ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 75 ಬಳಿ ಭೂಕುಸಿತ; ವಾಹನ ಸಂಚಾರ ಸ್ಥಗಿತ

ಸಕಲೇಶಪುರ: ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 75 ಬಳಿ ಭಾರಿ ಮಳೆ ಕಾರಣದಿಂದಾಗಿ ಭೂಕುಸಿತವಾಗಿದ್ದು, ರಸ್ತೆ ಬಂದ್ ಮಾಡಲಾಗಿದೆ.

ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 75 ದೊಡ್ಡತಪ್ಪಲು ಸಮೀಪ ಭೂಕುಸಿತ ಉಂಟಾಗಿ ಎರಡು ಕಾರು, ಒಂದು ಟಿಪ್ಪರ್ ಹಾಗೂ ಒಂದು ಟ್ಯಾಂಕರ್ ಕೆಸರಿನಲ್ಲಿ ಸಿಲುಕಿದ್ದು ಅದೃಷ್ಟವಷಾತ್ ಯಾವುದೆ ಜೀವಹಾನಿ ಸಂಭವಿಸಿಲ್ಲ.

ಇದನ್ನು ಓದಿ : ವಯನಾಡ್‌ನಲ್ಲಿ ಭಾರೀ ಭೂಕುಸಿತ, 47ಕ್ಕೂ ಹೆಚ್ಚು ಜನ ಮೃತ

ಭಾರಿ ಭೂಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 75ನ್ನು ಬಂದ್ ಮಾಡಲಾಗಿದ್ದು ಇದರಿಂದಾಗಿ ವಾಹನಗಳು ಹಲವು ಕಿ.ಮೀ ದೂರ ನಿಂತಲ್ಲೆ ನಿಲ್ಲುವಂತಾಗಿದೆ. ಊಟ ತಿಂಡಿ ಇಲ್ಲದೆ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಉಂಟಾಗಿದೆ.

ಈ ಪರಿಸರದಲ್ಲಿ ಕಳೆದ 15 ದಿನಗಳಿಂದ ಮಣ್ಣು ಕುಸಿಯುತ್ತಿದ್ದು, ಮಂಗಳವಾರ ಮತ್ತೆ ಮಣ್ಣು ಕುಸಿದಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ರಕ್ಷಣಾ ಸಿಬ್ಬಂದಿ ಜೆಸಿಬಿ ಮೂಲಕ‌ ಮೂಲಕ‌ ಮಣ್ಣು ತೆರವು ಮಾಡುತ್ತಿದ್ದಾರೆ.

ಇದನ್ನು ನೋಡಿ : ಶಿರೂರು ಗುಡ್ಡ ಕುಸಿತ : ಸ್ವಚ್ಚತಾ ಕಾರ್ಯದಲ್ಲಿ ತೊಡಗಿರುವ ಸಿಪಿಐಎಂ ಶಾಸಕರ, ನಾಯಕರ ಮಾದರಿ ನಡೆJanashakthi Media

 

Donate Janashakthi Media

Leave a Reply

Your email address will not be published. Required fields are marked *