ್ ಉತ್ತರಿಸಿದರು. ಸಂಬಂಧಗಳು ಕಾರ್ಯತಂತ್ರದ ಪಾಲುದಾರಿಕೆಗಳಾಗಿವೆ. ಈ ಆಧಾರದ ಮೇಲೆ ನಾವು ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ಉತ್ತೇಜಿಸುತ್ತಿದ್ದೇವೆ.

ಭಾರತದ ವಿದೇಶಾಂಗ ನೀತಿಗಳು ಸ್ವಾತಂತ್ರ್ಯ ಮತ್ತು ನಿಜವಾದ ರಾಷ್ಟ್ರೀಯ ನ್ಯಾಯ ಸಮ್ಮತ ಹಿತಾಸಕ್ತಿಗಳ ಮೇಲೆ ಕೇಂದ್ರೀಕರಿಸುತ್ತವೆ. ನಾವು ಚರ್ಚೆಗೆ ಸಿದ್ಧರಿದ್ದೇವೆ. ರಷ್ಯಾ ಮತ್ತು ಭಾರತ ಉತ್ತಮ ಸಂಬಂಧವನ್ನು ಹೊಂದಿವೆ ಎಂದು ಲಾವ್ರೊವ್ ಹೇಳಿದ್ದಾರೆ.

ಭಾರತದ ಮೇಲೆ ಅಮೆರಿಕದ ಒತ್ತಡವು, ಭಾರತ-ರಷ್ಯಾ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರನ್ನು ಕೇಳಿದಾಗ? ಯಾವುದೇ ಒತ್ತಡವು ನಮ್ಮ ಪಾಲುದಾರಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ. ಅಮೆರಿಕ ಇತರ ದೇಶಗಳು ತಮ್ಮ ರಾಜಕೀಯವನ್ನು ಅನುಸರಿಸಲು ಒತ್ತಾಯಿಸುತ್ತಿದ್ದಾರೆ. ಆದರೆ ಅದು ಫಲ ನೀಡುವುದಿಲ್ಲ ಎಂದು ಲಾವ್ರೊವ್ ಹೇಳಿದರು.

ಉಕ್ರೇನ್ ಮೇಲಿನ ಸೇನಾ ಕಾರ್ಯಾಚರಣೆ ಯುದ್ಧ ಅಲ್ಲ

ಉಕ್ರೇನ್‌ನೊಂದಿಗೆ ನಡೆಯುತ್ತಿರುವ ಯುದ್ಧದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಲಾವ್ರೋವ್, ‘ನೀವು ಇದನ್ನು ಯುದ್ಧ ಎಂದು ಕರೆದಿರುವುದು ನಿಜವಲ್ಲ. ಇದು ವಿಶೇಷ ಕಾರ್ಯಾಚರಣೆಯಾಗಿದೆ, ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿರಿಸಿಕೊಳ್ಳಲಾಗುತ್ತಿದೆ. ರಷ್ಯಾಕ್ಕೆ ಯಾವುದೇ ಬೆದರಿಕೆಯನ್ನು ಪ್ರಸ್ತುತಪಡಿಸುವ ಸಾಮರ್ಥ್ಯವನ್ನು ನಿರ್ಮಿಸುವುದರಿಂದ ಉಕ್ರೇನ್ ಆಡಳಿತವನ್ನು ವಂಚಿತಗೊಳಿಸುವುದು ಈ ಕಾರ್ಯಾಚರಣೆಯ ಗುರಿಯಾಗಿದೆ” ಎಂದು ಲಾವ್ರೊವ್‌ ಹೇಳಿದರು.

ಮಾಸ್ಕೋ ವಿರುದ್ಧ ಅಮೆರಿಕದ ನಿರ್ಬಂಧಗಳನ್ನು “ಬದಲಾವಣೆ” ಮಾಡುವ ಪ್ರಯತ್ನಗಳ ಪರಿಣಾಮಗಳ ಬಗ್ಗೆ ಅಮೆರಿಕ ಎಚ್ಚರಿಕೆ ನೀಡಿದ ಒಂದು ದಿನದ ನಂತರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ರಷ್ಯಾದ ಸಹವರ್ತಿ ಸೆರ್ಗೆ ಲಾವ್ರೊವ್ ಅವರೊಂದಿಗೆ ಮಾತುಕತೆ ನಡೆಸಿದರು.

ರಷ್ಯಾ ವಿದೇಶಾಂಗ ಸಚಿವ ಲಾವ್ರೊವ್ ಅವರು ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಗುರುವಾರ ಆಗಮಿಸಿದ್ದಾರೆ. ಉಕ್ರೇನ್ ಮೇಲಿನ ದಾಳಿಯ ನಂತರ ಇದು ಅವರ ಮೊದಲ ಭಾರತ ಭೇಟಿಯಾಗಿದೆ.

ಪ್ರಧಾನಿ ಮೋದಿ ಅವರನ್ನು ಸೆರ್ಗೆಯ್‌ ಲಾವ್ರೊವ್‌ ಅವರು ಭೇಟಿ ಮಾಡಲಿದ್ದಾರೆ. ಮಾಹಿತಿ ಪ್ರಕಾರ, ರಷ್ಯಾದಿಂದ ಅಗ್ಗದ ಕಚ್ಚಾ ತೈಲ ಖರೀದಿ, ಎಸ್-400 ಕ್ಷಿಪಣಿ ವ್ಯವಸ್ಥೆ ಸೇರಿದಂತೆ ವಿವಿಧ ಸೇನಾ ಉಪಕರಣಗಳನ್ನು ಸಕಾಲದಲ್ಲಿ ತಲುಪಿಸುವುದು ಇತ್ಯಾದಿ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

Donate Janashakthi Media

Leave a Reply

Your email address will not be published. Required fields are marked *