ಬಿಜೆಪಿ ಸರ್ಕಾರಿ ವಕೀಲರ ಮದುವೆಯಲ್ಲಿ ಲಲಿತ್‌ ಮೋದಿ ಭಾಗಿ!

ಲಂಡನ್: ಭಾರತದ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ಅವರ ಮದುವೆಯಲ್ಲಿ ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ, ಭಾರತದಿಂದ ಪರಾರಿಯಾಗಿರುವ ಲಲಿತ್‌ ಮೋದಿ ಭಾಗವಹಿಸಿದ್ದು ಭಾರಿ ರಾಜಕೀಯ ವಿವಾದ ಹುಟ್ಟು ಹಾಕಿದೆ. ಹರೀಶ್‌ ಸಾಳ್ವೆ ಬಿಜೆಪಿ ಪರ ವಕೀಲರಾಗಿದ್ದು, ಕೇಂದ್ರ ಸರ್ಕಾರ ‘ಒಂದು ರಾಷ್ಟ್ರ, ಒಂದು ಚುನಾವಣೆ’ಯ ಕುರಿತ ಉನ್ನತ ಮಟ್ಟದ ಸಮಿತಿಯ ಭಾಗವಾಗಿದ್ದಾರೆ.

ಭಾನುವಾರ ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಬ್ರಿಟಿಷ್ ಸ್ನೇಹಿತೆ ಟ್ರಿನಾ ಅವರನ್ನು ಹರೀಶ್ ಸಾಳ್ವೆ ವಿವಾಹವಾಗಿದ್ದಾರೆ. ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರ ಆಪ್ತ ಉದ್ಯಮಿ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ, ಉಕ್ಕಿನ ಉದ್ಯಮಿ ಲಕ್ಷ್ಮಿ ಮಿತ್ತಲ್ ಮತ್ತು ಮಾಡೆಲ್ ಉಜ್ವಲಾ ರಾವತ್ ಸೇರಿದಂತೆ ಹಲವು ಅತಿಥಿಗಳು ಭಾಗವಹಿಸಿದ್ದರು. ಲಲಿತ್‌ ಮೋದಿ

ಇದನ್ನೂ ಓದಿ: ತಲೆ ತೆಗೆಯಲು 10 ಕೋಟಿ ರೂ. ಬದಲು ನನ್ನ ತಲೆ ಬಾಚಲು 10 ರೂ. ಬಾಚಣಿಗೆ ಸಾಕು: ಉದಯನಿಧಿ ಸ್ಟಾಲಿನ್

ಆದಾಗ್ಯೂ, ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರ ಉಪಸ್ಥಿತಿಯು ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ, ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) 753 ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಲಲಿತ್ ಮೋದಿ ಭಾರತದಿಂದ ಪರಾರಿಯಾಗಿದ್ದಾರೆ.

ಸಧ್ಯ, ಲಂಡನ್‌ನಲ್ಲಿ ನೆಲೆಸಿರುವ ಲಲಿತ್ ಮೋದಿ ಅವರು 2010ರಲ್ಲಿ ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ನಡುವೆಯೇ ಭಾರತದಿಂದ ಪರಾರಿಯಾಗಿದ್ದರು. ದೇಶದ ಹಿರಿಯ ವಕೀಲರಲ್ಲಿ ಒಬ್ಬರಾದ ಸಾಳ್ವೆ ಅವರ ವಿವಾಹದಲ್ಲಿ “ದೇಶದಿಂದ ಪರಾರಿಯಾಗಿರು ಆರೋಪಿಯೊಬ್ಬನ ಉಪಸ್ಥಿತಿ”ಯನ್ನು ಪ್ರತಿಪಕ್ಷಗಳು ಪ್ರಶ್ನಿಸಿವೆ. ಕೇಂದ್ರದ ಮೋದಿ ಸರ್ಕಾರವು ಅವರನ್ನು ಇತ್ತೀಚೆಗೆ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯಲ್ಲಿ ನೇಮಿಸಿದೆ.

ಬಿಜೆಪಿ ಪರ ವಕೀಲ ಹರೀಶ್‌ ಸಾಳ್ವೆ ಮದುವೆ ಸಮಾರಂಭದಲ್ಲಿ ಲಲಿತ್ ಮೋದಿ ಹಾಜರಿದ್ದಕ್ಕೆ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಸರ್ಕಾರಿ ಬಿಜೆಪಿ ವಕೀಲರು ಮೂರನೇ ಬಾರಿಗೆ ಮದುವೆಯಾಗುವುದರ ಬಗ್ಗೆ ನನಗೆ ಯಾವುದೆ ತಕರಾರಿಲ್ಲ… ಆದರೆ ಆತಂಕದ ವಿಚಾರವೇನೆಂದರೆ, ಭಾರತೀಯ ಕಾನೂನಿನಿಂದ ತಪ್ಪಿಸಿಕೊಂಡಿರುವ ಆರೋಪಿಯೊಬ್ಬ, ಮೋದಿ ಸರ್ಕಾರದ ನೆಚ್ಚಿನ ವಕೀಲರ ವಿವಾಹದಲ್ಲಿ ಉಪಸ್ಥಿತಿಯಿದ್ದು, ಸಂತೋಷ ಆಚರಿಸುತ್ತಿದ್ದಾರೆ. ಯಾರು ಯಾರಿಗೆ ಸಹಾಯ ಮಾಡುತ್ತಿದ್ದಾರೆ, ಯಾರನ್ನು ರಕ್ಷಿಸುತ್ತಿದ್ದಾರೆ ಎಂಬುದು ಈಗ ಪ್ರಶ್ನೆಯಾಗಿ ಉಳಿದೆ ಇಲ್ಲ” ಎಂದು ಪ್ರಿಯಾಂಕ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ‘ಪ್ರೆಸಿಡೆಂಟ್‌ ಆಫ್‌ ಭಾರತ್!’ | ‘ಇಂಡಿಯಾ’ ಹೆಸರನ್ನೆ ಬದಲಾಯಿಸಲು ಹೊರಟ ಬಿಜೆಪಿ ಸರ್ಕಾರ?

