ಶ್ರೀನಗರ: ರಾಜಸ್ಥಾನದ ಉದಯಪುರ್‌ನಲ್ಲಿ ದರ್ಜಿಯ ಕತ್ತು ಸೀಳಿ ಭಯಾನಕವಾಗಿ ಹತ್ಯೆಗೈದಿದ್ದ ಇಬ್ಬರು ಮುಸ್ಲಿಮರು ಹಿಂದೆ ಬಿಜೆಪಿಯ ಕಾರ್ಯಕರ್ತರಾಗಿದ್ದರೆಂಬ ಸುದ್ದಿ ಇತ್ತು. ಈಗ ಅಂಥ ಮತ್ತೊಂದು ಪ್ರಕರಣ ವರದಿಯಾಗಿದೆ.. ಬಿಜೆಪಿಯ ಕಾರ್ಯಕರ್ತನಾಗಿದ್ದವನೊಬ್ಬ ಈಗ ಲಷ್ಕರೆ ತೈಯಬಾ ಸಂಘಟನೆಯ ಉಗ್ರಗಾಮಿಯಾಗಿರುವುದು ಬೆಳಕಿಗೆ ಬಂದಿದೆ.
ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಎಲ್‌ಇಟಿ ಸಂಘಟನೆಗೆ ಸೇರಿದ ಇಬ್ಬರು ಉಗ್ರಗಾಮಿಗಳನ್ನು ಭದ್ರತಾ ಪಡೆಗಳು ಬಂಧಿಸಿವೆ. ಈ ಇಬ್ಬರಲ್ಲಿ ಒಬ್ಬಾತ ಹಿಂದೆ ಬಿಜೆಪಿಯ ಕಾರ್ಯಕರ್ತನಾಗಿದ್ದನೆನ್ನಲಾಗಿದೆ.
ತಾಲಿಬ್ ಹುಸೇನ್ ಶಾ ಎಂಬ ಬಂಧಿತ ಉಗ್ರ, ಜಮ್ಮು ಪ್ರಾಂತ್ಯದ ಪಕ್ಷದ ಐಟಿ ಮತ್ತು ಸಾಮಾಜಿಕ ಮಾಧ್ಯಮದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದ. ಬಂಧಿತ ಉಗ್ರನನ್ನು ನನ್ನು ಬಿಜೆಪಿಯು ಮೇ 9, 2022 ರಂದು ನೇಮಿಸಿತ್ತು.
“ರಜೌರಿ ಜಿಲ್ಲೆಯ ಡ್ರಾಜ್ ಕೊಟ್ರಂಕದ ತಾಲಿಬ್ ಹುಸೇನ್ ಶಾರನ್ನು ಜಮ್ಮು ಪ್ರಾಂತ್ಯದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಐಟಿ ಮತ್ತು ಸಾಮಾಜಿಕ ಮಾಧ್ಯಮದ ನೂತನ ಉಸ್ತುವಾರಿಯಾಗಿ ತಕ್ಷಣವೇ ಜಾರಿಗೆ ಬರುವಂತೆ ನೇಮಿಸಲಾಗಿದೆ” ಎಂದು ಜಮ್ಮು ಮತ್ತು ಕಾಶ್ಮೀರದ ಅಲ್ಪಸಂಖ್ಯಾತ ಮೋರ್ಚಾ ಆದೇಶ ಹೊರಡಿಸಿತ್ತು.
ಜಮ್ಮು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದ್ರ ರೈನಾ ಸೇರಿದಂತೆ ಹಲವು ಬಿಜೆಪಿಯ ಹಿರಿಯ ನಾಯಕರೊಂದಿಗೆ ಹುಸೇನ್ ಶಾ ನಿಂತಿರುವ ಹಲವಾರು ಚಿತ್ರಗಳಿವೆ ಸದ್ಯ ವೈರಲ್ ಆಗುತ್ತಿದೆ.
ಉಗ್ರನೊಬ್ಬನಿಗೆ ಸದಸ್ಯತ್ವ ನಿಡಿದ್ದಷ್ಟೆ ಅಲ್ಲದೆ, ಆತನನ್ನು ಸಾಮಾಜಿಕ ಜಾಲತಾಣದ ಮುಖ್ಯಸ್ಥನನ್ನಾಗಿಸಿದ್ದಕ್ಕೆ ಬಿಜೆಪಿಯ ಸೈದ್ದಾಂತಿಕತೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಕಾಶ್ಮೀರದಲ್ಲಿನ ಅನೇಕ ಉಗ್ರರ ಜೊತೆ ಬಿಜೆಪಿಗೆ ನಂಟಿದೆ. ಬಿಜೆಪಿ ಅವಧಿಯಲ್ಲಿ ಇವರ ಚಟುವಟಿಕೆಗಳು ಹೆಚ್ಚಾಗಿರುತ್ತವೇ, ಈ ಬಗ್ಗೆ ತನಿಖೆಯಾಗಬೇಕು. ಕಾಶ್ಮೀರದಲ್ಲಿನ ಉಗ್ರರ ಅಟ್ಟಹಾಸವನ್ನು ತಡೆಯುತ್ತೇವೆ ಎನ್ನುತ್ತಿದ್ದ ಬಿಜೆಪಿಯೇ ಈಗ ಉಗ್ರರಿಗೆ ತನ್ನ ಪಕ್ಷದಲ್ಲಿ ಸ್ಥಾನವನ್ನು ನೀಡುತ್ತಿರುವುದು ಏನನ್ನು ಸೂಚಿಸುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.