ಮಹಾರಾಷ್ಟ್ರ ಕಾಂಗ್ರೆಸ್‌ನ ಪ್ರೀತೇಶ್ ಷಾ ಅವರು ಸಾಳ್ವೆ ಅವರ ಮದುವೆಯಲ್ಲಿ ಲಲಿತ್ ಮೋದಿ ಅವರ ಉಪಸ್ಥಿತಿಯನ್ನು ಟೀಕಿಸಿದ್ದಾರೆ. “ನೀರವ್ ಮೋದಿ, ಲಲಿತ್ ಮೋದಿ ಅವರನ್ನು ಕಳ್ಳ ಎಂದಿದ್ದಕ್ಕೆ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಲಾಗಿತ್ತು. ಅದೇ ವೇಳೆ ಅದನ್ನು ಹರೀಶ್‌ ಸಾಳ್ವೆ ಅದನ್ನು ವಿರೋಧಿಸಿದ್ದರು. ಇತ್ತೀಚೆಗೆ ಮೋದಿ ಸರ್ಕಾರವು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಉನ್ನತ ಮಟ್ಟದ ಸಮಿತಿಯನ್ನು ರಚಿಸಿತು. ಆದರೆ ದೇಶದಿಂದ ಪರಾರಿಯಾಗಿರುವ ಲಲಿತ್ ಮೋದಿಯೊಂದಿಗೆ ಆನಂದಿಸುತ್ತಿರುವ ಹರೀಶ್ ಸಾಳ್ವೆ ಆ ಸಮಿತಿಯ ಭಾಗವಾಗಿದ್ದಾರೆ” ಎಂದು ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷ (ಎಎಪಿ) ಕೂಡ ಮದುವೆಯಲ್ಲಿ ಲಲಿತ್ ಮೋದಿಯವರ ಉಪಸ್ಥಿತಿಗೆ ಪ್ರತಿಕ್ರಿಯಿಸಿದ್ದು, ಇದು “ಪ್ರಧಾನಿ ಮೋದಿಯವರ ಖ್ಯಾತಿಗೆ ಕಪ್ಪು ಚುಕ್ಕೆ” ಎಂದು ಕರೆದಿದೆ. ಲಲಿತ್‌ ಮೋದಿ

ಲಲಿತ್ ಮೋದಿ ವಿವಾದ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2010 ರ ನಂತರ, ಹಣಕಾಸಿನ ಅಕ್ರಮಗಳು ಮತ್ತು ದುರ್ನಡತೆಯ ಆರೋಪದ ನಂತರ ಲಲಿತ್ ಮೋದಿಯನ್ನು ಬಿಸಿಸಿಐನಿಂದ ಅಮಾನತುಗೊಳಿಸಲಾಯಿತು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) 753 ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಲಲಿತ್ ಮೋದಿ ಆರೋಪಿಯಾಗಿದ್ದಾರೆ.

ಜಾರಿ ನಿರ್ದೇಶನಾಲಯ (ಇಡಿ) ಅವರ ವಿರುದ್ಧ ಮೊಕದ್ದಮೆ ದಾಖಲಿಸುವ ಸ್ವಲ್ಪ ಮೊದಲು, ತನಗೆ ಜೀವ ಬೆದರಿಕೆ ಇದೆ ಎಂದು ಉಲ್ಲೇಖಿಸಿ ಲಲಿತ್ ಮೋದಿ ಅವರು 2010ರ ಮೇ ತಿಂಗಳಲ್ಲಿ ಭಾರತದಿಂದ ಪಲಾಯನ ಮಾಡಿದ್ದರು. ಬಿಸಿಸಿಐ 2010ರ ಅಕ್ಟೋಬರ್‌ನಲ್ಲಿ ಲಲಿತ್ ಮೋದಿ ವಿರುದ್ಧ ಚೆನ್ನೈನಲ್ಲಿ ಪೊಲೀಸ್ ಕೇಸ್ ದಾಖಲಿಸಿತ್ತು.

ವಿಡಿಯೊ ನೋಡಿ: ಗೌರಿ ಕೊಂದವರು ಯಾರು? ಕೇಸ್ ಎಲ್ಲಿಗೆ ಬಂತು? – ವಿಶ್ಲೇಷಣೆ : ಕೆ.ನೀಲಾ Janashakthi Media

Donate Janashakthi Media

Leave a Reply

Your email address will not be published. Required fields are marked *